Notice: Undefined index: options in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಸಂವಿಧಾನ, ಪ್ರಜಾಪ್ರಭುತ್ವ ಉಳಿಸುವ ಉಪಾಯ ಹುಡುಕಬೇಕಿದೆ : ಮಾಜಿ ಸಚಿವ ಎಚ್.ಆಂಜನೇಯ

Facebook
Twitter
Telegram
WhatsApp

 

ಸುದ್ದಿಒನ್, ಚಿತ್ರದುರ್ಗ : ಏ.14 : ಸಂವಿಧಾನ ಮತ್ತು ಪ್ರಜಾಪ್ರಭುತ್ವ  ಅಪಾಯದಲ್ಲಿದ್ದು ಅದನ್ನು  ಉಳಿಸುವ  ಉಪಾಯ ಹುಡುಕಬೇಕಿದೆ. ಈ ನಿಟ್ಟಿನಲ್ಲಿ ಪ್ರಜೆಗಳು ಎಚ್ಚರಿಕೆಯ ಹೆಜ್ಜೆ ಇಡಬೇಕಿದೆ ಎಂದು ಮಾಜಿ ಸಚಿವ ಎಚ್.ಆಂಜನೇಯ ಹೇಳಿದರು.

ತಾಲೂಕಿನ ಸೀಬಾರದಲ್ಲಿರುವ ಕಚೇರಿಯಲ್ಲಿ ಸಂವಿಧಾನ ಶಿಲ್ಪಿ ಡಾ. ಬಿ. ಆರ್.ಅಂಬೇಡ್ಕರ್ ಅವರ 133ನೇ ಜಯಂತಿ ಕಾರ್ಯಕ್ರಮದಲ್ಲಿ  ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದರು.

ಕೇಂದ್ರ ಸರ್ಕಾರ ಸಂವಿಧಾನ ಬಸಲಾಯಿಸಲು ಹೊರಟಿದ್ದಾರೆ. ಈಗಾಗಲೇ ಸಂವಿಧಾನ ಆಶಯಗಳಿಗೆ ದೊಡ್ಡಪೆಟ್ಟು ಕೊಟ್ಟಿದೆ. ಅದಾನಿ ಮತ್ತು ಅಂಬಾನಿಯವರಿಗೆ ಹೆಚ್ಚು ಮನ್ನಣೆ ನೀಡಿದ್ದು, ಅಸಹಾಯಕ ಜನರನ್ನು  ತಳಪಾಯಕ್ಕೆ ತಳ್ಳುವ ಕೆಲಸ  ವ್ಯವಸ್ಥಿತವಾಗಿ ನಡೆಯುತ್ತಿದೆ. ಯಾವುದನ್ನು ಸಹ ಪ್ರಶ್ನೆ ಮಾಡುವಂತಿಲ್ಲ. ಸರ್ವಾಧಿಕಾರಿ ಧೋರಣೆ ಉತ್ತುಂಗದಲ್ಲಿದೆ. ಇದಕ್ಕೆ ಕಡಿವಾಣ ಹಾಕುವ ಜವಾಬ್ದಾರಿ ತಮ್ಮ ಮತ ಚಲಾಯಿಸುವುದರ ಮೇಲಿದೆ ಎಂದರು.

ಡಾ.ಬಿ.ಆರ್.ಅಂಬೇಡ್ಕರ್ ಒಂದು ಜಾತಿ, ಧರ್ಮಕ್ಕೆ ಸೀಮಿತರಾದವರಲ್ಲ. ದೇಶದ ಎಲ್ಲ ಜನರಿಗೆ ಸಮಾನ ನ್ಯಾಯ ಮತ್ತು ಹಕ್ಕನ್ನು ನೀಡಲು ಒತ್ತು ಕೊಟ್ಟಿದ್ದರು. ಅದರಲ್ಲೂ ಪ್ರಮುಖವಾಗಿ ಮಹಿಳೆಯರಿಗಾಗಿ ಲೋಕಸಭೆಯಲ್ಲಿ  ಹಿಂದು ಕೋಡ್ ಬಿಲ್ಲನ್ನು ಮಂಡಿಸಿದರು. ಅಂದು ಅಂದಿನ ಮನುವಾದಿಗಳನ್ನು ಅದನ್ನು ತಿರಸ್ಕರಿಸಿದರು. ಇದರಿಂದ ಮಹಿಳೆಯರಿಗಾಗಿ ನ್ಯಾಯ ಕೊಡಿಸಲು ಆಗಲಿಲ್ಲ ಎಂದು ಮನನೊಂದು ತಮ್ಮ ಮಂತ್ರಿ ಸ್ಥಾನಕ್ಕೆ  ರಾಜೀನಾಮೆ ಕೊಟ್ಟು ಹೊರಬಂದು ಹೋರಾಟ ನಡೆಸಿದರು.

ಸತಿ ಸಹಗಮನ ಪದ್ದತಿ, ಮಹಿಳೆಯರ ಶೋಷಣೆ, ಶಿಕ್ಷಣದಿಂದ ಹೆಣ್ಣನ್ನು ದೂರ ಇಡುವುದು ಮನುವಾದಿಗಳ ಗುರಿಯಾಗಿದೆ. ಇವೆಲ್ಲವುಗಳ ವಿರುದ್ಧ ಹೋರಾಡಿದ ಅಂಬೇಡ್ಕರ್ ಅವರ ಆಶಯಗಳನ್ನು ಜನರು ಅರಿತುಕೊಳ್ಳಬೇಕು ಎಂದರು.

ಅಸ್ಪೃಶ್ಯತೆ ಮತ್ತು ಅಸಮಾನತೆಯ ಆಂದೋಲನ ಪ್ರಾರಂಭಿಸಿ ಶೋಷಿತ ವರ್ಗಕ್ಕೆ ನ್ಯಾಯಒದಗಿಸಲು ಮಹಾನ್ ಹೋರಾಟ ನಡೆಸಿದ ದೇಶದ ಮಹಾನಾಯಕ ಡಾ.ಬಿ.ಆರ್.ಅಂಬೇಡ್ಕರ್. ಅವರು ದೇಶಕ್ಕೆ ಸಂವಿಧಾನವನ್ನು ನೀಡಿದ ಸಮಿತಿಯ ಅಧ್ಯಕ್ಷರಾಗಿ, ಸಮಾಜಶಾಸ್ತ್ರಜ್ಞರಾಗಿ, ಅರ್ಥಶಾಸ್ತ್ರಜ್ಞರಾಗಿ, ಇತಿಹಾಸಕಾರರಾಗಿ ಅನೇಕ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ್ದಾರೆ. ಹಿಂದುಳಿದವರನ್ನು ಸಮಾಜದ ಮುಖ್ಯ ವಾಹಿನಿಗೆ ಕರೆತರುವ ಎಲ್ಲರ ಜೊತೆಗೆ ಕರೆದೊಯ್ಯುವ ಉದ್ದೇಶ ಅವರದಾಗಿತ್ತು ಎಂದರು.

ಈ ಸಂದರ್ಭದಲ್ಲಿ  ಜಿ.ಪಂ. ಮಾಜಿ ಸದಸ್ಯರಾದ ಆರ್.ನರಸಿಂಹರಾಜು, ಚಿತ್ರದುರ್ಗ ಎಸ್.ಸಿ ವಿಭಾಗದ ಬ್ಲಾಕ್ ಅಧ್ಯಕ್ಷ ಅನಿಲ್ ಕೋಟಿ, ಎಲ್‍ಐಸಿ ಈರಣ್ಣಯ್ಯ, ಮುಖಂಡರಾದ ಜಾಲಿಕಟ್ಟೆ ತಿಪ್ಪೇಸ್ವಾಮಿ, ಬೋರನಹಳ್ಳಿ ಚೇತನ್, ತೇಕಲವಟ್ಟಿ ನಾಗರಾಜ್ ಉಪಸ್ಥಿತರಿದ್ದರು.

 

ಬಸವಣ್ಣನವರ ತತ್ವ ಸಿದ್ಧಾಂತ ಸಂವಿಧಾನದಲ್ಲಿ ಕಾಣಬಹುದು : ಮಾಜಿ ಸಚಿವ ಎಚ್.ಆಂಜನೇಯ


ಸುದ್ದಿಒನ್, ಹೊಳಲ್ಕೆರೆ: ಏ.14 :  ಬಸವಣ್ಣನವರ ತತ್ವ ಸಿದ್ಧಾಂತ, ಸಮಸಮಾಜ, ಜಾತ್ಯಾತೀತ, ಭ್ರಾತೃತ್ವ ಎಲ್ಲವನ್ನು ಡಾ.ಬಿ.ಆರ್.ಅಂಬೇಡ್ಕರ್ ರಚಿಸಿದ ಸಂವಿಧಾನದಲ್ಲಿ ಕಾಣಬಹುದಾಗಿದೆ ಎಂದು ಮಾಜಿ ಸಚಿವ ಎಚ್.ಆಂಜನೇಯ ಹೇಳಿದರು.

ತಾಲೂಕಿನ ಸಾಸಲು ಗ್ರಾಮದ ಜಿಪಂ ಮಾಜಿ ಅಧ್ಯಕ್ಷೆ ಗಿರಿಜಮ್ಮ ಅವರ ಮನೆಯ ಅಂಗಳದಲ್ಲಿ ಭಾನುವಾರ ವೀರಶೈವ ಸಮುದಾಯದ ವತಿಯಿಂದ ಆಯೋಜಿಸಿದ ಸಂವಿಧಾನ ಶಿಲ್ಪಿ ಡಾ. ಬಿ.ಆರ್.ಅಂಬೇಡ್ಕರ್ ಅವರ 133ನೇ ಜಯಂತಿ ಕಾರ್ಯಕ್ರಮದಲ್ಲಿ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ  ಪುಷ್ಪನಮನ ಸಲ್ಲಿಸಿ ಮಾತನಾಡಿದರು.

ಡಾ.ಬಿ.ಆರ್.ಅಂಬೇಡ್ಕರ್ ಮತ್ತು ಬಸವಣ್ಣನವರ ಚಿಂತನೆಗಳು ಒಂದೇ ಆಗಿದ್ದವು. ಅವರ ಆಶಯಗಳನ್ನು ನಾವೆಲ್ಲರೂ ಅರಿತುಕೊಳ್ಳಬೇಕು. ಸಂಪತ್ತು ಸಮಾನ ಹಂಚಿಕೆ ಮತ್ತು ಸಮಸಮಾಜ ನಿರ್ಮಾಣ ಆಗಬೇಕು ಎನ್ನುವ ಕನಸು ಬಸವಣ್ಣನವರದ್ದಾಗಿತ್ತು. ಅದೇ ರೀತಿ ಅಂಬೇಡ್ಕರ್ ಅವರ ಕನಸು ಆಗಿತ್ತು. ಅವರು ಸಂವಿಧಾನ ರಚಿಸುವ ವೇಳೆ ಅವುಗಳನ್ನು ಈಡೇರಿಸುವ ಪ್ರಯತ್ನ ಮಾಡಿದ್ದಾರೆ ಎಂದರು.

ಪ್ರಸ್ತುತ ಸಂವಿಧಾನಕ್ಕೆ ಬಹಳ ದೊಡ್ಡ ಕಂಟಕ ಎದುರಾಗಿದೆ.  ಅಂಬೇಡ್ಕರ್ ಅಂದರೆ ಒಂದು ಜಾತಿ, ಧರ್ಮಕ್ಕೆ ಸೀಮಿತಗೊಳಿಸುವ ಹುನ್ನಾರ ನಡೆಯುತ್ತಿವೆ. ಇಂತಹ ಸಂದರ್ಭದಲ್ಲಿ ವೀರಶೈವ ಲಿಂಗಾಯತ ಸಮುದಾಯ ತಮ್ಮ ಮನೆಯ ಅಂಗಳದಲ್ಲಿ ಅಂಬೇಡ್ಕರ್ ಜಯಂತಿ ಆಚರಿಸುತ್ತಿರುವುದು ನಾಡಿಗೆ ಉತ್ತಮ ಸಂದೇಶ. ಅವರು ಅಂಬೇಡ್ಕರ್ ಜಯಂತಿ ಆಚರಿಸಬೇಕು ಮಾದಿಗ ಮತ್ತು ದಲಿತ ಸಮುದಾಯ ಬಸವಣ್ಣ ಜಯಂತಿ ಆಚರಿಸಬೇಕು ಈ ಮೂಲಕ ಸಮುದಾಯದ ಮಧ್ಯೆ ಕಂದಕ ಏರ್ಪಡಿಸುವಂತವರಿಗೆ ಉತ್ತರ ಕೊಡಬೇಕು ಎಂದರು.

ಡಾ.ಬಿ.ಆರ್ ಅಂಬೇಡ್ಕರ್ ಅವರು ಹಾಕಿಕೊಟ್ಟ ತತ್ವ ಸಿದ್ದಾಂತಗಳನ್ನು ನಮ್ಮಲ್ಲಿ ನಾವುಗಳು ಮೈಗೂಡಿಸಿಕೊಂಡಾಗ ಮಾತ್ರ ಸಮಾಜದಲ್ಲಿ ಅಸಮಾನತೆ ಅಸ್ಪೃಶ್ಯತೆ, ನಿವಾರಣೆ ಆಗಲು ಸಾಧ್ಯ, ಅದು ಈಗಿನ ದಿನಗಳಲ್ಲಿ ಅತ್ಯಗತ್ಯವಾಗಿದೆ. ದೇಶಕ್ಕೆ ಸಂವಿಧಾನದ ಕೊಡುಗೆ ನೀಡಿರುವ ಅಂಬೇಡ್ಕರ್ ಅವರಿಗೆ ಗೌರವ ನಮನ ಸಲ್ಲಿಸುವ ಕೆಲಸ ನಮ್ಮೆಲ್ಲರಿಂದ ಆಗಬೇಕು ಎಂದರು.

ಮುತ್ತುಗದೂರು ಗ್ರಾಪಂ ಅಧ್ಯಕ್ಷೆ ನೀಲಮ್ಮ ಮಾತನಾಡಿ, ಸಂವಿಧಾನದ ಉಳಿವು ನಮ್ಮ ಬದುಕನ್ನು ಅವಲಂಭಿಸಿದೆ, ಕೇಂದ್ರದಲ್ಲಿ ಇರುವ ಸರ್ವಾರ್ಧಿಕಾರಿ ಆಡಳಿತವನ್ನು ಕಿತ್ತೇಸೆದಾಗ ಮಾತ್ರ ಸಂವಿಧಾನದ ಆಶಯಗಳನ್ನು ಈಡೇರಿಸಲು ಸಾಧ್ಯ ಎಂದು ಹೇಳಿದರು.

ತಾಪಂ ಮಾಜಿ ಸದಸ್ಯ ಓಂಕಾರಸ್ವಾಮಿ ಮಾತನಾಡಿ, ಪ್ರಸ್ತುತ ದಿನಮಾನಗಳಲ್ಲಿ ಕೇಂದ್ರ ಸರ್ಕಾರ ಅಂದ್ರೆ ಅದಾನಿ, ಅಂಬಾನಿ ಎನ್ನುವಂತರ ಕೇವಲ ನಾಲ್ಕಾರು ಮಂದಿ ಕೈಯಲ್ಲಿದೆ. ನ್ಯಾಯಯುತವಾದ ಬೇಡಿಕೆ ಕೇಳುವ ರೈತರನ್ನು, ಶೋಷಿತರನ್ನು ದೇಶದ್ರೋಹಿಗಳು ಎಂದು ಬಿಂಬಿಸುತ್ತಿದ್ದಾರೆ. ವೈಜ್ಞಾನಿಕ ಬೆಲೆ ನೀಡಿ ಎಂದು ಕೇಳಿದ ರೈತರಮೇಲೆ ಗುಂಡು ಹಾರಿಸಲಾಗುತ್ತಿದೆ. ನೊಂದ ಜನರ ಹಕ್ಕುಗಳನ್ನು ಕಸಿದುಕೊಳ್ಳುತ್ತಿದ್ದಾರೆ. ಇವುಗಳಿಗೆಲ್ಲ ಕಡಿವಾಣ ಹಾಕಲು ಅಂಬೇಡ್ಕರ್ ಕೊಟ್ಟಿರುವ ಮತದಾನದ ಅಸ್ತ್ರವನ್ನು ಜನರು ಬಳಕೆ ಮಾಡಿಕೊಳ್ಳಬೇಕಿದೆ ಎಂದರು.

ಈ ಸಂದರ್ಭದಲ್ಲಿ  ಜಿಪಂ ಮಾಜಿ ಅಧ್ಯಕ್ಷ ಶಿವಪುರ ಶಿವಕುಮಾರ್. ಮಾಜಿ ಉಪಾಧ್ಯಕ್ಷ ಗಂಗಾಧರ್, ಮಾಜಿ ಸದಸ್ಯರಾದ ಡಿ.ಕೆ.ಶಿವಮೂರ್ತಿ, ರಂಗಸ್ವಾಮಿ, ಆರ್.ನರಸಿಂಹರಾಜು, ಲೋಹಿತ್ ಕುಮಾರ್, ಸಮಾಜದ ಹಿರಿಯ ಮುಖಂಡ ರಂಗಯ್ಯ, ರುದ್ರೇಗೌಡ, ಗೋಡೆಮನೆ ಹನುಮಂತಪ್ಪ ಉಪಸ್ಥಿತರಿದ್ದರು.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಸಿಇಎನ್ ಪೊಲೀಸರ ದಾಳಿ : ಅಂತರ್ ರಾಜ್ಯ ಗಾಂಜಾ ಪೆಡ್ಲರ್ ಬಂಧನ

ಸುದ್ದಿಒನ್, ಚಿತ್ರದುರ್ಗ, ನವೆಂಬರ್. 22 : ಆಂದ್ರಪ್ರದೇಶದ ವಿಶಾಖಪಟ್ಟಣಂ ನಿಂದ ಗಾಂಜಾವನ್ನು ತಂದು ಚಿತ್ರದುರ್ಗ ನಗರಕ್ಕೆ ಬಂದು ಗಾಂಜಾ ಮಾರಾಟ ಮಾಡುತ್ತಿದ್ದ ಡ್ರಗ್ಸ್‌ ಪೆಡ್ಲರ್‌ನನ್ನು ಸಿಇಎನ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ಬಿಹಾರದ ಹರಿ ಓಂಕುಮಾರ್(24

ಪೆಟ್ರೋಲ್ ಬಂಕಿನಲ್ಲಿ ವಂಚನೆ ಆರೋಪ : ಗ್ರಾಹಕರು ಹಾಗೂ ಸಿಬ್ಬಂದಿಗಳ ನಡುವೆ ಮಾತಿನ ಚಕಮಕಿ

  ವರದಿ ಮತ್ತು ಫೋಟೋ ಕೃಪೆ ಸುರೇಶ್ ಬೆಳಗೆರೆ ಮೊ : 97398 75729 ಸುದ್ದಿಒನ್, ಚಳ್ಳಕೆರೆ, ನವೆಂಬರ್. 22 : ಬೈಕ್ ಗಳಿಗೆ ಪೆಟ್ರೋಲ್ ಹಾಕುವ ವೇಳೆ ಗ್ರಾಹಕರಿಗೆ ಇಲ್ಲಿನ ಸಿಬ್ಬಂದಿ ವಂಚನೆ

ಅಕ್ರಮ ಕಸಾಯಿ ಖಾನೆ ಬಂದ್ ಮಾಡಿ : ದಾದಾ ಪೀರ್ ಆಗ್ರಹ : ವಿಡಿಯೋ ವೈರಲ್..!

ಸುದ್ದಿಒನ್, ಹಿರಿಯೂರು : ಅಕ್ರಮವಾಗಿ ಕಸಾಯಿ ಖಾನೆ ನಡೆಸುತ್ತಿರುವವರ ವಿರುದ್ಧ ದಾದಾ ಪೀರ್ ಎಂಬುವವರು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ. ದಾದಾ ಪೀರ್ 6ನೇ ವಾರ್ಡ್ ನಲ್ಲಿ ವಾಸಿಸುವವ ವ್ಯಕ್ತಿಯಾಗಿದ್ದಾರೆ. ಕಸಾಯಿ ಖಾನೆಯಿಂದ ಮಕ್ಕಳು ಅನಾರೋಗ್ಯಕ್ಕೆ

error: Content is protected !!