ಚಿತ್ರದುರ್ಗ, ಮಾರ್ಚ್. 29 : ಚಿತ್ರದುರ್ಗ ಜಿಲ್ಲಾ ವಕೀಲರ ಕಲಾ ಬಳಗದಿಂದ ರಾಜವೀರ ಮದಕರಿ ನಾಯಕ ನಾಟಕಕ್ಕೆ ಅಧಿಕೃತವಾಗಿ ಚಾಲನೆ ನೀಡಲಾಯಿತು.
ಅಕ್ಟೋಬರ್ 13, 2024 ರಂದು ಮದಕರಿ ನಾಯಕ ಜಯಂತಿ ಅಂಗವಾಗಿ ಚಿತ್ರದುರ್ಗ ಜಿಲ್ಲಾ ವಕೀಲರ ಕಲಾ ಬಳಗದಿಂದ “ರಾಜವೀರ ಮದಕರಿ ನಾಯಕ” ಎಂಬ ಐತಿಹಾಸಿಕ ನಾಟಕವನ್ನು ಹಮ್ಮಿಕೊಳ್ಳಲಾಗಿದ್ದು, ನಾಟಕ ಯಶಸ್ವಿಗೆ ಪ್ರಥಮ ಪೂಜಾ ಕಾರ್ಯವನ್ನು ಚಿತ್ರದುರ್ಗದ ಬೆಟ್ಟದ ಮೇಲಿರುವ ಶ್ರೀ ಏಕನಾಥೇಶ್ವರಿ ಅಮ್ಮನವರಿಗೆ ಹಾಗೂ ಸಂಪಿಗೆ ಸಿದ್ದೇಶ್ವರ ಸ್ವಾಮಿಗೆ ಹಾಗೂ ರಾಜಾ ಉತ್ಸವಾಂಬ ದೇವಾಲಯಗಳಲ್ಲಿ ಪೂಜೆ ಸಲ್ಲಿಸಲಾಯಿತು.
ಈ ವೇಳೆ ರಾಜವೀರ ಮದಕರಿ ನಾಯಕ ನಾಟಕದ ಯಶಸ್ವಿಯಾಗಲೆಂದು ಪ್ರಾರ್ಥಿಸಿ ಪಾತ್ರದಾರಿಗಳಾದ ವಿದ್ಯಾಧರ್, ಎನ್ ಶರಣಪ್ಪ, ಎಂ.ಮೂರ್ತಿ, ಬೋಸಯ್ಯ, ಕಿರಣ್ ಜೈನ್, ಮುತ್ತಯ್ಯ, ರವಿ ಸಿದ್ದಾರ್ಥ, ಮಾಲತೇಶ್ ಅರಸ್, ಸೋಮಶೇಖರ್ ರೆಡ್ಡಿ, ಶಿವಾರಾಧ್ಯ ಅವರು ದೇಗುಲಗಳಿಗೆ ತೆರಳಿ ಪೂಜೆ ನೆರವೇರಿಸಿದರು.
ನಾಟಕದ ಉಸ್ತುವಾರಿಯನ್ನು ಚಿತ್ರದುರ್ಗ ವಕೀಲ ಸಂಘದ ಅಧ್ಯಕ್ಷರಾದ ವೈ ತಿಪ್ಪೇಸ್ವಾಮಿ ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರು ಹಾಗೂ ಶ್ರೀ ಪಿ ಆರ್ ವೀರೇಶ್ ಮತ್ತು ಎಸ್ ವಿಜಯ್ ಕುಮಾರ್ ವಹಿಸಿರುತ್ತಾರೆ .ತರಬೇತುದಾರರಾದ ಮದಕರಿಪುರದ. ಹೆಚ್. ಮರಿಸ್ವಾಮಿ ಜವಾಬ್ದಾರಿ ಹೊತ್ತಿದ್ದಾರೆ.