ಬೆಂಗಳೂರು: ಮಾಜಿ ಸಿಎಂ ಕುಮಾರಸ್ವಾಮಿ ಅವರು ಹೃದಯ ಶಸ್ತ್ರ ಚಿಕಿತ್ಸೆ ಯಶಸ್ವಿಯಾಗಿದ್ದು, ಬೆಂಗಳೂರಿಗೆ ಬಂದಿಳಿದಿದ್ದಾರೆ. ಇದು ಮೂರನೆಯ ಬಾರಿಗೆ ಅವರು ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದಾರೆ. ಈ ಬಾರಿ ಶಸ್ತ್ತ ಚಿಕಿತ್ಸೆ ಚೆನ್ನಾಗಿ ಮಾಡಿದ್ದಾರೆ ಎಂದೇ ಹೇಳಿದ್ದಾರೆ. ಇನ್ನು ಲೋಕಸಭಾ ಚುನಾವಣೆ ಬೇರೆ ಸನಿಹವಿರುವ ಕಾರಣ, ಒಂದು ಕಡೆ ಆರೋಗ್ಯ ಮತ್ತೊಂದು ಕಡೆ ಚುನಾವಣೆಯ ಪ್ರಚಾರ ಎರಡನ್ನು ಬ್ಯಾಲೆನ್ಸ್ ಮಾಡುವ ಟಾಸ್ಕ್ ಕುಮಾರಸ್ವಾಮಿ ಅವರಿಗಿದೆ.
ಚೆನ್ನೈನಿಂದ ಬೆಂಗಳೂರಿಗೆ ಬಂದಿಳಿದಾಗ ಮಾತನಾಡಿದ ಅವರು, ಕಳೆದ ಎರಡು ಬಾರಿ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದೀನಿ. ಎರಡು ಶಸ್ತ್ರಚಿಕಿತ್ಸೆಯಲ್ಲಿ ಲೋಪದೋಷವಾಗಿತ್ತು. ಆದ್ಋ ಈಗ ವೈದ್ಯಕೀಯ ಲೋಕ ತಾಂತ್ರಿಕವಾಗಿ ಮುಂದುವರೆದಿದೆ. ಹೀಗಾಗಿ ಅತ್ಯಾಧುನಿಕ ಶಸ್ತ್ರ ಚಿಕಿತ್ಸೆಯಿಂದ ಮೂರನೇ ಬಾರಿ ಹೃದಯ ಶಸ್ತ್ರ ಚಿಕಿತ್ಸೆ ಯಶಸ್ವಿಯಾಗಿದೆ.
ನಾಡಿನ ಜನರ ಶುಭ ಹಾರೈಕೆಯಿಂದ ಇಂದು ಗುಣಮುಖರಾಗಿ ಬಂದಿದ್ದೇನೆ. ನಾಡಿನ ಜನರ ಹಾರೈಕೆ, ದೇವರ ಆಶೀರ್ವಾದದಿಂದ ಇಂದು ಚೇತರಿಸಿಕೊಂಡಿದ್ದೀನಿ. ವೈದ್ಯರು ಸಾಯಿಬಾಬಾ ಭಕ್ತರು. ದೇವರಿಗೆ ಪೂಜೆ ಮಾಡಿ ಶಸ್ತ್ರಚಿಕಿತ್ಸೆ ಮಾಡಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ಮಂಡ್ಯ ಕ್ಷೇತ್ರಕ್ಕೆ ಅಭ್ಯರ್ಥಿ ಯಾರೆಂದು ಇನ್ನು ಮೂರ್ನಾಲ್ಕು ದಿನದಲ್ಲಿ ತೀರ್ಮಾನ ಮಾಡಿ ತಿಳಿಸುತ್ತೇವೆ. ವೈದ್ಯರು ಮೂರ್ನಾಲ್ಕು ದಿನ ವಿಶ್ರಾಂತಿ ಪಡೆಯಲು ಹೇಳಿದ್ದಾರೆ. ನಾನಿ ಸಾಧ್ವಾದಷ್ಟು ಎನ್ಡಿಎ ಅಭ್ಯರ್ಥಿಯನ್ನು ಗೆಲ್ಲಿಸುವ ಕೆಲಸ ಮಾಡುತ್ತೇನೆ. ವಿಶ್ರಾಂತಿಯ ಬಳಿಕ ಪ್ರಚಾರ ಕಾರ್ಯದಲ್ಲೂ ತೊಡಗಿಕೊಳ್ಳುತ್ತೇನೆ. ಜನರ ಆಶೀರ್ವಾದದಿಂದ ಇಂದು ಚೇತರಿಸಿಕೊಂಡು ಬಂದಿದ್ದೇನೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಅವರು ಚೆನ್ನೈನಿಂದ ಬಂದ ಬಳಿಕ ಪ್ರತಿಕ್ರಿಯೆ ನೀಡಿದ್ದಾರೆ.