SRH ವಿರುದ್ಧ ಮುಂಬೈ ಇಂಡಿಯನ್ ಸೋಲು: ನಾಯಕ ಕೊಟ್ಟ ಸ್ಪಷ್ಟನೆ ಏನು..?

1 Min Read

 

ನಿನ್ನೆ ಮುಂಬೈ ಇಂಡಿಯನ್ಸ್ ಹಾಗೂ ಸನ್ ರೈಸರ್ಸ್ ಹೈದ್ರಾಬಾದ್ ತಂಡ ಮುಖಾಮುಖಿಯಾಗಿದ್ದವು. ಆದರೆ ನಿನ್ನೆಯ ಐಪಿಎಲ್ ರೋಚಕ ಪಂದ್ಯದಲ್ಲಿ ಮುಂಬೈ ಮಣಿಸಿ ಎಸ್ ಆರ್ ಹೆಚ್ ಭರ್ಜರಿ ಗೆಲುವು ಸಾಧಿಸಿದೆ. 31 ರನ್ ಗಳಿಂದ ಸೋಲಿಸಿದೆ. ಮೊದಲು ಬ್ಯಾಟ್ ಮಾಡಿದ ಹೈದ್ರಾಬಾದ್ ತಂಡವು 277 ರನ್ ಗಳಿಸಿತ್ತು. 277 ರನ್ ಟಾರ್ಗೆಟ್ ಬೆನ್ನತ್ತಿ ಮುಂಬೈ ಇಂಡಿಯನ್ಸ್ 246 ರನ್ ಗಳಿಸಿ ಹೀನಾಯ ಸೋಲು ಒಪ್ಪಿಕೊಂಡಿತು.

 

ಈ ಸೋಲಿಗೆ ಮುಂಬೈ ಇಂಡಿಯನ್ಸ್ ನಾಯಕ, ಹಾರ್ದಿಕ್ ಪಾಂಡ್ಯ ಪ್ರತಿಕ್ರಿಯೆ ನೀಡಿದ್ದಾರೆ. ನಾವೂ ಕೆಲವು ಹೊಸ ಪ್ರಯೋಗಗಳನ್ನು ಮಾಡಿದ್ದೇವೆ. ತಪ್ಪುಗಳಿಂದ ಪಾಠ ಕಲಿಯುತ್ತಿದ್ದೇವೆ. ನಮಗೆ ಇಷ್ಟು ದೊಡ್ಡ ಟಾರ್ಗೆಟ್ ಸಿಗುತ್ತದೆ ಎಂದುಕೊಂಡಿರಲಿಲ್ಲ. ಹೈದ್ರಾಬಾದ್ ತಂಡದ ಬ್ಯಾಟಿಂಗ್ ಕೂಡ ಉತ್ತಮವಾಗಿತ್ತು. ಬೌಲಿಂಗ್ ವೇಳೆ ಹೊಸ ಪ್ರಯೋಗಗಳನ್ನು ಮಾಡಿದ್ದೇವೆ. ನಾವೂ ತಪ್ಪುಗಳಿಂದ ಕಲಿಯುತ್ತೇವೆ‌. ಸ್ವಲ್ಪ ಬದಲಾವಣೆ ಬೇಕಿದೆ. ಇಲ್ಲಿನ ಪಿಚ್ ಬ್ಯಾಟ್ಸ್ ಮನ್ ಗಳಿಗೆ ಸಹಾಕಾರಿಯಾಗಿದೆ ಎಂದು ಸ್ಪಷ್ಟನೆ ನೀಡಿದ್ದಾರೆ.

 

ಈ ಬಾರಿಯ ಐಪಿಎಲ್ ನಲ್ಲಿ ಈಗಲೇ ಮುಂಬೈ ಇಂಡಿಯನ್ಸ್ ಗೆ ಎರಡನೇ ಸೋಲಾಗಿದೆ. ಈ ಮೊದಲು ಗುಜರಾತ್ ಟೈಟಾನ್ಸ್ ವಿರುದ್ಧವೂ ಸೋಲು ಕಂಡಿತ್ತು. ಇದೀಗ ಎಸ್ ಆರ್ ಹೆಚ್ ವಿರುದ್ಧವೂ ಸೋಲು ಕಂಡಿದೆ. ಹೈದ್ರಾಬಾದ್ ಕೂಡ ಎರಡು ಪಂದ್ಯದಲ್ಲಿ ಮೊದಲ ಪಂದ್ಯ ಸೋತು, ಈಗ ಗೆದ್ದಿದೆ. ನಿನ್ನೆಯ ಮ್ಯಾಚ್ ನಲ್ಲಿ ಎಸ್ ಆರ್ ಹೆಚ್ ಗೆಲುವು ಕಂಡಿದ್ದಕ್ಕೆ ಮಾಲಕಿ ಕಾವ್ತಾ ಮಾರನ್ ಕ್ರೀಡಾಂಗಣದಲ್ಲಿಯೇ ಕುಣಿದು ಕುಪ್ಪಳಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *