ಲೋಕಸಭಾ ಚುನಾವಣೆ 2024 | ಕಾಂಗ್ರೆಸ್ ಮೊದಲ ಪಟ್ಟಿ ರಿಲೀಸ್ : ಚಿತ್ರದುರ್ಗ, ಮಂಡ್ಯ, ಬೆಂಗಳೂರು ಗ್ರಾಮಾಂತರಕ್ಕೆ ಯಾರು ಅಭ್ಯರ್ಥಿ..?

ನವದೆಹಲಿ: ಲೋಕಸಭಾ ಚುನಾವಣಾ ಹಿನ್ನೆಲೆ ಅಭ್ಯರ್ಥಿಗಳ ವಿಚಾರಕ್ಕೆ ಸಹಜವಾಗಿಯೇ ಕುತೂಹಲ ಹೆಚ್ಚಾಗಿದೆ. ಕಾಂಗ್ರೆಸ್ ಇದೀಗ ಮೊದಲ ಪಟ್ಟಿ ರಿಲೀಸ್ ಮಾಡಿದೆ. ದೆಹಲಿಯಲ್ಲಿ ನಡೆದ ಸಿಇಸಿ ಸಭೆಯಲ್ಲಿ ಒಂದಷ್ಟು ಚರ್ಚೆ ನಡೆಸಿ ಮೊದಲ ಪಟ್ಟಿ ಸಿದ್ಧತೆ ಮಾಡಿಕೊಳ್ಳಲಾಗಿದೆ. ಈ ಮೂಲಕ ಚಿತ್ರದುರ್ಗ, ಮಂಡ್ಯ, ತುಮಕೂರು, ಬೆಂಗಳೂರು ಗ್ರಾಮಾಂತರ, ಶಿವಮೊಗ್ಗ, ವಿಜಯಪುರ, ಹಾಸನ, ಉಡುಪಿ ಕ್ಷೇತ್ರಗಳಿಗೆ ಸದ್ಯಕ್ಕೆ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದೆ.

ಕರ್ನಾಟಕದ ಜೊತೆಗೆ ಕೇರಳ, ದೆಹಲಿ, ತೆಲಂಗಾಣ, ಛತ್ತೀಸ್ ಗಡ, ಹಾಗೂ ಲಕ್ಷದ್ವೀಪದ ಕ್ಷೇತ್ರಕ್ಕೂ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ.

ಚಿತ್ರದುರ್ಗ – ಬಿ.ಎನ್ ಚಂದ್ರಪ್ಪ
ಬೆಂಗಳೂರು ಗ್ರಾಮಾಂತರ – ಡಿ.ಕೆ ಸುರೇಶ್
ಮಂಡ್ಯ – ಸ್ಟಾರ್ ಚಂದ್ರು (ವೆಂಕಟರಮಣೇಗೌಡ)
ತುಮಕೂರು – ಎಸ್‌.ಪಿ ಮುದ್ದಹನುಮೇಗೌಡ
ವಿಜಯಪುರ – ಹೆಚ್‌.ಆರ್ ಅಲಗೂರ್ (ರಾಜು)
ಶಿವಮೊಗ್ಗ – ಗೀತಾ ಶಿವರಾಜ್‌ಕುಮಾರ್
ಹಾಸನ – ಶ್ರೇಯಸ್ ಪಾಟೇಲ್‌
ಉಡುಪಿ-ಚಿಕ್ಕಮಗಳೂರು – ಜಯಪ್ರಕಾಶ್ ಹೆಗ್ಡೆ

ಮಂಡ್ಯ ಕ್ಷೇತ್ರದಲ್ಲಿ ಸ್ಪರ್ಧೆ ಕಠಿಣವಾಗಿದ್ದು, ಕಾಂಗ್ರೆಸ್ ಈ ಮೊದಲೇ ಸೂಚನೆ ನೀಡಿದಂತೆ ಸ್ಟಾರ್ ಚಂದ್ರುಗೆ ಟಿಕೆಟ್ ನೀಡಿದೆ. ಮೈತ್ರಿ ಅಭ್ಯರ್ಥಿ ಅಥವಾ ಜೆಡಿಎಸ್ ನಿಂದ ಯಾರನ್ನು ನಿಲ್ಲಿಸಬಹುದು ಎಂಬುದೇ ಸದ್ಯದ ಕುತೂಹಲವಾಗಿದೆ.

Share This Article
Leave a Comment

Leave a Reply

Your email address will not be published. Required fields are marked *