ಬೆಂಗಳೂರು: ಅಪ್ಪು ಸಾವನ್ನ ಈಗಲೂ ಅರಗಿಸಿಕೊಳ್ಳೋದಕ್ಕೆ ಸಾಕಷ್ಟು ಜನರಿಂದ ಅರಗಿಸಿಕೊಳ್ಳೋದಕ್ಕೆ ಆಗ್ತಿಲ್ಲ. ಈ ನೋವಿನಿಂದ ಅದೆಷ್ಟೋ ಜನ ಬದುಕುಳಿದಿಲ್ಲ. ಹತ್ರತ್ರ 14 ಜನ ಸಾವನ್ನಪ್ಪಿದ್ದಾರೆ.
ರಾಜ್‍ಕುಮಾರ್ ಕುಟುಂಬ ಅಭಿಮಾನಿಗಳನ್ನ ನಮ್ಮನೇ ದೇವ್ರು ಅಂತಿದ್ದವರು. ಅಭಿಮಾನಿಗಳು ಆಸೆಪಟ್ಟಂತೆ ಇದ್ದವರು. ಅಪ್ಪು ಇಲ್ಲದ ಸಮಯದಲ್ಲಿ ಅಭಿಮಾನಿಗಳನ್ನ ಅಣ್ಣಾವ್ರ ಕುಟುಂಬವೇ ಸಂತೈಸುತ್ತಿದೆ. ಆತ್ಮಹತ್ಯೆ ಮಾಡಿಕೊಂಡಿರುವ ಕುಟುಂಬಕ್ಕೆ ಭೇಟಿ ನೀಡಿ, ರಾಘಣ್ಣ ಸಾಂತ್ವನ ಹೇಳಿದ್ದಾರೆ.
ರಾಮನಗರ ಜಿಲ್ಲೆಯ ಚನ್ನಪಟ್ಟಣ ನಿವಾಸಿ ವೆಂಕಟೇಶ್ ಎಂಬಾತ ಅಪ್ಪು ಅಪ್ಪಟ ಅಭಿಮಾನಿಯಾಗಿದ್ರು. ಆದ್ರೆ ಅಪ್ಪು ನಿಧನದ ಸುದ್ದಿ ಕೇಳಿ ಆಘಾತಕ್ಕೊಳಗಾಗಿದ್ದ ವೆಂಕಟೇಶ್, ನವೆಂಬರ್ 4 ರಂದು ನೇಣಿಗೆ ಶರಣಾಗಿದ್ದರು.
ಖಿನ್ನತೆಗೆ ಒಳಗಾಗಿ ಆತ್ಮಹತ್ಯೆ ಮಾಡಿಕೊಂಡಿದ್ದ ಅಭಿಮಾನಿಯೊಬ್ಬರ ಮನೆಗೆ ಭೇಟಿ ನೀಡಿ ಸಾಂತ್ವಾನ ಹೇಳಿದ್ದಾರೆ. ಅರ್ಧ ಗಂಟೆಗೂ ಹೆಚ್ಚು ಕಾಲ ಜೊತೆಗಿದ್ದು, ನಿಮ್ಮ ಜೊತೆ ನಾವಿದ್ದೇವೆ. ಧೈರ್ಯವಾಗಿರಿ ಎಂದು ರಾಘಣ್ಣ ಸಾಂತ್ವನ ತಿಳಿಸಿದ್ದಾರೆ.
ಈ ನಡುವೆ ಸಾಕಷ್ಟು ಅಭಿಮಾನಿಗಳು ಖಿನ್ನತೆಗೆ ಒಳಗಾಗಿ ಆತ್ಮಹತ್ಯೆಗೆ ಯತ್ನಿಸಿದ್ದರು. ದೊಡ್ಮನೆ ಕುಟುಂಬ ಮೊದಲೇ ಅಪ್ಪು ಇಲ್ಲ ಅನ್ನೋ ನೋವನ್ನೇ ಸಹಿಸಿಕೊಳ್ಳಲಾಗ್ತಿಲ್ಲ. ಈ ಮಧ್ಯೆ ಅಭಿಮಾನಿಗಳ ಸಾವು ಮತ್ತಷ್ಟು ದುಃಖ ಕೊಟ್ಟಿತ್ತು. ಹೀಗಾಗಿ ದೊಡ್ಮನೆಯವರು ಕೂಡ ಅಭಿಮಾನಿಗಳಿಗೆ ಮನವಿ ಮಾಡಿಕೊಂಡಿದ್ದರು. ದುಡುಕಿ ಯಾರು ಕೆಟ್ಟ ನಿರ್ಧಾರವನ್ನು ತೆಗೆದುಕೊಳ್ಳಬೇಡಿ ಎಂದಿದ್ರು. ಆದ್ರೂ ಕೆಲವೊಂದು ಕಡೆ ಆತ್ಮಹತ್ಯೆ ಕೇಸ್ ಗಳು ಮುಂದುವರೆದಿತ್ತು.