ಸುದ್ದಿಒನ್, ಚಳ್ಳಕೆರೆ,ಏಪ್ರಿಲ್.15 : ತಾಲ್ಲೂಕಿನ ತಳಕು ಹೋಬಳಿ ಕೋಡಿಹಳ್ಳಿ ಗ್ರಾಮದಲ್ಲಿ ಭಾನುವಾರ ಡಾ.ಬಿ.ಆರ್ ಅಂಬೇಡ್ಕರ್ ರವರ 133 ನೇಯ
ಜಯಂತಿಯನ್ನು ಸರಳವಾಗಿ ಆಚರಿಸಲಾಯಿತು.
ಸಮುದಾಯದ ಹಿರಿಯ ಮುಖಂಡರು ಪೂಜೆ ಸಲ್ಲಿಸಿ ಸಂವಿಧಾನ ಶಿಲ್ಪಿ , ಮಹಾ ನಾಯಕ ಡಾ.ಬಿ.ಆರ್ ಅಂಬೇಡ್ಕರ್ ರವರ ಫೋಟೋಗೆ ಪುಷ್ಪಾರ್ಚನೆ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ನಂತರ ಸಂಘದ ಅಧ್ಯಕ್ಷರು ಆದ ಶಿವಮೂರ್ತಿ ಟಿ. ಮಾತನಾಡಿ ಡಾ.ಬಿ. ಆರ್ ಅಂಬೇಡ್ಕರ್ ರವರು ನಮ್ಮ ದೇಶದ ಎಲ್ಲ ಸಮ ಸಮಾಜಕ್ಕೆ ಉತ್ತಮ ಸಂದೇಶ ಸಾರಿದ ಹಾಗೂ ಸಂವಿಧಾನ ನೀಡಿದ ಮಹಾನಾಯಕ, ಅವರ ತತ್ವ ಸಿದ್ಧಾಂತಗಳನ್ನು ಮತ್ತು ಅವರ ಜೀವನದ ಆದರ್ಶಗಳನ್ನು ಇಂದಿನ ಯುವಕರು ವಿದ್ಯಾರ್ಥಿಗಳು ಪಾಲಿಸಬೇಕು,ಅವರ ಜೀವನದ ಸಿದ್ದಾಂತ ಮತ್ತು ಹೋರಾಟಗಳೇ ನಮಗೆ ಮುಂದಿನ ಜೀವನದ ದಿಕ್ಸೂಚಿ ಗಳಾಗಿವೆ ಎಂದು ತಿಳಿಸಿದರು.
ನಂತರ ಎಲ್ಲರೂ ಸಂವಿಧಾನದ ಪೀಠಿಕೆಯನ್ನು ಓದಿ ಪ್ರತಿಜ್ಞೆ ಮಾಡಲಾಯಿತು. ನಂತರ ಕೇಕ್ ಕತ್ತರಿಸಿ ಬಂದಿರುವ ಎಲ್ಲ ಮಕ್ಕಳಿಗೆ ಸಿಹಿ ಹಂಚಲಾಯಿತು ಅಲ್ಲದೆ ಸಮುದಾಯದ ಎಲ್ಲರಿಗೂ ಭೋಜನ ವ್ಯವಸ್ಥೆ ಮಾಡಲಾಗಿ ತ್ತು ಎಲ್ಲರೂ ಕಾರ್ಯಕ್ರಮ ಕುರಿತು ಹರ್ಷ ವ್ಯಕ್ತಪಡಿಸಿದರು. ಅಲ್ಲದೆ ಇಂತಹ ಅರ್ಥ ಪೂರ್ಣ ಕಾರ್ಯಕ್ರಮಗಳು ವಿದ್ಯಾರ್ಥಿಗಳು ಮತ್ತು ಚಿಕ್ಕ ಮಕ್ಕಳ ಮನಸ್ಸಿನ ಮೇಲೆ ತುಂಬಾ ಪರಿಣಾಮಕಾರಿಯಾಗಿ ಬೀರುತ್ತವೆ ಎಂದರೆ ತಪ್ಪಾಗಲಾರದು.
ಈ ಕಾರ್ಯಕ್ರಮದಲ್ಲಿ ನಮ್ಮ ಸಮುದಾಯದ ಮುಖಂಡರಾದ ಸಣ್ಣ ನಾಗಯ್ಯ ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷರು ಆದ ಎಂ.ಏಚ್ ತಿಪ್ಪೇಸ್ವಾಮಿ, ಮಂಜುನಾಥ್, ಹನುಮಂತಪ್ಪ, ನಿಂಗಣ್ಣ,ಮೀಸೆ ಬಸಯ್ಯ, ದೊಡ್ಡ ದುರುಗಣ್ಣ, ತಿಪ್ಪೇಸ್ವಾಮಿ, ಗಂಗಣ್ಣ, ಪುಟ್ಟಣ್ಣ, ಮಾಜಿ ಗ್ರಾಮ ಪಂಚಾಯಿತಿ ಸದಸ್ಯರು ಆದ ಶ್ರೀಯುತ ಮಲ್ಲಯ್ಯ ಮತ್ತು ತಿಪ್ಪೇಸ್ವಾಮಿ.ಪಿ , ಬಿಲ್ ಕಲೆಕ್ಟರ್ ಮಲ್ಲಿಕಾರ್ಜುನಯ್ಯ.ಟಿ , ಲಿಂಗರಾಜ್. ಡಿ ಧನಂಜಯ್, ಕುಮಾರ ಸ್ವಾಮಿ, ರುದ್ರಮುನಿ,
ಎಂ.ಟಿ ಮಂಜುನಾಥ್, ದುರುಗೆಶ್, ಮೈಲಾರಿ ಮಾರಣ್ಣ, ಚಿದಾನಂದ್ ರವಿಕುಮಾರ್.ಜಿ, ರಾಜು ವಿಜಯ್.ಎಸ್, ಸುರೇಶ್ ಹಾಗೂ ಡಾ.ಬಿ.ಆರ್ ಅಂಬೇಡ್ಕರ್ ಯುವಕ ಸಂಘದ ಪದಾಧಿಕಾರಿಗಳು ಹಾಗೂ ಸದಸ್ಯರು ಕಾರ್ಯದರ್ಶಿಗಳು ಆದ ಶ್ರೀಧರ್.ಏಚ್, ಖಜಾಂಚಿ ಆದ ರಾಜು.ಡಿ ಮನೋಜ್ ಕುಮಾರ್, ದಯಾನಂದ್ ತಿಪ್ಪೇಸ್ವಾಮಿ.ಯು, ಅಭಿಷೇಕ್
ವಿಜಯ್ ಕುಮಾರ್. ಡಿ, ಅರುಣ್ ಕುಮಾರ್, ರಮೇಶ್.ಎಂ ಮಲ್ಲಿಕಾರ್ಜುನ್, ಗೋಪಿ, ಕೊಲ್ಲಾರಿ,ಕೋಟಿ, ಮಹೇಶ್.ಜಿ, ಸ್ವಾಮಿ , ನಿಂಗರಾಜು, ಪರಶುರಾಮ್. ಓ ಮಂಜು, ಮೋಹನ್, ಉಪೇಂದ್ರಶಿವಪ್ಪ,ನಂದೀಶ್, ಜಯಂತ್ ಗುರುಮೂರ್ತಿ, ತಿಪ್ಪೇಶ್, ನಿಂಗೇಶ್,ಡ್ಯಾನ್ಸರ್ ಮೈಕಲ್ ವೆಂಕಿ,
ನಾಗೇಶ್,ಕಿರಣ್ , ಕಣುಮೇಶ್ ಉಪಸ್ಥಿತರಿದ್ದರು.
ಈ ಕಾರ್ಯಕ್ರಮದಲ್ಲಿ ಮಹಾನಾಯಕ ಸಂವಿಧಾನ ಶಿಲ್ಪಿ ಡಾ|| ಬಿ.ಆರ್ ಅಂಬೇಡ್ಕರ್ ಯುವಕ ಸಂಘದ ಎಲ್ಲ ಪದಾಧಿಕಾರಿಗಳು ಸದಸ್ಯರು,ಯುವಕರು, ಯಜಮಾನರು,ಸಮಸ್ತ ನಾಗರೀಕ ಬಂಧುಗಳು ಭಾಗವಹಿಸಿದ್ದರು.