ಲೋಕಸಭೆಯ ಬಳಿಕವೂ ಸರ್ಕಾರ ಉಳಿಯಲು ಡಿಕೆಶಿ ಏನು ಪ್ಲ್ಯಾನ್ ಮಾಡಿದ್ದಾರೆ..?

suddionenews
1 Min Read

ಬೆಂಗಳೂರು: ಲೋಕಸಭಾ ಚುಬಾವಣೆಯ ಬಳಿಕ ಕಾಂಗ್ರೆಸ್ ಪಕ್ಷದಲ್ಲಿರುವ ಹಲವರು ನಮ್ಮ ಪಕ್ಷಕ್ಕೆ ಬರಲಿದ್ದಾರೆ. ಕಾಂಗ್ರೆಸ್ ಸರ್ಕಾರ ಪತನವಾಗುವುದು ಗ್ಯಾರಂಟಿ ಎಂದು ಬಿಜೆಪಿ ನಾಯಕರು ಹೇಳುತ್ತಲೆ ಇದ್ದಾರೆ. ಹಾಗಂತ ಬಿಜೆಪಿ ನಾಯಕರ ಮಾತನ್ನು ನಿರ್ಲಕ್ಷ್ಯ ಮಾಡುವಂತೆಯೂ ಇಲ್ಲ. ಈ ಬಗ್ಗೆ ಕಾಂಗ್ರೆಸ್ ಕೂಡ ಹೈ ಅಲರ್ಟ್ ಆಗಿದೆ.

 

ಲೋಕಸಭೆ ಚುನಾವಣೆ ಬಳಿಕ ಸರ್ಕಾರ ಪತನವಾಗಲಿದೆ ಎಂದು ಬಿಜೆಪಿ ನಾಯಕರು ಪ್ರಚಾರ ಮಾಡುತ್ತಿದ್ದಾರೆ. ಬಿಜೆಪಿ ನಾಯಕರ ಪ್ರಚಾರ ಸಿಕ್ಕ ಬಳಿಕ ಕೈ ಪಡೆ ಹೈ ಅಲರ್ಟ್ ಆಗಿದ್ದು, ಕಾಂಗ್ರೆಸ್ ಸಚಿವರಿಗೆ, ಶಾಸಕರಿಗೆ, ಮುಖಂಡರಿಗೆ ಡಿಕೆಶಿ ಅಭಯ ನೀಡಿದ್ದಾರೆ. ಎರಡನೇ ಹಂತದಲ್ಲಿ ನಡೆಯುವ ಚುನಾವಣೆ ಕ್ಷೇತ್ರಗಳ ಮುಖಂಡರ ಸಭೆ ಕರೆದಿದ್ದಾರೆ. ನಿನ್ನೆ ಕೆಪಿಸಿಸಿ ಕಚೇರಿಯಲ್ಲಿ ನಡೆದಿದ್ದ ಸಭೆಯಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ಅಭಯ ನೀಡಿದ್ದಾರೆ.

 

ಗೇಮ್ ನಂಬರ್ ಹೇಳುವ ಮೂಲಕ ಕಾಂಗ್ರೆಸ್ ಮುಖಂಡರಿಗೆ ವಿಶ್ವಾಸ ತುಂಬಿರುವ ಡಿಸಿಎಂ ಡಿಕೆ ಶಿವಕುಮಾರ್, ನಮ್ಮ ಜೊತೆಗೆ ಬಿಜೆಪಿ- ಜೆಡಿಎಸ್ ಶಾಸಕರು ಸಂಪರ್ಕದಲ್ಲಿ ಇದ್ದಾರೆ. ಬಿಜೆಪಿಯ 17, ಜೆಡಿಎಸ್ ನ 13, ಒಟ್ಟು 30 ಜನ ಶಾಸಕರು ಸಂಪರ್ಕದಲ್ಲಿ ಇದ್ದಾರೆ‌.. ರಾಜಕಾರಣದಲ್ಲಿ ಇದು ಸರಿಯಲ್ಲ ಎಂದು ನಾವು ಸುಮ್ಮನೆ ಇದ್ದೇವೆ. ಚುನಾವಣೆ ಬಳಿಕ ಸರ್ಕಾರ ಇರಲ್ಲ ಎಂದು ಬಿಜೆಪಿ ನಾಯಕರ ಪ್ರಚಾರ ಮಾಡುತ್ತಿದ್ದಾರೆ. ನಾವು ಸಹ ಸುಮ್ಮನೆ ಕುಳಿತಿಲ್ಲ, ಒಂದು ವೇಳೆ ಬಿಜೆಪಿ ನಮ್ಮ ಶಾಸಕರಿಗೆ ಕೈ ಹಾಕಿದ್ರೆ ,ನಾವು ಸಹ ಅವರ ಶಾಸಕರನ್ನ ಕರೆ ತರುತ್ತವೆ. ಹಾಗಾಗಿ ನಿಮಗೆ ಯಾವುದೇ ಆತಂಕ ಬೇಡ ಎಲ್ಲರೂ ಧೈರ್ಯವಾಗಿ ಕೆಲಸ ‌ಮಾಡಿ. ಲೋಕಸಭಾ ಚುನಾವಣೆಯಲ್ಲಿ ಹೆಚ್ಚು ಸ್ಥಾನ ಗೆಲ್ಲುವ ಕಡೆ ಗಮನ ಕೊಡಿ ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *