ನಟ ಸುಶಾಂತ್ ಆತ್ಮಹತ್ಯೆ ಮಾಡಿಕೊಂಡ ಮನೆ ಖರೀದಿಸಿದ ‘ಕೇರಳ ಸ್ಟೋರಿ’ ನಟಿ

2020ರಲ್ಲಿ ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ತಮ್ಮ ನಿವಾಸದಲ್ಲಿಯೇ ಆತ್ಮಹತ್ಯೆಗೆ ಶರಣಾಗಿದ್ದರು. ಅಂದಿನಿಂದ ಇಂದಿನವರೆಗೂ ಆ ಅಪಾರ್ಟ್ಮೆಂಟ್ ಖಾಲಿಯಾಗಿಯೇ ಉಳಿದಿತ್ತು. ಯಾರು ಕೂಡ ಖರೀದಿಸುವ ಸಾಹಸ ಮಾಡಿರಲಿಲ್ಲ. ಇದೀಗ ಅದಾ ಶರ್ಮಾ ಈ ಅಪಾರ್ಟ್ಮೆಂಟ್ ಖರೀದಿಸಿದ್ದಾರೆ. ಸುಶಾಂತ್ ವಾಸವಾಗಿದ್ದು 4 ಬಿಎಚ್​ಕೆ ಮನೆ. ಸಮುದ್ರಕ್ಕೆ ಮುಖ ಮಾಡಿ ಈ ಮನೆ ಇದ್ದು, 2500 ಸ್ಕ್ವೇರ್ ಫೀಟ್ ಇದೆ. 6ನೇ ಅಂತಸ್ತಿನಲ್ಲಿ ಈ ಮನೆ ಇದೆ. 2022ರಲ್ಲಿ ಈ ಮನೆ ಮಾರಾಟದ ಬಗ್ಗೆ ಸುದ್ದಿ ಬಿತ್ತರ ಆಗಿತ್ತು.

ದಿ ಕೇರಳ ಸ್ಟೋರಿ ಸಿನಿಮಾ ಮೂಲಕ ಅದಾ ಶರ್ಮಾ ಸಿಕ್ಕಾಪಟ್ಟೆ ಫೇಮಸ್ ಆಗಿದ್ದರು. ಇದೀಗ ಸುಶಾಂತ್ ಅಪಾರ್ಟ್ಮೆಂಟ್ ಖರೀದಿ ಮಾಡುವ ಮೂಲಕ ಮತ್ತೊಮ್ಮೆ ಸುದ್ದಿಯಾಗಿದ್ದಾರೆ. ಮುಂಬೈನ ಮೋಂಟ್ ಬ್ಲಾಂಕ್ ಅಪಾರ್ಟ್ಮೆಂಟ್ ನಲ್ಲಿ ಸುಶಾಂತ್ ಉಳಿದುಕೊಂಡಿದ್ದರು. ಇದೇ ಫ್ಲ್ಯಾಟ್ ಅನ್ನು ಈಗ ಅದಾ ಶರ್ಮಾ ಖರೀದಿ ಮಾಡಿದ್ದಾರೆ.

ಈ ಬಗ್ಗೆ ಮಾತನಾಡಿರುವ ಅದಾ ಶರ್ಮಾ, ನಾನು ಆ ಮನೆ ನೋಡಲು ಹೋದಾಗ ಮಾಧ್ಯಮದವರ ಸಂಪೂರ್ಣ ಗಮನ ನನ್ನ ಮೇಲಿತ್ತು. ಖಾಸಗಿ ವಿಚಾರಗಳನ್ನು ನಾನು ನನ್ನಲ್ಲೇ ಇಟ್ಟುಕೊಳ್ಳಲು ಬಯಸುತ್ತೇನೆ. ನನ್ನ ಸಿನಿಮಾಗಳ ವುಚಾರವಾಗಿ ಮಾತ್ರ ಸುದ್ದಿಯಲ್ಲಿ ಇರುವುದಕ್ಕೆ ಬಯಸುತ್ತೇನೆ. ಉಳಿದ ವಿಚಾರಗಳಲ್ಲಿ ಗೌಪ್ಯತೆ ಕಾಪಾಡಿಕೊಳ್ಳುತ್ತೇನೆ. ಈ ಜಗತ್ತಿನಲ್ಲಿ ಇಲ್ಲದ ವ್ಯಕ್ತಿಯ ಬಗ್ಗೆ ನಾನು ಮಾತನಾಡುವುದಕ್ಕೆ ಇಷ್ಟ ಪಡುವುದಿಲ್ಲ, ಅವರ ಬಗ್ಗೆ ನನಗೆ ತುಂಬಾ ಗೌರವ ಇದೆ. ಹೀಗಾಗಿಯೇ ನಾನು ಅವರ ಮನೆಯನ್ನು ಖರೀದಿಸಿದ್ದೇನೆ ಎಂದಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *