ವರದಿ ಮತ್ತು ಫೋಟೋ : ಸುರೇಶ್ ಪಟ್ಟಣ್
ಚಿತ್ರದುರ್ಗ, (ನ.10) : ಮಾನವನ ಮನಸ್ಸು ಶುದ್ದವಾಗಬೇಕಾದರೆ ಗುರುಗಳ ಸಾಂಗತ್ಯ ಆಗತ್ಯ ಇದೆ ಎಂದು ಆದಿಚುಂಚನಗಿರಿಯ ಡಾ. ನಿರ್ಮಾಲಾನಂದ ಶ್ರೀಗಳು ತಿಳಿಸಿದರು.
ನಗರದ ಕಬೀರಾನಂದಾಶ್ರಮದ ಪೀಠಾಧ್ಯಕ್ಷರಾದ ಶ್ರೀ ಶಿವಲಿಂಗಾನಂದ ಶ್ರೀಗಳ ಜನ್ಮ ದಿನದ ಮಹೋತ್ಸವದ ಅಂಗವಾಗಿ ಶ್ರೀಮಠದ ಆವರಣದಲ್ಲಿ ಭಕ್ತಾಧಿಗಳು ಏರ್ಪಡಿಸಿದ್ದ ಅಭಿವಂದನಾ ಸಮಾರಂಭದ ಸಾನಿಧ್ಯವಹಿಸಿ ಆರ್ಶೀವಚನ ನೀಡಿದರು.
ಮಾನವವ ಮನಸ್ಸು ಶುದ್ದವಾಗಿರಬೇಕು.ಯಾವುದೇ ರೀತಿಯ ಮಲೀನತೆಯಿಂದ ಕೂಡಿರಬಾರದು, ಮನಸ್ಸು ಶುದ್ದವಾಗಿರದಿದ್ದರೆ ಕೆಲಸದಲ್ಲಿ ಆಸಕ್ತಿಯನ್ನು ಮೂಡಿಸುವುದಿಲ್ಲ. ಶುದ್ದವಾದ ಮನಸ್ಸಿನಿಂದ ಕೆಲಸಗಳು ಸರಾಗವಾಗಿ ಆಗುತ್ತದೆ. ಮಾನಸ ಸರೋವರದಲ್ಲಿ ನೀರು ಯಾವ ರೀತಿ ತಿಳಿಯಾಗಿ ನಮ್ಮ ಬಿಂಬ ನಮಗೆ ಕಾಣಿಸುತ್ತದೆಯೋ ಅದೇ ರೀತಿ ನಮ್ಮ ಮನಸ್ಸು ಸಹಾ ತಿಳಿಯಾಗಿ ಇದ್ದಾಗ ಮಾತ್ರ ಉತ್ತಮವಾದ ಜೀವನ ಸಾಧ್ಯವಿದೆ ಇದಕ್ಕೆ ಗುರುಗಳ ಸಾಂಗತ್ಯ ಆಗತ್ಯ ಇದೆ ಆಗಾಗ ಇಂತಹ ಕಾರ್ಯಕ್ರಮಗಳಲ್ಲಿ ನಡೆದು ಆದರಲ್ಲಿ ತಾವುಗಳು ಸಕ್ರಿಯವಾಗಿ ಭಾಗವಹಿಸುವು ಅಗತ್ಯವಾಗಿದೆ ಎಂದು ಡಾ. ನಿರ್ಮಾಲಾನಂದ ಶ್ರೀಗಳು ತಿಳಿಸಿದರು.
ಶಿವಲಿಂಗಾನಂದ ಶ್ರೀಗಳು ಎಲ್ಲರಿಗೂ ಸಹಾ ಅಚ್ಚುಮೆಚ್ಚಿನವರಾಗಿದ್ದಾರೆ. ಯಾವುದೇ ರೀತಿಯ ವಂಚನೆ, ಕಪಟ, ಮೋಸ,ಆಹಂಕಾರ,ದ್ವೇಷ,ಮೇಲು-ಕೀಳು ಎಂಬ ಭಾವನೆಯನ್ನು ತೋರಿಸಿದೆ ಆಶ್ರಮಕ್ಕೆ ಬರುವವರೆಲ್ಲರನ್ನು ಸಮಾನವಾಗಿ ನೋಡುವ ಮಾತೃ ಹೃದಯವನ್ನು ಶ್ರೀಗಳು ಹೊಂದಿದ್ದಾರೆ. ನಮ್ಮ ಹಿರಿಯ ಶ್ರೀಗಳು ಇದ್ದಾಗ ಶಿವಲಿಂಗಾನಂದ ಶ್ರೀಗಳಿಂದ ವೇದಾಂತವನ್ನು ಪಾರಾಯಣ ಮಾಡಿಸುತ್ತಾ ತಮಗೆ ಅನುಮಾನ ಬಂದಲ್ಲಿ ಅದಕ್ಕೆ ಪರಿಹಾರವನ್ನು ಕಂಡುಕೊಳ್ಳುವುದರ ಮೂಲಕ ನಮಗೂ ಸಹಾ ಕೇಳಿಸುವ ಸೌಭಾಗ್ಯವನ್ನು ಕರುಣಿಸಿದ್ದರು ಎಂದು ಶ್ರೀಗಳು ಹೇಳಿದರು.
ಚಿತ್ರದುರ್ಗದಲ್ಲಿ ಇರುವ ಗೋಶಾಲೆಯನ್ನು ಇನ್ನಷ್ಟು ಚೆನ್ನಾಗಿ ಮಾಡಬೇಕೆಂದು ಇಲ್ಲಿನ ಜನತೆ, ಮುಖಂಡರು ಅಭಿಪ್ರಾಯಪಟ್ಟಿದ್ದಾರೆ. ಇದರ ವಿಸ್ತರಣೆ ಕಾರ್ಯವನ್ನು ಮುಂದಿನ ದಿನದಲ್ಲಿ ಕೈಗೆತ್ತಿಕೊಳ್ಳಲಾಗುವುದು ಎಂದು ಡಾ. ನಿರ್ಮಾಲಾನಂದ ಶ್ರೀಗಳು ತಿಳಿಸಿದರು.
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಮಾಜಿ ಸಚಿವ ಎಚ್.ಅಂಜನೇಯ ಮಾತನಾಡಿ, ಆದಿಚುಂಚುನಗಿರಿಯ ಬಾಲಗಂಗಾಧರನಾಥ ಶ್ರೀಗಳು ನಮ್ಮ ಕಬೀರಾನಂದಾಶ್ರಮಕ್ಕೆ ಉತ್ತಮವಾದ ಸ್ವಾಮಿಗಳನ್ನು ನೀಡುವುದರ ಮೂಲಕ ಒಂದು ಕಾಲದಲ್ಲಿ ಯಾರಿಗೂ ಸಹಾ ಗೊತ್ತಿಲ್ಲದೆ ಇದ್ದ ಕಬೀರಾನಂದಾಶ್ರಮವನ್ನು ಇಂದು ಎಲ್ಲೆಡೆ ಗುರುತಿಸುವಂತ ಕಾರ್ಯವನ್ನು ಮಾಡಿದ್ದಾರೆ. ಶ್ರೀಗಳು ಇಲ್ಲಿಗೆ ಆಗಮಿಸಿದ ಮೇಲೆ ಶಿಕ್ಷಣಕ್ಕೆ ಒತ್ತು ನೀಡುವುದರ ಮೂಲಕ ವಿವಿಧ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪನೆ ಮಾಡುವುದರ ಮಕ್ಕಳ ಶೈಕ್ಷಣಿಕ ಪ್ರಗತಿಗೆ ದಾರಿ ಮಾಡಿಕೊಟ್ಟಿದ್ದಾರೆ ಎಂದರು.
ಇದೇ ರೀತಿ ವೃದ್ದಾಶ್ರಮವನ್ನು ಸ್ಥಾಪನೆ ಮಾಡಿ ಮುಪ್ಪಿನ ಕಾಲದಲ್ಲಿ ದಿಕ್ಕಿಲ್ಲದವರಿಗೆ ಆಸರೆಯಾಗಿದ್ದಾರೆ. ಇದರೊಂದಿಗೆ ಗೋಶಾಲೆಯನ್ನು ಮುಂಚಿನಿಂದಲೂ ನಡೆಸಿಕೊಂಡು ಬಂದಿದ್ದು ಇದನ್ನು ಮತ್ತಷ್ಟು ಚನ್ನಾಗಿ ಮಾಡಬೇಕಿದೆ. ಇದು ಮುಂದಿನ ದಿನಮಾನದಲ್ಲಿ ಪುಣ್ಯ ಕ್ಷೇತ್ರವಾಗಿ ಮಾರ್ಪಾಡಾಗಬೇಕಿದೆ ಎಂದು ಅಂಜನೇಯ ತಿಳಿಸಿದರು.
ಭಕ್ತಾಧಿಗಳಿಂದ ಅಭೀವಂದನೆಯನ್ನು ಸ್ವೀಕಾರ ಮಾಡಿ ಮಾತನಾಡಿದ ಶ್ರೀ ಶಿವಲಿಂಗಾನಂದ ಶ್ರೀಗಳು, ಗುರುಗಳನ್ನು ಭಕ್ತಾಧಿಗಳು ದೇವರನ್ನಾಗಿ ನೋಡಬೇಕಿದೆ ಮಾನವರನ್ನಾಗಿ ನೋಡಬಾರದು, ದೈವ ಭಕ್ತಿಯಿಂದ ನೋಡಿದಾಗ ಅಂತಃಕರಣಕ್ಕೆ ಮುಕ್ತಿ ದೊರಕುತ್ತದೆ. ಸ್ವಾಮಿಗಳ ಬರುವಿಕೆಯನ್ನು ಕಾಯುವುದರಿಂದ ಜನ್ಮ ಸಾರ್ಥಕವಾಗುತ್ತದೆ ಎಂದರು.
ಆದಿಚುಂಚನಗಿರಿಯ ಡಾ.ಬಾಲಗಂಗಾಧರನಾಥ್ ಶ್ರೀಗಳ ದೂರದೃಷ್ಟಿ ತುಂಬಾ ಚನ್ನಾಗಿದೆ ಇದರಿಂದಲೇ ಇಂದು ಆಶ್ರಮಕ್ಕೆ ಕೋಟ್ಯಾಂತರ ರೂಗಳ ಆಸ್ತಿಯನ್ನು ಮಾಡಿಕೊಟ್ಟಿದ್ದಾರೆ. ಅವರು ಕೈ ಇಟ್ಟ ಜಾಗವೆಲ್ಲಾ ನಮಗೆ ಬಂಗಾರವಾಗಿ ಪರಿಣಿಮಿಸಿದೆ. ಚಿತ್ರದುರ್ಗ ನಗರ ಸಂಕಷ್ಟದಲ್ಲಿದ್ದಾಗ ರಾಗಿ, ಕುಡಿಯಲು ನೀರನ್ನು ನೀಡುವುದರ ಮೂಲಕ ಜನತೆಗೆ ಸಹಾಯದ ಹಸ್ತವನ್ನು ಚಾಚಿದ್ದರು ಎಂದು ಶ್ರೀಗಳು ಮಾಡಿದ ಕೆಲಸವನ್ನು ಶಿವಲಿಂಗಾನಂದ ಶ್ರೀಗಳ ಸ್ಮರಣೆ ಮಾಡಿಕೊಂಡರು.
ಕಾರ್ಯಕ್ರಮದಲ್ಲಿ ಹಾಸನದ ಶಂಭುನಾಥ್ ಶ್ರೀಗಳು, ಆದಿಹಳ್ಳಿಯ ಶಿವಪುತ್ರ ಶ್ರೀಗಳು, ಸವಿತಾ ಸಮಾಜದ ಶ್ರೀಧರನಾಥ ಸರಸ್ವತಿ ಶ್ರೀಗಳು, ಹನುಮಂತನಾಥ ಶ್ರೀಗಳು, ನಗರಸಭಾ ಸದಸ್ಯರಾದ ವೆಂಕಟೇಶ್, ಚಂದ್ರಶೇಖರ್, ನಗರಾಭೀವೃದ್ದಿ ಪ್ರಾಧಿಕಾರದ ಸದಸ್ಯರಾದ ಓಂಕಾರ್, ಶ್ರೀಮತಿ ರೇಖಾ, ಗುತ್ತಿಗೆದಾರರಾದ ಶಿವಕುಮಾರ್, ಜಿ.ಪಂ.ಮಾಜಿ ಸದಸ್ಯ ನರಸಿಂಹರಾಜು, ಭದ್ರಾವತಿ ಆದಿಚುಂಚನಗಿರಿಯ ಶಾಖಾ ಮಠದ ರಾಮುಮೂರ್ತಿ, ಮುದ್ದೇನಹಳ್ಳಿಯ ಸೇವಾಲಾಲ್ ಆಶ್ರಮದ ಅರುಣ್ ಗೂರೂಜಿ ಸೇರಿದಂತೆ ಇತರರು ಭಾಗವಹಿಸಿದ್ದರು.
ಪ್ರಾಧ್ಯಾಪಕರಾದ ನೆಲ್ಲಿಕಟ್ಟೆ ಸಿದ್ದೇಶ್ ರವರು ಶ್ರೀಗಳ ಬಗ್ಗೆ ಉಪನ್ಯಾಸ ನೀಡಿದರು. ಇದೇ ಸಂದರ್ಭದಲ್ಲಿ ಮಗುವೊಂದರ ತುಲಾಭಾರ ಕಾರ್ಯಕ್ರಮವೂ ಸಹಾ ನಡೆಯಿತು.
ಸುಬ್ರರಾಯ್ ಭಟ್ಟು ವೇಧ ಘೋಷ ಮಾಡಿದರೆ, ಶ್ರೀಮತಿ ಸುಮನಾ ಪ್ರಾರ್ಥಿಸಿದರು, ಪ್ರಶಾಂತ್ ಸ್ವಾಗತಿಸಿದರು. ಮುರುಗೇಶ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.