ಸ್ಟಾರ್ ಗಳ ಹುಟ್ಟುಹಬ್ಬ ಬಂತು ಎಂದರೆ ಅವರ ಅಭಿಮಾನಿಗಳು ತಿಂಗಳ ಮೊದಲೇ ಪ್ಲ್ಯಾನ್ ಮಾಡುತ್ತಾರೆ. ಹುಟ್ಟುಹಬ್ಬದ ದಿನ ಮನೆ ಬಳಿ ಬಂದು ಸಂಭ್ರಮ-ಸಡಗರದಿಂದ ಆಚರಣೆ ಮಾಡುತ್ತಾರೆ. ಅಂದು ಹಬ್ಬದ ಸಂಭ್ರಮ ಫ್ಯಾನ್ಸ್ ಮನಗಳಲ್ಲಿ ಇರುತ್ತದೆ. ಇದು ಸ್ಟಾರ್ ಗಳ ಬಗೆಗಿನ ಕ್ರೇಜ್ ಅಂತಾನೇ ಹೇಳಬಹುದು. ಆದರೆ ವರ್ತೂರು ಸಂತೋಷ್ ಅವರ ಹುಟ್ಟುಹಬ್ಬವೂ ಯಾವ ಸ್ಟಾರ್ ಗಳಿಗೂ ಕಡಿಮೆ ಇಲ್ಲವೆಂಬಂತೆ ಆಚರಿಸಲಾಗಿದೆ
ವರ್ತೂರು ಸಂತೋಷ್ ಬಿಗ್ ಬಾಸ್ ಕನ್ನಡ ಸೀಸನ್ 10ರ ಸ್ಪರ್ಧಿಯಾಗಿ ಬಂದಿದ್ದರು. ಅದಕ್ಕೂ ಮುನ್ನವೇ ಹಳ್ಳಿಕಾರ್ ಒಡೆಯ ಎಂಬ ಖ್ಯಾತಿಯನ್ನು ಪಡೆದಿದ್ದರು. ಕೃಷಿಯಲ್ಲಿ ಹೆಸರು ಮಾಡಿದ್ದರು. ಹಳ್ಳಿಕಾರ್ ತಳಿಗಳ ಉಳುವಿಗಾಗಿ ಪಣ ತೊಟ್ಟಿದ್ದರು. ಈ ಎಲ್ಲಾ ವಿಚಾರಗಳಿಂದ ಫೇಮಸ್ ಆಗಿದ್ದ ವರ್ತೂರು ಸಂತೋಷ್ ಬಿಗ್ ಬಾಸ್ ಮನೆಗೆ ಬಂದಿದ್ದರು. ಇಂದು ಅವರಿಗೆ ಹುಟ್ಟುಹಬ್ಬದ ಸಂಭ್ರಮ. ಫ್ಯಾನ್ಸ್ ಅದ್ದೂರಿಯಾಗಿ ಆಚರಣೆ ಮಾಡಿದ್ದಾರೆ.

ವರ್ತೂರು ಸಂತೋಷ್ ಅಭಿಮಾನಿಗಳು ದೂರದೂರಿನಿಂದ ಬಂದಿದ್ದಾರೆ. ಕೇಕ್ ಗಳನ್ನು ತಂದು ಕಟ್ ಮಾಡಿಸಿದ್ದಾರೆ. ಅಷ್ಟೇ ಅಲ್ಲ ದೊಡ್ಡ ದೊಡ್ಡ ಬ್ಯಾನರ್ ಗಳನ್ನು ಹಾಕಿದ್ದಾರೆ. ರಾಜ್ಯದ ಬೇರೆ ಬೇರೆ ರಾಜ್ಯದಿಂದ ಅಭಿಮಾನಿಗಳು ಬಂದಿದ್ದು, ವರ್ತೂರು ಸಂತೋಷ್ ಗೆ ವಿಶ್ ಮಾಡಿದ್ದಾರೆ. ಹುಟ್ಟುಹಬ್ಬಕ್ಕೆ ಬಂದಂತಹ ಸುಮಾರು ನಾಲ್ಕು ಸಾವಿರ ಮಂದಿಗೆ ಊಟದ ವ್ಯವಸ್ಥೆಯನ್ನು ಮಾಡಲಾಗಿತ್ತು. ವರ್ತೂರು ಸಂತೋಚ್ ಹುಟ್ಟುಹಬ್ಬಕ್ಕೆ ಬಿಗ್ ಬಾಸ್ ವೈಲ್ಡ್ ಕಾರ್ಡ್ ಎಂಟ್ರಿ ಸ್ಪರ್ಧಿ ಅವಿನಾಶ್ ಕೂಡ ಬಂದಿದ್ದರು. ವರ್ತೂರು ಸಂತೋಷ್ ಗೆ ವಿಶ್ ಮಾಡಿ, ಬಿಗ್ ಬಾಸ್ ದಿನಗಳನ್ನು ನೆನೆದಿದ್ದಾರೆ.
ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.










