ಬೆಂಗಳೂರು: ಆರೋಪಿ ಎಷ್ಟೇ ಬುದ್ದಿವಂತನಾದರೂ ಸಣ್ಣ ಸಾಕ್ಷಿಯನ್ನಾದರೂ ಬಿಟ್ಟು ಹೋಗಿರಲೇಬೇಕು ಎಂಬ ಮಾತಿದೆ. ಅದರಂತೆ ಇದೀಗ ರಾಮೇಶ್ವರಂ ಕೆಫೆಗೆ ಬಾಂಬ್ ಇಟ್ಟ ಆರೋಪಿ ತನ್ನ ಸುಳಿವನ್ನು ಬಿಟ್ಟು ಹೋಗುದ್ದಾನೆ. ಕಳೆದ ಆರು ದಿನಗಳಿಂದ ಆತನನ್ನು ಪೊಲೀಸರು ಹುಡುಕುತ್ತಲೇ ಇದ್ದಾರೆ. ಆದರೆ ಆತ ಎಲ್ಲಿಗೆ ಹೋಗಿದ್ದಾನೆ ಎಂಬ ಸುಳಿವು ಸಿಗುತ್ತಿಲ್ಲ. ಬಹಳ ಬುದ್ದಿವಂತಿಕೆಯಿಂದ ತನ್ನ ಕೆಲಸ ಮಾಡಿ ಮುಗಿಸಿದ್ದಾನೆ. ತುಮಕೂರು, ಬಳ್ಳಾರಿಯಲ್ಲೆಲ್ಲಾ ಎನ್ಐಎ ಹುಡುಕಾಟ ನಡೆಸುತ್ತಿದೆ. ಆದರೂ ಆತನ ಪತ್ತೆಯಾಗಿಲ್ಲ. ಇದರ ನಡುವೆ ಆತನ ಟೋಪಿಯೊಂದು ಸಿಕ್ಕಿದೆ.
ಆರೋಪಿ ಬಾಂಬ್ ಇಡುವುದಕ್ಕೆ ಬಂದಾಗ ಎಲ್ಲಿಯೂ ಟೋಪಿ ತೆಗೆದಿಲ್ಲ, ಮಾಸ್ಕ್ ತೆಗೆದಿಲ್ಲ. ತನ್ನ ಗುರುತು ಸಿಗಬಾರದೆಂದು ಆ ಎರಡನ್ನು ಹಾಗೇ ಬ್ಯಾಲೆನ್ಸ್ ಮಾಡಿದ್ದಾನೆ. ಆದರೆ ಬಸ್ ಒಂದರಲ್ಲಿ ಯಾಮಾರಿ ಮಾಸ್ಕ್ ತೆಗೆದಿದ್ದಾನೆ. ಇನ್ನೊಂದು ಕಡೆ ಬಟ್ಟೆ ಬದಲಿಸುವಾಗ ಟೋಪಿಯನ್ನು ಬಿಟ್ಟು ಹೋಗಿದ್ದಾನೆ. ಬಸ್ ನಲ್ಲಿ ಮಾಸ್ಕ್ ತೆಗೆದಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಆರೋಪಿಯ ಮುಖ ಸ್ಪಷ್ಟವಾಗಿ ಕಾಣದೆ ಹೋದರೂ, ಆತನ ಚಿತ್ರವನ್ನು ಬಿಡಿಸಲಾಗಿದೆ. ಸ್ಕೆಚ್ ಬಿಡಿಸಿ, ಪೊಲೀಸರು ರಿಲೀಸ್ ಮಾಡಿದ್ದಾರೆ.
ಈ ಬಾಂಬರ್ ತುಮಕೂರು ತಲುಪಿ ಅಲ್ಲಿಂದ ಬಳ್ಳಾರಿ ತಲುಪಿದ್ದಾನೆ. ಅಲ್ಲಿಂದ ಬೀದರ್ ಗೆ ತಲುಪಿರುವ ಸಾಧ್ಯತೆ ಇದೆ ಎಂಬ ಮಾಹಿತಿ ಲಭ್ಯವಾಗಿದೆ. ಸದ್ಯ ಆತನನ್ನು ಹುಡುಕಿ ಕೊಟ್ಟವರಿಗೆ 10 ಲಕ್ಷ ಬಹುಮಾನವನ್ನು ನೀಡುವುದಾಗಿಯೂ ಘೋಷಣೆ ಮಾಡಲಾಗಿದೆ. ಸದ್ಯ ಆತನ ಚಿತ್ರದ ಸ್ಕೆಚ್ ಕೂಡ ರಿಲೀಸ್ ಆಗಿದ್ದು, ಸಿಸಿಬಿ ಪೊಲೀಸರು ಶೋಧ ಕಾರ್ಯ ನಡೆಸುತ್ತಿದ್ದಾರೆ. ಸಾಧ್ಯವಾದಷ್ಟು ಬೇಗ ಆರೋಪಿ ಸಿಗುವ ನಿರೀಕ್ಷೆ ಇದೆ.