ಚಿತ್ರದುರ್ಗ. ಏ.10: ಕಳೆದ ಮಾರ್ಚ್ ತಿಂಗಳಿನಲ್ಲಿ ನಡೆದ ದ್ವಿತೀಯ ಪಿ.ಯು.ಸಿ ವಾರ್ಷಿಕ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದೆ. ಚಿತ್ರದುರ್ಗ ಜಿಲ್ಲೆಯಲ್ಲಿ ಕಲಾ, ವಾಣಿಜ್ಯ ಹಾಗೂ ವಿಜ್ಞಾನ ವಿಭಾಗಗಳಿಂದ ಒಟ್ಟು 13,348 ವಿದ್ಯಾರ್ಥಿಗಳ ಪರೀಕ್ಷೆ ಬರೆದಿದ್ದರು. ಈ ಪೈಕಿ 9734 ವಿದ್ಯಾರ್ಥಿಗಳು ಉತ್ತೀರ್ಣಗೊಂಡಿದ್ದಾರೆ. ಚಿತ್ರದುರ್ಗ ಜಿಲ್ಲೆಯಲ್ಲಿ ಶೇ.72.92 ರಷ್ಟು ವಿದ್ಯಾರ್ಥಿಗಳ ಉತ್ತೀರ್ಣರಾಗುವುದರೊಂದಿಗೆ ರಾಜ್ಯದಲ್ಲಿ 31 ಸ್ಥಾನವನ್ನು ಜಿಲ್ಲೆ ಪಡೆದುಕೊಂಡಿದೆ.
ಕಲಾ ವಿಭಾಗದಲ್ಲಿ ಜಿಲ್ಲೆಗೆ ಶೇ.57.79 ಫಲಿತಾಂಶ ಲಭ್ಯವಾಗಿದ್ದು, ಪರೀಕ್ಷೆ ಬರೆದ 3990 ವಿದ್ಯಾರ್ಥಿಗಳ ಪೈಕಿ 2306 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ವಾಣಿಜ್ಯ ವಿಭಾಗದಲ್ಲಿ ಜಿಲ್ಲೆಗೆ ಶೇ.75.07 ಫಲಿತಾಂಶ ಬಂದಿದ್ದು, ಪರೀಕ್ಷೆ ಬರೆದ 3437 ವಿದ್ಯಾರ್ಥಿಗಳ ಪೈಕಿ 2580 ವಿದ್ಯಾರ್ಥಿಗಳು ಉತ್ತೀರ್ಣರಾಗಿದಾರೆ. ವಿಜ್ಞಾನ ವಿಭಾಗದಲ್ಲಿ ಶೇ.81.88 ಫಲಿತಾಂಶ ಲಭ್ಯವಾಗಿದ್ದು, ಪರೀಕ್ಷೆ ಬರೆದ 5921 ವಿದ್ಯಾರ್ಥಿಗಳ ಪೈಕಿ 4848 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.
ಇದರ ಹೊರತಾಗಿ ಪರೀಕ್ಷೆಗೆ ಹಾಜರಾದ 965 ಪುನಾರವರ್ತಿತ ವಿದ್ಯಾರ್ಥಿಗಳ ಪೈಕಿ 402 ಹಾಗೂ 385 ಖಾಸಗಿ ವಿದ್ಯಾರ್ಥಿಗಳ ಪೈಕಿ 123 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. 2023ರ ನೇ ಸಾಲಿನಲ್ಲಿ ಪಿ.ಯು.ವಾರ್ಷಿಕ ಪರೀಕ್ಷೆಯಲ್ಲಿ ಜಿಲ್ಲೆಗೆ ಶೇ.69.5 ರಷ್ಟು ಫಲಿತಾಂಶ ಲಭ್ಯವಾಗಿತ್ತು.