ಬೆಂಗಳೂರು: ನಾವೇನು ಮೇಕೆದಾಟು ಯೋಜನೆ ಮಾಡಲ್ಲ ಅಂತ ಹೇಳಿಲ್ಲ. ಸುಮ್ಮನೆ ರಾಜಕೀಯ ಮಾಡ್ಬೇಕು ಅಂತ ಈ ವಿಚಾರ ಮಾತಾಡ್ತಾ ಇದ್ದಾರೆ ಅಂತ ಸಚಿವ ಈಶ್ವರಪ್ಪ ಕಾಂಗ್ರೆಸ್ ಮೇಲೆ ಗರಂ ಆಗಿದ್ದಾರೆ.
ಮೇಕೆದಾಟು ಯೋಜನೆ ರಾಜ್ಯದ ಎಲ್ಲರ ಆಪೇಕ್ಷೆಯಾಗಿದೆ. ಕಾನೂನುಬದ್ಧವಾಗಿ ಜಾರಿಗೆ ತೀರ್ಮಾನಿಸಿದ್ದೇವೆ. ಎಲ್ಲವನ್ನು ಮಾಡ್ತೇವೆ. ಅವರ ಸರ್ಕಾರಗಳು ಇದ್ದಾಗ ಯಾಕೆ ಈ ಬಗ್ಗೆ ಮಾಡಲಿಲ್ಲ. ಅವರು ಸುಮ್ಮನೆ ರಾಜಕೀಯ ಮಾಡೋದಕ್ಕೆ ಹೀಗೆ ಮಾತಾಡ್ತಾ ಇದ್ದಾರೆ. ಕಾಂಗ್ರೆಸ್ ಪಕ್ಷದವರಿಗೆ ಈಗೇಕೆ ಮೇಕೆದಾಟು ನೆನಪಿಗೆ ಬಂತು ಎಂದು ಪ್ರಶ್ನಿಸಿದ್ದಾರೆ.
ಮೇಕೆದಾಟು ಯೋಜನೆ ಜಾರಿಗೆ ಒತ್ತಾಯಿಸಿ, ಮೇಕೆದಾಟಿನಿಂದ ವಿಧಾನಸೌಧಕ್ಕೆ ಪಾದಯಾತ್ರೆ ಮಾಡುವುದಾಗಿ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಹೇಳಿದ್ದಾರೆ. ಈ ಸಂಬಂಧ ಮಾತನಾಡಿದ ಸಚಿವ ಕೆ ಎಸ್ ಈಶ್ವರಪ್ಪ ಪ್ರತಿಕ್ರಿಯಿಸಿದ್ದು, ಪಾದಯಾತ್ರೆ ಮಾಡಲಿ ಬಿಡಲಿ, ನಾವಂತೂ ಯೋಜನೆ ಮಾಡಿಯೇ ಮಾಡ್ತೀವಿ. ನಾವೇನು ಮಾಡಲ್ಲ ಅಂತ ಹೇಳಿಲ್ಲ ಎಂದಿದ್ದಾರೆ.