ಕಾಲರ ರೋಗ ಹೆಚ್ಚಳ : ಆರೋಗ್ಯ ಇಲಾಖೆಯಿಂದ ಬಂದ ಸೂಚನೆ ಏನು..?

suddionenews
1 Min Read

ಬೆಂಗಳೂರು: ಈಗಾಗಲೇ ಬಿಸಿಲಿನ ಬೇಗೆಯಲ್ಲಿ ಬೇಯುತ್ತಿರುವ ಜನ ನೂರೆಂಟು ಕಾಯಿಲೆಯಿಂದ ಬಳಲುತ್ತಿದ್ದಾರೆ. ಜ್ವರ, ಸುಸ್ತು, ಕೆಮ್ಮು ಅಂತ ಹಲವರಿಗೆ ಅನಾರೋಗ್ಯ ಕಾಡುತ್ತಿದೆ. ಅದರ ಜೊತೆಗೆ ಕಾಲರ ಕೂಡ ಹೆಚ್ಚಾಗುತ್ತಿದೆ. ಅದರಲ್ಲೂ ಬೆಂಗಳೂರಿನಂತ ನಗರದಲ್ಲಿ ಕಾಲರ ರೋಗ ಹೆಚ್ಚಾಗುತ್ತಿದೆ. ಇದರಿಂದ ಎಚ್ಚೆತ್ತುಕೊಂಡ ಆರೋಗ್ಯ ಇಲಾಖೆ ಮಾರ್ಗಸೂಚಿಯನ್ನು ಹೊರಡಿಸಿದೆ.

ಈ ಸಂಬಂಧ ಸುದ್ದಿಗೋಷ್ಠಿ ನಡೆಸಿದ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆಯ ಆಯುಕ್ತ ಡಿ ರಂದೀಪ್ ಮಾಹಿತಿ ನೀಡಿದ್ದಾರೆ. ಬಿಅಇಲಿನ ತಾಪ, ಬಿಸಿ ಗಾಳಿ, ಕಾಲರ ಬಗ್ಗೆ ಕಟ್ಟೆಚ್ಚರ ವಹಿಸಲು ಆದೇಶ ಹೊರಡಿಸಿದೆ. ಜೊತೆಗೆ ಸಾಂಕ್ರಾಮಿಕ ರೋಗಿಗಳ ಮಾಹಿತಿ ನೀಡಲು ಖಾಸಗಿ ಆಸ್ಪತ್ರೆಗಳಿಗೆ ಸೂಚನೆ ನೀಡಿದೆ. ಬಿಸಿಲಿನ ತಾಪ ದಿನೇ ದಿನೇ ಏರಿಕೆಯಾಗುತ್ತಲೆ ಇದೆ.

ಇನ್ನು ಬರೀ ವಾಂತಿ ಬೇಧಿಯನ್ನು ಕಾಲರ ಅಂತ ತಿಳಿಯಬಾರದು. ಶುದ್ಧ ನೀರಿನ ಕೊರತೆಯಿಂದಾಗಿ ಕಾಲರ ಬರುತ್ತದೆ. ಕಳಪೆ ಗುಣಮಟ್ಟದ ನೀರು ಹಾಗೂ ಆಹಾರದಿಂದ ಕಾಲರ ಬರುತ್ತದೆ. ಇದು ನೇರವಾಗಿ ಹರಡುವುದಿಲ್ಲ. ಸಂಪರ್ಕವಿರಬೇಕು, ಇಲ್ಲವೇ ನೀವೇ ಸೇವಿಸಿದ್ದರೆ ಮಾತ್ರ. ಕಾಲರದ ಬಗ್ಗೆ ಸುಳ್ಳು ಮಾಹಿತಿಗಳು ಹರಿದಾಡುತ್ತಿವೆ. 50% ಏರಿಕೆಯಾಗಿಲ್ಲ. ಇದು ಸತ್ಯಕ್ಕೆ ದೂರವಾದ ಮಾತು.

ಬೆಂಗಳೂರಿನಲ್ಲಿ ಮೂರು ತಿಂಗಳುಗಳಲ್ಲಿ 2 ಪ್ರಕರಣ, ರಾಮನಗರ ಜಿಲ್ಲೆಗಳಲ್ಲಿ 1, ಒಟ್ಟು 6 ಪ್ರಕರಣಗಳು ವರದಿಯಾಗಿದೆ. ಕಾಲರಾ ಔಟ್ ಬ್ರೇಕ್ ಆಗಿಲ್ಲ. ಎಲ್ಲೂ‌ ಕೂಡ ಒಂದೇ ಲೊಕ್ಯಲಿಟಿಯಲ್ಲಿ ಹೆಚ್ಚು ಕೇಸ್ ಪ್ರಕರಣಗಳು ಬಂದಿಲ್ಲ. ಬೆಂಗಳೂರು, ಬೆಂಗಳೂರು ಗ್ರಾಮಾಂತರ, ರಾಮನಗರದಲ್ಲಿ‌ ಮಾತ್ರ ಕಾಲರಾ ಪ್ರಕರಣ ವರದಿಯಾಗಿದೆ ಎಂದು ಹೇಳಿದ್ದು, ಬಳಿಕ ಕಾಲರ ಬರದಂತೆ ಎಚ್ಚರಿಕೆ ವಹಿಸಲು ತಿಳಿಸಿದ್ದಾರೆ.

ಕೈ ಶುದ್ದವಾಗಿರಬೇಕು

ಕೈ ಸ್ವಚ್ಚಗೊಳಿಸಿ ಆಹಾರ ಸೇವಿಸಬೇಕು

ಶುದ್ದ ಕುಡಿಯುವ ನೀರು ಬಳಸಬೇಕು

ಸೇವೆಜ್ ಅಥವಾ ಕುಡಿಯುವ ನೀರಿನ ಪೈಪ್ ಒಟ್ಟಾಗದಂತೆ ನೋಡಿಕೊಳ್ಳಬೇಕು ಎಂದಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *