ದಾವಣಗೆರೆಯಲ್ಲಿ ಕಾಂಗ್ರೆಸ್ ಸೇರಿದ RSS ಕಟ್ಟಾಳು ಟಿ ಗುರುಸಿದ್ದೇಗೌಡ

suddionenews
1 Min Read

ದಾವಣಗೆರೆ: ಲೋಕಸಭಾ ಚುಬಾವಣೆಯ ಪ್ರಚಾರ ಜೋರಾಗಿದೆ. ಕೆಲವೊಂದು ಕ್ಷೇತ್ರಗಳಲ್ಲಿ ಅಭ್ಯರ್ಥಿಗಳ ವಿಚಾರವಾಗಿಯೇ ಅಸಮಾಧಾನ ಹೊಗೆಯಾಡುತ್ತಿದ‌ಎ. ಅದರಲ್ಲೂ ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲಿ ಈ ಬಾರಿ ಹಾಲಿ ಸಂಸದ ಸಿದ್ದೇಶ್ವರದ ಬದಲಿಗೆ ಬಿಜೆಪಿ ಅವರ ಪತ್ನಿಗೆ ಟಿಕೆಟ್ ನೀಡಿದೆ. ಇದು ಬಿಜೆಪಿ ನಾಯಕರಲ್ಲೇ ಅಸಮಾಧಾನ ಉಂಟು ಮಾಡಿದೆ. ರೇಣುಕಾಚಾರ್ಯ ಕೋಪವಂತು ಇನ್ನು ತಣ್ಣಗಾಗುತ್ತಿಲ್ಲ.

ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅವರು ಸಂಧಾನ ಮಾಡುವುದಕ್ಕೆ ಪ್ರಯತ್ನ ಪಟ್ಟರು ಯಾವುದೆರ ರೀತಿಯ ಪ್ರಯೋಜನವಾಗಿಲ್ಲ. ಇದೀಗ ಆರ್ ಎಸ್ ಎಸ್ ನ ಕಟ್ಟಾಳು ಎನಿಸಿಕೊಂಡಿದ್ದಂತ, ಮಾಜಿ ಶಾಸಕ ಟಿ ಗುರುಸಿದ್ದನಗೌಡ, ಇದೀಗ ಬಿಜೆಪಿ ತೊರೆದು ಕಾಂಗ್ರೆಸ್ ಸೇರಿರುವುದು, ದಾವಣಗೆರೆ ಬಿಜೆಪಿಯಲ್ಲಿಯೇ ಶಾಕ್ ಆಗಿದೆ.

ದಾವಣಗೆರೆಯ ಜಗಳೂರು ಕ್ಷೇತ್ರದ ಮಾಜಿ ಶಾಸಕ ಟಿ ಗುರುಸಿದ್ದನಗೌಎ ಅವರ ನಿವಾಸಕ್ಕೆ ಎಸ್ ಎಸ್ ಮಲ್ಲಿಕಾರ್ಜುನ ಭೇಟಿ ನೀಡಿದ್ದರು. ಈ ವೇಳೆ ಕಾಂಗ್ರೆಸ್ ಗೆ ಸೇರ್ಪಡೆ ಮಾಡಿಕೊಂಡಿದ್ದಾರೆ. ಗುರುಸಿದ್ದನಗೌಎ ಪುತ್ರ ಡಾ.ರವಿಕುಮಾರ್ ಅವರು ಕೂಡ ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ. ಈ ವೇಳೆ ಮಾತನಾಡಿರುವ ಎಸ್ ಎಸ್ ಮಲ್ಲಿಕಾರ್ಜುನ, ದಾವಣಗೆರೆ ಬಿಜೆಪಿಯಲ್ಲಿ ಉಸಿರು ಕಟ್ಟುವ ವಾತಾವರಣವಿದೆ. ಹೀಗಾಗಿ ಕಟ್ಟಾ ಆರ್ ಎಸ್ ಎಸ್ ವ್ಯಕ್ತಿಯಾಗಿದ್ದ ಗುರುಸಿದ್ದನಗೌಡರು ಕಾಂಗ್ರೆಸ್ ಸೇರಿದ್ದಾರೆ. ಗುರುಸಿದ್ದನಗೌಡ್ರು ಹಾಗೂ ಅವರ ಬೆಂಬಲಿಗರು ಕಾಂಗ್ರೆಸ್ ಸೇರಿರುವುದರಿಂದ ನಮಗೆ ಆನೆ ಬಲ ಬಂದಂತೆ ಆಗಿದೆ. ಅವರುಗಳ ಮಾರ್ಗದರ್ಶನದಲ್ಲಿ ನಾವೂ ನಡೆಯುತ್ತೇವೆ ಎಂದಿದ್ದಾರೆ.

ಇದೆ ವೇಳೆ ಮಾತನಾಡಿದ ಗುರುಸಿದ್ಧನಗೌಡ ಅವರು, ಮಾಜಿ ಸಿಎಂ ಯಡಿಯೂರಪ್ಪ ಅವರು ಕೆಜೆಪಿ ಮೂಡಿನಿಂದ ಹೊರಗೆ ಬಂದಿಲ್ಲ. ಸಂಸದ ಸಿದ್ದೇಶ್ವರ ಸರ್ವಾಧಿಕಾರಿ ವರ್ತನೆಯಿಂದ ನನಗೆ ಬೇಸರವಾಗಿದೆ. ಇದೆ ಕಾರಣಕ್ಕೆ ನಾನು ಬಿಜೆಪಿ ಬಿಟ್ಟು ಕಾಂಗ್ರೆಸ್ ಸೇರಿದ್ದೇನೆ ಎಂದಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *