ಬೆಂಗಳೂರು: ಲೋಕಸಭಾ ಚುನಾವಣೆಗೆ ಈಗಾಗಲೇ ಭರ್ಜರಿ ತಯಾರಿ ನಡೆಯುತ್ತಿದ್ದು, ರಾಜ್ಯದಲ್ಲಿ ಒಂದಷ್ಟು ಕ್ಷೇತ್ರಗಳ ಕಾಂಪಿಟೇಷನ್ ಜಾಸ್ತಿಯಾಗಿದೆ. ಅದರಲ್ಲಿ ಬೆಂಗಳೂರು ಗ್ರಾಮಾಂತರ ಕೂಡ ಒಂದು. ಕಾಂಗ್ರೆಸ್ ನ ಡಿ ಕೆ ಸುರೇಶ್ ಅವರನ್ನು ಸೋಲಿಸುವುದಕ್ಕಾಗಿ ಬೆಂಗಳೂರು ಗ್ರಾಮಾಂತರದಲ್ಲಿ ಸ್ಟ್ರಾಂಗ್ ಎನಿಸುವ ಕ್ಯಾಂಡಿಡೇಟ್ ನೇ ಹಾಕಬೇಕಾಗಿದೆ. ಹೀಗಾಗಿ ಡಾ. ಮಂಜುನಾಥ್ ಅವರನ್ನು ಚುನಾವಣೆಗೆ ನಿಲ್ಲಿಸುವ ಪ್ರಯತ್ನ ನಡೆದಿದೆ. ಅವರನ್ನು ಮನವೊಲಿಸುವ ಪ್ರಯತ್ನವೂ ಈಗಾಗಲೇ ಸಕ್ಸಸ್ ಆಗಿದೆ.
ಡಾ. ಮಂಜುನಾಥ್ ನಾಳೆ ಅಧಿಕೃತವಾಗಿ ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾಗಲಿದ್ದಾರೆ. ಬಿಜೆಪಿಯಿಂದ ಇನ್ನು ಅಧಿಕೃತವಾಗಿ ಟಿಕೆಟ್ ಘೋಷಣೆಯಾಗಿಲ್ಲ. ಆದರೆ ಇಂದು ಸಂಜೆಯಿಂದಾನೇ ರಾಜರಾಜೇಶ್ವರಿ ನಗರದಿಂದ ಪ್ರಚಾರ ಕಾರ್ಯ ಆರಂಭಿಸಲಿದ್ದಾರೆ. ಅದಕ್ಕಾಗಿ ಬಿಜೆಪಿ ಬ್ಯಾನರ್ ಹಾಕಿಸಿ, ಬೆಂಬಲಕ್ಕೆ ನಿಂತಿದ್ದಾರೆ.
ಡಾ. ಮಂಜುನಾಥ್ ಅವರ ರಾಜಕೀಯ ಪ್ರವೇಶ ಬೇಡ ಎಂದು ದೇವೇಗೌಡರು ಹೇಳಿದ್ದರು. ಆದರೆ ಈಗ ಎಲ್ಲರ ಮನವಿ ಮೇರೆಗೆ ಡಾ. ಮಂಜುನಾಥ್ ರಾಜಕೀಯ ಪ್ರವೇಶ ಮಾಡುತ್ತಿದ್ದಾರೆ. ಇತ್ತಿಚೆಗಷ್ಟೇ ಜಯದೇವ ಆಸ್ಪತ್ರೆಯಿಂದ ನಿವೃತ್ತಿ ಪಡೆದಿದ್ದಾರೆ. ಇಡೀ ದೇಶದಾದ್ಯಂತ ಜಯದೇವ ಆಸ್ಪತ್ರೆ ಮೂಲಕ ಹೆಸರು ಮಾಡಿದ್ದಾರೆ. ಜಯದೇವ ಆಸ್ಪತ್ರೆಯ ಹೆಸರು ದೊಡ್ಡ ಮಟ್ಟಕ್ಕೆ ಹೋಗುವುದರಲ್ಲಿ ಡಾ. ಮಂಜುನಾಥ್ ಅವರ ಪಾತ್ರ ಮಹತ್ವದ್ದಾಗಿದೆ. ಹೀಗಾಗಿ ದೇವೇಗೌಡ ಅವರು ಮಂಜುನಾಥ್ ಅವರ ರಾಜಕೀಯ ಪ್ರವೇಶಕ್ಕೆ ಸಮ್ಮತಿ ನೀಡಿರಲಿಲ್ಲ. ರಾಜಕೀಯದಳಸಾಕಷ್ಟು ಏಳು-ಬೀಳು ಇರುತ್ತದೆ. ಸೋಲು-ಗೆಲುವು ಎದುರಿಸಬೇಕಾಗುತ್ತದೆ. ಹೀಗಾಗಿ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ಅವರು ಡಾ. ಮಂಜುನಾಥ್ ಅವರ ರಾಜಕೀಯ ಪ್ರವೇಶ ಬೇಡ ಎಂದಿದ್ದರು.