ಕೇಂದ್ರ ಸರ್ಕಾರ ಜನರ ಆರೋಗ್ಯಕ್ಕೆ ಅನುದಾನ ಹೆಚ್ಚಿಸಬೇಕು : ಡಾ. ಪಿ.ಟಿ.ವಿಜಯಕುಮಾರ್

1 Min Read

ಸುದ್ದಿಒನ್, ಚಿತ್ರದುರ್ಗ, ಏಪ್ರಿಲ್.07 : ಕೇಂದ್ರ ಸರ್ಕಾರ ಜನರ ಆರೋಗ್ಯಕ್ಕೆ ಅನುದಾನ ಹೆಚ್ಚಿಸಬೇಕು ಎಂದು ಭಾರತೀಯ ವೈದ್ಯಕೀಯ ಸಂಘದ ಜಿಲ್ಲಾಧ್ಯಕ್ಷ ಡಾ. ಪಿ.ಟಿ.ವಿಜಯಕುಮಾರ್ ತಿಳಿಸಿದರು.

ಭಾರತೀಯ ವೈದ್ಯಕೀಯ ಸಂಘದ ಹೊಳಲ್ಕೆರೆ ಶಾಖೆಯನ್ನು ಐ.ಎಂ.ಎ ರಾಜ್ಯಾಧ್ಯಕ್ಷರಾದ ಡಾ.ಎಸ್.ಶ್ರೀನಿವಾಸ್ ಉದ್ಘಾಟಿಸಿದರು.

ಡಾ. ಪಿ.ಟಿ.ವಿಜಯಕುಮಾರ್ ಮಾತನಾಡುತ್ತಾ ಜನರ ಆರೋಗ್ಯಕ್ಕೆ ಬೇರೆ ಬೇರೆ ದೇಶಗಳಲ್ಲಿ ಸರ್ಕಾರಗಳು 5 ರಿಂದ 7 ರ ತನಕ ಜಿ.ಡಿ.ಪಿ ಯಲ್ಲಿ ಅನುದಾನವನ್ನು ಒದಗಿಸುತ್ತಾರೆ. ಆದರೆ, ಕೇಂದ್ರ ಸರ್ಕಾರ 2.5 ಆಯವ್ಯಯದಲ್ಲಿ ಇಡುವಂತಹ ಅನುದಾನ ಜನರ ಆರೋಗ್ಯ ಮತ್ತು ಮೂಲಭೂತ ಸೌಕರ್ಯಕ್ಕೆ ಸಾಕಾಗುವುದಿಲ್ಲ, ಆರೋಗ್ಯ ಮತ್ತು ಶಿಕ್ಷಣವನ್ನು ಎಲ್ಲರಿಗೂ ಒದಗಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ ಕನಿಷ್ಠ 5ರಷ್ಟು ಅನುದಾನವನ್ನು ಹೆಚ್ಚಿಸಿ ಭರಿಸಬೇಕು ಎಂದು ತಿಳಿಸಿದರು.

ಆಯುರ್ವೇದ, ಯುನಾನಿ, ಹೋಮಿಯೋಪತಿ ಮತ್ತು ಸಿದ್ದ ವೈದ್ಯಕೀಯ ಪದ್ಧತಿಗಳಲ್ಲಿ 06 ತಿಂಗಳ ವೃತ್ತಿ ತರಬೇತಿ ನೀಡುವುದು ಸರಿಯಲ್ಲ. ಆರು ತಿಂಗಳಲ್ಲಿ ಮನುಷ್ಯನ ತುರ್ತು ಚಿಕಿತ್ಸೆ ಸೇರಿದಂತೆ ಯಾವುದೇ ಖಾಯಿಲೆಯ ಬಗ್ಗೆ ಅಧ್ಯಯನ ಮಾಡಲು ಸಾಧ್ಯವಿರುವುದಿಲ್ಲ. ಹಾಗಾಗಿ ಆರು ತಿಂಗಳ ತರಬೇತಿ ಪಡೆದು ಚಿಕಿತ್ಸೆ ನೀಡಿ, ಮನುಷ್ಯರ ಪ್ರಾಣದ ಜೊತೆ ಚೆಲ್ಲಾಟವಾಡುವುದು ಸರಿಯಲ್ಲ, ಹಾಗಾಗಿ ಅವರಿಗೆ ತುರ್ತು ಚಿಕಿತ್ಸೆಗಳ ಬಗ್ಗೆ ಯಾವುದೇ ಅರಿವು ಇಲ್ಲದೇ ಇರುವ ಕಾರಣ ಈ ಪದ್ಧತಿಯನ್ನ ಜಾರಿಗೆ ತರಬಾರದು ಎಂದು ಹೇಳಿದರು.

ಡಾ. ಎಂ.ವಿ.ರಶ್ಮಿ ಅವರು ಮೊಟ್ಟ ಮೊದಲ ಬಾರಿಗೆ ವೈಜ್ಞಾನಿಕ ಅಧಿವೇಶನವನ್ನ ಏರ್ಪಡಿಸಿ ನಡೆಸಿದರು. ವಾಸವಿ ಲ್ಯಾಬೋರೋಟರಿಯ ನಿರ್ದೇಶಕರಾದ ಹೆಚ್.ವಿ.ವಾಣಿ ಮತ್ತು ಡಾ. ಸಿ.ನಾರಾಯಣಮೂರ್ತಿಯವರ ಪ್ರಾಯೋಜಕತ್ವದಡಿಯಲ್ಲಿ ನಡೆಯಿತು.

ಕಾರ್ಯಕ್ರಮದಲ್ಲಿ ಐ.ಎಂ.ಎ ರಾಜ್ಯಾಧ್ಯಕ್ಷರಾದ ಡಾ. ಎಸ್.ಶ್ರೀನಿವಾಸ್ ಚಿತ್ರದುರ್ಗ ಐ.ಎಂ.ಎ ಕಾರ್ಯದರ್ಶಿಯಾದ ಡಾ. ಕೆ.ಎಂ.ಬಸವರಾಜ್ ಚರ್ಮರೋಗ ತಜ್ಞ ಡಾ. ನಾಗಾರಾಜ್‌ನಾಯ್ಕ, ಹೊಳಲ್ಕೆರೆ ಐ.ಎಂ.ಎ ಶಾಖೆಯ ಅಧ್ಯಕ್ಷರಾದ ಡಾ. ಹೆಚ್.ಎಸ್.ಶಿವಣ್ಣ, ಕಾರ್ಯದರ್ಶಿ ಡಾ. ಸಿ.ಹೆಚ್.ಮಂಜುನಾಥ, ಖಜಾಂಚಿ ಡಾ. ವಿನಯ್, ಸಿ.ಸಜ್ಜನ್ ಸೇರಿದಂತೆ ಮತ್ತಿತರರು ಭಾಗವಹಿಸಿದ್ದರು.

Share This Article
Leave a Comment

Leave a Reply

Your email address will not be published. Required fields are marked *