ದಕ್ಷಿಣ ಭಾರತದಲ್ಲೇ ಮಹಿಳಾ ಹಮಾಲರಿಗೆ ನಿವೇಶನ ನೀಡಿರುವುದು ಚಿತ್ರದುರ್ಗದಲ್ಲೇ ಮೊದಲು :  ಶಾಸಕ ಜಿ.ಹೆಚ್. ತಿಪ್ಪಾರೆಡ್ಡಿ

suddionenews
2 Min Read

ವರದಿ ಮತ್ತು ಫೋಟೋ : ಸುರೇಶ್ ಪಟ್ಟಣ್

ಚಿತ್ರದುರ್ಗ, (ನ.09) : ಎಪಿಎಂಸಿಯಲ್ಲಿ ಉತ್ತಮ ವಾತಾವರಣ ಇದ್ದು, ಇಲ್ಲಿನ ನಿವೇಶನಗಳಿಗೆ ಹೆಚ್ಚಿನ ಬೆಲೆ ಇದೆ. ದಕ್ಷಿಣ ಭಾರತದಲ್ಲೇ ಮಹಿಳಾ ಹಮಾಲರಿಗೆ ನಿವೇಶನಗಳನ್ನು ನೀಡಿರುವುದು ಚಿತ್ರದುರ್ಗದಲ್ಲೇ ಮೊದಲು ಎಂಬ ಹೆಗ್ಗಳಿಕೆಯನ್ನು ಹೊಂದಿದೆ ಎಂದು ಶಾಸಕ ತಿಪ್ಪಾರೆಡ್ಡಿ ಹೇಳಿದರು.

ನಗರದ ಕುರಿ ಮಾರುಕಟ್ಟೆ ಬಳಿ ಮಹಿಳಾ ಹಮಾಲರಿಗೆ ವಾಜಪೇಯಿ ನಗರ ವಸತಿ ಯೋಜನೆಯಡಿ ನಿರ್ಮಿಸಿರುವ ಮನೆಗಳ ಹಸ್ತಾಂತರ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಈ ಮೊದಲು ಮನೆಗಳು ಇಲ್ಲದೆ ಬಾಡಿಗೆ ಮನೆಗಳಲ್ಲಿ ವಾಸ ಮಾಡಿ ಜೀವನ ನಡೆಸುತ್ತಿದ್ದ ಎಪಿಎಂಸಿ ಹಮಾಲರ ಜೀವನ ಸ್ಥಿತಿ ಗಂಭೀರವಾಗಿತ್ತು. ಆಗ ಬೆಂಗಳೂರಿಗೆ ಹೋಗಿ ಹೋರಾಟ ಮಾಡಿದ್ದರ ಫಲವಾಗಿ ಇಂದು ನಿವೇಶನಗಳು ದೊರೆತಿವೆ. ಇಲ್ಲಿ ಉತ್ತಮ ಮನೆಗಳು ನಿರ್ಮಾಣವಾಗಿದೆ ಎಂದು ತಿಳಿಸಿದರು.

ಹೋರಾಟದ ಫಲವಾಗಿ ಸಿಕ್ಕಿರುವ ನಿವೇಶನಗಳನ್ನು ಕೈ ಚೆಲ್ಲದೆ ಉತ್ತಮ ರೀತಿಯಲ್ಲಿ ಮನೆಗಳನ್ನು ನಿರ್ಮಾಣ ಮಾಡಲಾಗಿದೆ. ಪ್ರಸ್ತುತ 120 ಫಲಾನುಭವಿಗಳಿಗೆ ನಿವೇಶನಗಳು ದೊರೆತಿವೆ. ಆದರೂ ಕೂಡ ಇದರಲ್ಲಿ 31 ಜನರು ವಂತಿಕೆ ಕಟ್ಟದೆ ನಿರ್ಲಕ್ಷ್ಯ ತೋರಿದ್ದಾರೆ. ಅವರನ್ನು ತೆಗೆದುಹಾಕಿ ಬೇರೆ ಫಲಾನುಭವಿಗಳಿಗೆ ನೀಡಲಾಗುವುದು ಎಂದು ತಿಳಿಸಿದ ಶಾಸಕರು, ಎಪಿಎಂಸಿ ಯಲ್ಲಿ ಉತ್ತಮ ವಾತಾವರಣ ಇದ್ದು, ಇಲ್ಲಿನ ನಿವೇಶನಗಳಿಗೆ ಹೆಚ್ಚಿನ ಬೆಲೆ ಇದೆ ಎಂದು ಹೇಳಿದ ಅವರು, ದಕ್ಷಿಣ ಭಾರತದಲ್ಲೇ ಮಹಿಳಾ ಹಮಾಲರಿಗೆ ನಿವೇಶನಗಳನ್ನು ನೀಡಿರುವುದು ಚಿತ್ರದುರ್ಗದಲ್ಲೇ ಮೊದಲು ಎಂಬ ಹೆಗ್ಗಳಿಕೆಯನ್ನು ಹೊಂದಿದೆ ಎಂದು ತಿಪ್ಪಾರೆಡ್ಡಿ ಹೇಳಿದರು.

ನಗರಸಭೆಯಲ್ಲಿ ಇಲ್ಲಿಯವರೆಗೂ ಒಟ್ಟು 10 ಸಾವಿರ ಜನರು ಮನೆಗಳು ಬೇಕೆಂದು ಅರ್ಜಿಗಳನ್ನು ಹಾಕಿದ್ದಾರೆ.

ಆದರೆ ಜಮೀನುಗಳು ಸಿಗದ ಕಾರಣ ಅವುಗಳನ್ನು ಬಾಕಿ ಉಳಿಸಿಕೊಳ್ಳಲಾಗಿದ್ದು, ಜಮೀನುಗಳು ದೊರೆತಲ್ಲಿ ಎಲ್ಲರಿಗೂ ಮನೆಗಳನ್ನು ಕಟ್ಟಿಕೊಡಲಾಗುವುದು ಎಂದು ಶಾಸಕರು ತಿಳಿಸಿದರು.

ಮನೆಗಳನ್ನು ನಿರ್ಮಿಸಿರುವ ಈ ಪ್ರದೇಶದಲ್ಲಿ ಶಾಲೆ ಹಾಗೂ ಅಂಗನವಾಡಿ ಕಟ್ಟಿಸಿಕೊಡಲಾಗುವುದು. ಸಿಸಿ ರಸ್ತೆ ನಿರ್ಮಾಣಕ್ಕೆ 50 ಲಕ್ಷ ಅನುದಾನವನ್ನು ನೀಡುವುದಾಗಿ ತಿಪ್ಪಾರೆಡ್ಡಿ ಭರವಸೆ ನೀಡಿದರು.

ಕಾರ್ಯಕ್ರಮದಲ್ಲಿ ನಗರಸಭೆ ಅಧ್ಯಕ್ಷೆ ತಿಪ್ಪಮ್ಮ, ಉಪಾಧ್ಯಕ್ಷೆ ಅನುರಾಧ, ಸದಸ್ಯ ಸುರೇಶ್, ಮರ್ಚೆಂಟ್ ಬ್ಯಾಂಕ್ ಅಧ್ಯಕ್ಷ ಲಕ್ಷ್ಮೀಕಾಂತರೆಡ್ಡಿ, ಹಮಾಲರ ಸಂಘದ ಅಧ್ಯಕ್ಷ ಬಸವರಾಜ, ದ್ಯಾಮಣ್ಣ, ಸಿದ್ದಾಪುರ ನಾಗಣ್ಣ ಸೇರಿದಂತೆ ಇತರರು ಹಾಜರಿದ್ದರು.

Share This Article
Leave a Comment

Leave a Reply

Your email address will not be published. Required fields are marked *