ನವದೆಹಲಿ: ಲೋಕಸಭಾ ಚುನಾವಣೆಗೆ ಎಲ್ಲಾ ರೀತಿಯ ಸಿದ್ಧತೆ ನಡೆಯುತ್ತಿದೆ. ಕಾಂಗ್ರೆಸ್ ಸೋಲಿಸಲು ಬಿಜೆಪಿ ಮತ್ತು ಜೆಡಿಎಸ್ ಒಂದಾಗಿದೆ. ಎಲ್ಲಾ ರೀತಿಯ ತಂತ್ರಗಾರಿಕೆಯೂ ಶುರುವಾಗಿದೆ. ಆದರೆ ಇದರ ನಡುವೆ ಕ್ಷೇತ್ರಗಳ ಹಂಚಿಕೆಯೇ ಕಗ್ಗಂಟಾಗಿದೆ. ಜೆಡಿಎಸ್ ತಾವೂ ಗೆಲ್ಲಬಹುದಾದ ಕ್ಷೇತ್ರಗಳನ್ನಂತು ಬಿಡುವುದಿಲ್ಲ. ಅದರ ಜೊತೆಗೆ ಇನ್ನಷ್ಟು ಕ್ಷೇತ್ರಗಳ ಮೇಲೂ ಕಣ್ಣಿಟ್ಟಿದೆ ಎನ್ನಲಾಗಿದೆ.
ಕ್ಷೇತ್ರಗಳ ಹಂಚಿಕೆ ವಿಚಾರಕ್ಕೇನೆ ಜೆಡಿಎಸ್ ದಿಢೀರನೇ ದೆಹಲಿ ಪ್ರವಾಸ ಕೈಗೊಂಡಿದೆ. ಇಂದು ದೆಹಲಿಗೆ ಭೇಟಿ ನೀಡಿ, ಅಮಿತ್ ಅವರ ಜೊತೆಗೆ ಸುಮಾರು ಅರ್ಧ ಗಂಟೆಗಳ ಕಾಲ ಕುಮಾರಸ್ವಾಮಿ ಅವರು ಚರ್ಚೆ ನಡೆಸಿದ್ದಾರೆ. ರಾಜ್ಯದ ರಾಜಕೀಯ ಪರಿಸ್ಥಿತಿ ಬಗ್ಗೆಯೂ ಚರ್ಚೆ ನಡೆಸಿದ್ದಾರೆ.
ಇನ್ನು ಅನಿತ್ ಶಾ ಅವರ ಬಳಿ ಮಾತನಾಡುತ್ತಾ, ನಾವೂ ಎನ್ ಡಿ ಎ ಜೊತೆಗೆ ಸೇರಿರುವುದೇ ಕಾಂಗ್ರೆಸ್ ಸೋಲಿಸುವುದಕ್ಕೆ. ಆದರೆ ಮಂಡ್ಯ ಹಾಗೂ ಹಾಸನದಲ್ಲಿ ನಿಮ್ಮ ಪಕ್ಷದ ಶಾಸಕರೇ ಭಿನ್ನಾಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ ಎಂಬ ಮಾತನ್ನು ತಿಳಿಸಿದ್ದಾರಂತೆ. ಬಿಜೆಪಿ ನಾಯಕರು ಅನಗತ್ಯ ಹೇಳಿಕೆ ನೀಡುತ್ತಿದ್ದಾರೆ ಎಂದು ದೂರು ನೀಡಿದ್ದಾರಂತೆ. ಇದರ ಜೊತೆಗೆ ಕ್ಷೇತ್ರಗಳ ವಿಚಾರದಲ್ಲಿ ತುಮಕೂರು, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪಯರ ಜಿಲ್ಲೆಯ ಬಗ್ಗೆ ರಾಜ್ಯದ ನಾಯಕರ ಜೊತೆಗೆ ಮಾತನಾಡಿ, ನಿರ್ಧಾರ ತಿಳಿಸುವುದಾಗಿ ಅಮಿತ್ ಶಾ ಹೇಳಿದ್ದಾರಂತೆ. ಆದರೆ ಮಂಡ್ಯ, ಹಾಸನ, ಕೋಲಾರ ಜೆಡಿಎಸ್ ಗೆ ಫಿಕ್ಸ್ ಆಗಿದೆ ಎನ್ನಲಾಗಿದೆ