ಕೆಲವೊಮ್ಮೆ ಸ್ಟಾರ್ ಗಳ ಬಗ್ಗೆ ಇನ್ನಿಲ್ಲದ ಗಾಳಿ ಸುದ್ದಿಗಳು ಬಹಳ ಬೇಗನೇ ಹರಡಿ ಬಿಡುತ್ತವೆ. ದಂಪತಿ ಅದ್ಭುತವಾಗಿದ್ರು, ಅವರಿಬ್ಬರ ನಡುವೆ ಎಲ್ಲವೂ ಸರಿಯಿಲ್ವಂತೆ ಎಂಬ ಪುಕಾರು ಹರಡಿರುತ್ತೆ. ಅಂಥದ್ದೇ ವಿಚಾರ ನಟಿ ಪ್ರಿಯಾಮಣಿ ಬಾಳಲ್ಲೂ ಹರಡಿತ್ತು. ಆದ್ರೆ ಅದಕ್ಕೆ ತಕ್ಕ ಉತ್ತರ ನೀಡಿದ್ದಾರೆ ಪ್ರಿಯಾಮಣಿ.
ಫ್ಯಾಮಿಲಿ ಮ್ಯಾನ್ ವೆಬ್ ಸಿರೀಸ್ ನಲ್ಲಿ ಪ್ರಿಯಾಮಣಿ ನಟಿಸಿ ಎಲ್ಲರ ಮೆಚ್ಚುಗೆ ಪಡೆದಿದ್ದರು. ಇದಾದ ಬಳಿಕ ಅವರಿಬ್ಬರ ಸಂಸಾರ ಸರಿಯಿಲ್ಲ. ಮುಸ್ತಫಾಗೆ ಪ್ರಿಯಾಮಣಿ ಡಿವೋರ್ಸ್ ಕೊಡ್ತಾ ಇದ್ದಾರೆ ಎಂಬ ಸುದ್ದಿ ಎಲ್ಲೆಡೆ ಹರಡಿತ್ತು. ಅಂಥವರಿಗೆ ಪ್ರಿಯಾಮಣಿ ತನ್ನ ಗಂಡನ ಜೊತೆಗಿರುವ ಫೋಟೋ ಹಾಕಿ ಒಳ್ಳೆ ಕ್ಯಾಪ್ಶನ್ ಕೊಟ್ಟು ಉತ್ತರಿಸಿದ್ದಾರೆ.
ನಾನು ಮತ್ತು ನನ್ನವನಿಂದ ದೀಪಾವಳಿ ಹಬ್ಬದ ಶುಭಾಶಯಗಳು’ ಎಂದು ಹೇಳಿದ್ದಾರೆ. ಈ ಮೂಲಕ ತಮ್ಮ ಸಂಬಂಧದಲ್ಲಿ ಯಾವುದೇ ಸಮಸ್ಯೆ ಉಂಟಾಗಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಈ ಫೋಟೋ ನೋಡಿ ಅಭಿಮಾನಿಗಳು ಖುಷಿಯಾಗಿದ್ದಾರೆ.