ಆಗ್ನೇಯ ಮಧ್ಯ ರೈಲ್ವೆಯಲ್ಲಿ ಖಾಲಿ ಇರುವ ಟ್ರೇಡ್ ಅಪ್ರೆಂಟಿಸ್ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಹಾಕುವುದಕ್ಕೆ ಬಯಸುವವರು NATS ಪೋರ್ಟಲ್ ಮೂಲಕ ಸಲ್ಲಿಕೆ ಮಾಡಬಹುದು. ಹುದ್ದೆಗಳಿಗೆ ಅಭ್ಯರ್ಥಿಗಳನ್ನು ಅಪ್ರೆಂಟಿಸ್ ಕಾಯ್ದೆ 1961 ರಡಿ, ರಾಯ್‌ಪುರ್ ಡಿವಿಷನ್‌ನಲ್ಲಿ ನಿಯೋಜಿಸಿಕೊಳ್ಳಲಾಗುತ್ತದೆ. ಸದ್ಯ ಖಾಲಿ ಇರುವ ಹುದ್ದೆಗಳೆಂದರೆ, ಕಾರ್ಪೆಂಟರ್ – 38, COPA – 100, ಡ್ರಾಫ್ಟ್‌ಮನ್ (ಸಿವಿಲ್)- 10, ಇಲೆಕ್ಟ್ರೀಷಿಯನ್- 137, ಇಲೆಕ್ಟ್ರೀಷಿಯನ್ (ಮೆಕ್ಯಾನಿಕಲ್) -5, ಫಿಟ್ಟರ್ -187, ಮಷಿನಿಸ್ಟ್ – 4, ಪೇಂಟರ್ – 42, ಪ್ಲಂಬರ್ – 25, ಮೆಕ್ಯಾನಿಕಲ್ (Rac) – 15, ಎಸ್‌ಎಂಡಬ್ಲ್ಯೂ – 4, ಸ್ಟೆನೊ (ಇಂಗ್ಲಿಷ್) – 27, ಸ್ಟೆನೊ (ಹಿಂದಿ) – 19, ಡೀಸೆಲ್ ಮೆಕ್ಯಾನಿಕ್ – 12, ಟರ್ನರ್ – 4, ವೆಲ್ಡರ್ – 18, ವೈಯರ್‌ಮನ್ – 80, ಕೆಮಿಕಲ್ ಲ್ಯಾಬೋರೇಟರಿ ಅಸಿಸ್ಟಂಟ್ – 4, ಡಿಜಿಟಲ್ ಪೋಟೋಗ್ರಾಫರ್ – 2 ಹುದ್ದೆಗಳು ಖಾಲಿ ಇವೆ.

ಈ ಹುದ್ದೆಗಳಿಗೆ ಅನುಗುಣವಾಗಿ ಎಸ್‌ಎಸ್‌ಎಲ್‌ಸಿ, ಐಟಿಐ ಅನ್ನು ಹುದ್ದೆಗೆ ಸಂಬಂಧಿಸಿದ ಟ್ರೇಡ್‌ನಲ್ಲಿ ಪಾಸ್ ಮಾಡಿರಬೇಕು. ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗೆ ಕನಿಷ್ಠ 15 ವರ್ಷ ಆಗಿರಬೇಕು. ಗರಿಷ್ಠ 24 ವರ್ಷ ವಯಸ್ಸು ಮೀರಿರಬಾರದು. ವರ್ಗಾವಾರು ವಯಸ್ಸಿನ ಸಡಿಲಿಕೆ ನಿಯಮಗಳು ಅನ್ವಯವಾಗಲಿವೆ.ಅಪ್ಲಿಕೇಶನ್ ಸಲ್ಲಿಸಲು ಕೊನೆ ದಿನಾಂಕ : 12-04-2024 ರ ರಾತ್ರಿ 23-59 ಗಂಟೆವರೆಗೆ ಅವಕಾಶವಿದೆ.

ಈ ಹುದ್ದೆಗಳಲ್ಲಿ ಆಸಕ್ತಿ ಇರುವವರು ವೆಬ್ ವಿಳಾಸ https://portal.mhrdnats.gov.in/boat/login/user_login.action ಕ್ಕೆ ಭೇಟಿ ನೀಡಿ. ತೆರೆದ ವೆಬ್‌ಪೇಜ್‌ನಲ್ಲಿ ಇಮೇಲ್ ವಿಳಾಸ, ಮೊಬೈಲ್ ನಂಬರ್ , ಪಾಸ್‌ವರ್ಡ್ ನೀಡಿ ಲಾಗಿನ್ ಆಗುವ ಮೂಲಕ ಅರ್ಜಿ ಸಲ್ಲಿಸಬಹುದು.


