ಚಿತ್ರದುರ್ಗ. ಏ.10: ಪಿಯುಸಿ ಫಲಿತಾಂಶ ಪ್ರಕಟವಾಗಿದ್ದು ಚಿತ್ರದುರ್ಗ ಜಿಲ್ಲೆಯ ವಿದ್ಯಾರ್ಥಿಗಳು ಉತ್ತಮ ಸಾಧನೆ ತೋರಿದ್ದಾರೆ.
ಕಲಾ ವಿಭಾಗದಲ್ಲಿ ಚಳ್ಳಕೆರೆ ತಾಲೂಕು ನಾರಾಯಣಪುರ ಗ್ರಾಮದ ಎಸ್.ಎಲ್.ಹೆಚ್.ಆರ್ ಸಂಯುಕ್ತ ಪದವಿ ಪೂರ್ವ ಕಾಲೇಜಿನ ಅರ್ಚಿತ.ಜಿ 600 ಅಂಕಗಳಿಗೆ 582 ಅಂಕಗಳಿಸಿ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿದ್ದಾರೆ.
ಮೊಳಕಾಲ್ಮೂರು ತಾಲೂಕಿನ ಚಿಕ್ಕೋಬನಹಳ್ಳಿ ಗ್ರಾಮದ ಶ್ರೀ ಆಂಜನೇಯ ಪಿಯು ಕಾಲೇಜನಿ ವಿದ್ಯಾರ್ಥಿನಿ ಅಲ್ಫಿಯಾ ಬಾನು.ಇ 579 ಹಾಗೂ ಹೊಸದುರ್ಗ ನಗರದ ಎಸ್.ಜೆ.ಎಂ ಸ್ವತಂತ್ರ ಪಿಯು ಕಾಲೇಜಿನ ವಿದ್ಯಾರ್ಥಿ ಶರತ್ ಕುಮಾರ್ 573 ಅಂಕಗಳಿಸಿ ಅನುಕ್ರಮವಾಗಿ ದ್ವಿತೀಯ ಹಾಗೂ ತೃತೀಯ ಸ್ಥಾನ ಪಡೆದಿದ್ದಾರೆ.
ವಾಣಿಜ್ಯ ವಿಭಾಗದಲ್ಲಿ ಚಳ್ಳಕೆರೆ ನಗರದ ಶ್ರೀ ವಾಸವಿ ಪಿಯು ಕಾಲೇಜಿನ ವಿದ್ಯಾರ್ಥಿ ಸೈಯದ್ ಫಯಾಜ್ ಖಾನ್.ಕೆ 600 ಅಂಕಗಳಿಗೆ 593 ಅಂಕಗಳಿಸಿ ಪ್ರಥಮ ಸ್ಥಾನ ಗಳಿಸಿದ್ದಾನೆ.
ಚಿತ್ರದುರ್ಗ ಸಮೀಪದ ಸಿಬಾರದ ಗುತ್ತಿನಾಡು ನಿಲಯದ, ವಿಶ್ವ ಮಾನವ ಸಂಯುಕ್ತ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ ರಮ್ಯಾ.ಡಿ.ಎಸ್ 584 ಹಾಗೂ ಹಿರಿಯೂರು ತಾಲೂಕಿನ ನಂದಿಹಳ್ಳಿ ಆದಿವಾಲ ಗ್ರಾಮದ ಏನಿಸಿಯನಟ್ ಪಿಯು ಕಾಲೇಜಿನ ವಿದ್ಯಾರ್ಥಿನಿ ಜನ್ಮುನ್ನಿಸ್ಸಾ.ಡಿ 583 ಅಂಕಗಳಿಸಿ ಅನುಕ್ರಮವಾಗಿ ದ್ವಿತೀಯ ಹಾಗೂ ತೃತೀಯ ಸ್ಥಾನ ಪಡೆದಿದ್ದಾರೆ.
ವಿಜ್ಞಾನ ವಿಭಾಗದಲ್ಲಿ ಚಿತ್ರದುರ್ಗ ನಗರದ ಶ್ರೀರಂಗನಾಥ ಪಿಯು ಕಾಲೇಜಿನ ವಿದ್ಯಾರ್ಥಿನಿ ಐಶ್ವರ್ಯ.ಜಿ.ಟಿ 600 ಅಂಕಗಳಿಗೆ 587 ಅಂಕಗಳನ್ನು ಗಳಿಸಿ ಪ್ರಥಮ ಸ್ಥಾನ ಪಡೆದಿದ್ದಾರೆ. ನಗರದ ಎಸ್ ಆರ್ ಎಸ್ ಪಿಯು ಕಾಲೇಜಿನ ವಿದ್ಯಾರ್ಥಿನಿ ನೇಹ.ಎಸ್ 586 ಹಾಗೂ ಚಿನ್ಮೂಲಾದ್ರಿ ಪಿಯು ಕಾಲೇಜಿನ ವಿದ್ಯಾರ್ಥಿನಿ ಹುಸೇನ್ ಗರಿ ದಾಫಿಯಾ 585 ಅಂಕ ಗಳಿಸಿ ಕ್ರಮವಾಗಿ ದ್ವಿತೀಯ ಹಾಗೂ ತೃತೀಯ ಸ್ಥಾನ ಪಡೆದಿದ್ದಾರೆ.
ರ‌್ಯಾಂಕ್ ಪಡೆದ ವಿದ್ಯಾರ್ಥಿಗಳಲ್ಲಿ ವಿದ್ಯಾರ್ಥಿನಿಯರೇ ಮೇಲುಗೈ ಸಾಧಿಸಿದ್ದಾರೆ.