ಸುದ್ದಿಒನ್ : ಈ ಜಗತ್ತಿನಲ್ಲಿ ಪ್ರತಿಯೊಬ್ಬರೂ ಯಶಸ್ವಿಯಾಗಲು ಬಯಸುತ್ತಾರೆ. ಆದರೆ ಆ ಯಶಸ್ಸು ಸುಮ್ಮನೆ ಬರುವುದಿಲ್ಲ. ಸಾಕಷ್ಟು ಕಷ್ಟ ಪಡಬೇಕು. ಯಶಸ್ಸು ನಮ್ಮನ್ನು ಜೀವನದಲ್ಲಿ ಹೊಸ ಎತ್ತರಕ್ಕೆ ಕೊಂಡೊಯ್ಯುತ್ತದೆ. ಆದರೆ ವೈಫಲ್ಯವು ಭವಿಷ್ಯದ ಯೋಜನೆಗಳ ಮೇಲೆ ಪ್ರಭಾವ ಬೀರುತ್ತದೆ. ಜೀವನದಲ್ಲಿ ಒಂದು ಹೆಜ್ಜೆ ಹಿಂದಕ್ಕೆ ಇಡುವಂತೆ ಮಾಡುತ್ತದೆ. ಇದು ನಮ್ಮ ಆತ್ಮವಿಶ್ವಾಸವನ್ನು ಕುಗ್ಗಿಸುತ್ತದೆ. ಜೀವನದಲ್ಲಿ ಬಯಸಿದ ಗುರಿಯನ್ನು ತಲುಪಲು ಸಾಧ್ಯವಾಗುತ್ತಿಲ್ಲ ಎಂಬ ನೋವು ಯಾವಾಗಲೂ ಕಾಡುತ್ತದೆ. ಇದು ಆತ್ಮಗೌರವವನ್ನು ಕಡಿಮೆ ಮಾಡುವುದಲ್ಲದೆ ದೃಢವಾದ ಸಂಕಲ್ಪವನ್ನು ಕುಗ್ಗಿಸುತ್ತದೆ. ಆದರೆ ಇಲ್ಲಿ ಗಮನಿಸಬೇಕಾದ ಅಂಶವೆಂದರೆ ನಮ್ಮ ಜೀವನದಲ್ಲಿ ಕಲಿತ ಅಭ್ಯಾಸಗಳೇ ನಮ್ಮನ್ನು ಉನ್ನತ ಶಿಖರಗಳತ್ತ ಸಾಗುವಂತೆ ಮಾಡುತ್ತವೆ. ಜೀವನದ ಪ್ರತಿಯೊಂದು ಯಶಸ್ಸಿನ ಹಿಂದೆ ಕೆಲವು ಆರೋಗ್ಯಕರ ಅಭ್ಯಾಸಗಳಿವೆ.
ಸರಿಯಾದ ಗುರಿಗಳನ್ನು ಹೊಂದಿರಬೇಕು :
ಅನೇಕ ಜನರು ಹಿಂದೆ ಮುಂದೆ ಯೋಚಿಸದೆ ಅನೇಕ ಗುರಿಗಳನ್ನಿಟ್ಟುಕೊಳ್ಳುತ್ತಾರೆ. ಅವುಗಳನ್ನು ಮುಟ್ಟಲು ಸಾಧ್ಯವಾಗುತ್ತಾ ಇಲ್ಲವಾ ಎಂಬುದನ್ನು ಯೋಚಿಸುವುದೇ ಇಲ್ಲ. ಕೆಲವೊಮ್ಮೆ ಇತರರ ಒತ್ತಡದಿಂದಾಗಿ ಅನೇಕ ಜನರು ಸರಿಯಾದ ಗುರಿಯನ್ನು ಆಯ್ಕೆ ಮಾಡಲು ವಿಫಲರಾಗುತ್ತಾರೆ. ಇದು ವೈಫಲ್ಯಗಳಿಗೆ ಕಾರಣವಾಗುತ್ತದೆ. ನಮ್ಮ ಕಾರ್ಯಕ್ಷಮತೆಯನ್ನು ನಾವು ಅನುಮಾನಿಸುವಂತೆ ಮಾಡುತ್ತದೆ. ಆದ್ದರಿಂದ ಎಚ್ಚರಿಕೆಯಿಂದ ಪರಿಗಣಿಸಿದ ನಂತರ ಗುರಿಗಳನ್ನು ಆಯ್ಕೆಮಾಡಿಕೊಳ್ಳಬೇಕು.
ಆತ್ಮ ವಿಶ್ವಾಸ :
ನಮ್ಮ ಯಶಸ್ಸಿಗೆ ಆತ್ಮವಿಶ್ವಾಸವೂ ಮುಖ್ಯ. ಆತ್ಮವಿಶ್ವಾಸದ ಕೊರತೆಯಿರುವ ಜನರು ಇತರರಿಗೆ ಹೋಲಿಸಿದರೆ ತಾವು ಕೀಳು ಎಂದು ಭಾವಿಸುತ್ತಾರೆ. ಅಂತಹ ಜನರು ಭಯದಿಂದ ರಿಸ್ಕ್ ಗಳನ್ನು ತೆಗೆದುಕೊಳ್ಳುವುದಿಲ್ಲ. ಅಂತಹ ಸಂದರ್ಭಗಳಲ್ಲಿ ಅನೇಕ ಜನರು ಅನೇಕ ಅವಕಾಶಗಳನ್ನು ಕಳೆದುಕೊಳ್ಳುತ್ತಾರೆ. ಆದ್ದರಿಂದ ಧೈರ್ಯವಾಗಿರಿ.
ಪರಿಹಾರದ ಮೇಲೆ ಕೇಂದ್ರೀಕರಿಸಿ :
ಯಾವಾಗಲೂ ಪರಿಹಾರದ ಮೇಲೆ ಕೇಂದ್ರೀಕರಿಸಿ. ಕೆಲವರು ಯಾವಾಗಲೂ ಅದೇ ಸಮಸ್ಯೆಯಲ್ಲಿ ಸಿಲುಕಿಕೊಳ್ಳುತ್ತಾರೆ. ಇದರಿಂದಾಗಿ ಮುಂದೆ ಸಾಗಲು ಸಾಧ್ಯವಾಗುತ್ತಿಲ್ಲ. ಅವರು ಪರಿಹಾರಗಳನ್ನು ಹುಡುಕುವಲ್ಲಿ ಗಮನಹರಿಸುವುದಿಲ್ಲ, ಈ ಕಾರಣದಿಂದಾಗಿ ಅವರು ಮುಂದುವರಿಯಲು ಸಾಧ್ಯವಾಗುವುದಿಲ್ಲ.
ಧನಾತ್ಮಕ ಚಿಂತನೆ :
ನಕಾರಾತ್ಮಕ ಆಲೋಚನೆಗಳನ್ನು ಹೊಂದಿರುವ ಜನರು ಸಹ ಹೆಚ್ಚಿನ ಪ್ರಗತಿಯನ್ನು ಸಾಧಿಸಲು ಸಾಧ್ಯವಿಲ್ಲ. ನಕಾರಾತ್ಮಕ ಆಲೋಚನೆಗಳಿಂದ ಸುತ್ತುವರೆದಿರುವ ಜನರು ಯಾವಾಗಲೂ ಸಂತೋಷವಾಗಿರುವುದಿಲ್ಲ. ಅಂತಹ ಜನರು ಯಶಸ್ಸಿನ ಹತ್ತಿರ ಬಂದ ನಂತರವೂ ಅನೇಕ ಬಾರಿ ವಿಫಲರಾಗುತ್ತಾರೆ.