ಬೆಂಗಳೂರು: ಬೆಲೆ ಏರಿಕೆಯಿಂದಾಗಿ ಮನುಷ್ಯ ಈಗಲೇ ಸಾಕಷ್ಟು ಸುಸ್ತಾಗಿ ಹೋಗಿದ್ದಾನೆ. ದರ ಇಳಿಕೆ ಆಗುತ್ತೆ ಅಂದ್ರೆ ಒಂದೊಂದೆ ಏರಿಕೆಯಾಗುತ್ತಲೆ ಇದೆ. ಇದೀಗ ಹೊಟೇಲ್ ನಲ್ಲಿ ತಿನ್ನುವ ಊಟ ತಿಂಡಿ ಬೆಲೆಯಲ್ಲೂ ಏರಿಕೆಯಾಗುತ್ತಿದೆ.
ಗ್ಯಾಸ್ ಬೆಲೆಯಲ್ಲಿ ಏರಿಕೆ ಕಾಣುತ್ತಿರುವ ಹಿನ್ನೆಲೆ ಹೊಟೇಲ್ ಊಟ, ತಿಂಡಿ ಬೆಲೆಯೂ ಹೆಚ್ಚಳ ಮಾಡಲು ಹೊಟೇಲ್ ಅಸೋಸಿಯೇಷನ್ ನಿರ್ಧರಿಸಿದರ. ಪ್ರತಿಯೊಂದು ಆಹಾರ ಉತ್ಪನ್ನದ ಮೇಲೆ ಶೇಕಡ 10 ರಷ್ಟು ಏರಿಕೆ ಮಾಡಲು ರಾಜ್ಯ ಹೊಟೇಲ್ ಅಸೋಸಿಯೇಷನ್ ನಿರ್ಧರಿಸಿದೆ.
ಈ ಸಂಬಂಧ ಕಳೆದ ಕೆಲವು ದಿನಗಳ ಹಿಂದೆಯೇ ಸಭೆ ನಡೆಸಿ, ಈ ಬಗ್ಗೆ ತೀರ್ಮಾನ ತೆಗೆದುಕೊಳ್ಳಲಾಗಿತ್ತು. ರಾಜ್ಯ ಸರ್ಕಾರವು ಪೆಟ್ರೋಲ್ ಮೇಲಿನ ಮಾರಾಟ ತೆರಿಗೆಯನ್ನು 35% ರಿಂದ 25.9%ಕ್ಕೆ ಮತ್ತು ಡೀಸೆಲ್ ಮೇಲಿನ ಮಾರಾಟ ತೆರಿಗೆಯನ್ನು 24% ರಿಂದ 14.34%ಕ್ಕೆ ಇಳಿಸಿ ಗ್ರಾಹಕರಿಗೆ ಗುಡ್ ನ್ಯೂಸ್ ಕೊಟ್ಟಿದೆ. ಆದರೆ ಗ್ಯಾಸ್ ದರ ಮತ್ತು ಅಡುಗೆ ಎಣ್ಣೆ ದರಗಳನ್ನು ಕಡಿಮೆ ಮಾಡದ ಹಿನ್ನೆಲೆ ಹೋಟೆಲ್‍ಗಳಿಗೆ ದೊಡ್ಡ ಹೊಡೆತ ಬಿದ್ದಿದೆ. ಹೀಗಾಗಿ ಹೋಟೇಲ್ ಮಾಲೀಕರು ಹಂತ ಹಂತವಾಗಿ ದರ ಏರಿಸಲು ನಿರ್ಧರಿಸಿದ್ದಾರೆ.