ಬೆಂಗಳೂರು: ಕಾಟೇರ ಸಿನಿಮಾ ಒಳ್ಳೆ ಸಕ್ಸಸ್ ಕಂಡಿದೆ. ಒಟಿಟಿಯಲ್ಲಿ ರಿಲೀಸ್ ಆದ್ರೂ ಕೂಡ ಥಿಯೇಟರ್ ನಲ್ಲಿ ಓಡುತ್ತಲೇ ಇದೆ. ಇಂದಿಗೆ ಸಿನಿಮಾ ರಿಲೀಸ್ ಆಗಿ 50 ದಿನಗಳು ಕಳೆದಿವೆ. ಪ್ರಸ್ತುತ ದಿನಗಳಲ್ಲಿ ಒಂದು ಸಿನಿಮಾ ಐವತ್ತು ದಿನ ಪೂರೈಸುವುದು ಎಂದರೆ ಸುಲಭದ ಮಾತಲ್ಲ. ಆ ಸಂಭ್ರಮವನ್ನು ಇಡೀ ತಂಡ ಇಂದು ಆಚರಣೆ ಮಾಡಿದೆ.
ಐವತ್ತು ದಿನದ ಸಂಭ್ರಮದಲ್ಲಿ ದರ್ಶನ್ ಮಾತನಾಡಿದ್ದು, ಸಿನಿಮಾದ ಬಗ್ಗೆ ಖುಷಿ ವ್ಯಕ್ತಪಡಿಸಿದ್ದಾರೆ. ಅದರ ಜೊತೆಗೆ ರಾಬರ್ಟ್ ವಿಚಾರ ಕೂಡ ಬಂದಿದೆ. ಹುಟ್ಟುಹಬ್ಬದ ದಿನ ಸಿಂಧೂರ ಲಕ್ಷ್ಮಣ ಸಿನಿಮಾ ಕೂಡ ಅನೌನ್ಸ್ ಆಗಿದೆ. ಈ ಟೈಟಲ್ ಈ ಹಿಂದೆ ನಿರ್ಮಾಪಕ ಉಮಾಪತಿ ಅವರ ಬಳಿ ಇತ್ತು. ಇದೀಗ ಸಿನಿಮಾ ಅನೌನ್ಸ್ ಆಗಿದ್ದು, ಟೈಟಲ್ ಬಗ್ಗೆ ಮಾತನಾಡುವಾಗ ರಾಬರ್ಟ್ ವಿಚಾರವೂ ಬಂದಿದೆ. ನಾವೇ ಕಥೆ ಕೊಟ್ಟಿದ್ದು. ಯಾರೀ ತಗಡು ಎಂದಿದ್ದಾರೆ.
ಈ ವಿಚಾರಕ್ಕೆ ಇದೀಗ ಉಮಾಪತಿ ಅವರು ಕೂಡ ಪ್ರತಿಕ್ರಿಯೆ ನೀಡಿದ್ದು, ದರ್ಶನ್ ಅವರು ನನಗೆ ಮಾತಾಡಿದ್ರು ಎಂದು ಬೇಜಾರೇನಿಲ್ಲ. ಸಮಯ ಸಂದರ್ಭ ಹಾಗೇ ಮಾತಾಡಿಸಿರಬೇಕು. ಪದಗಳನ್ನು ಬಳಸಬೇಕಾದ್ರೆ ಚೂರು ಎಚ್ಚರಿಕೆಯಿಂದ ಇರಬೇಕು. ನಾನು ದರ್ಶನ್ ಅವರ ಬೆಳವಣಿಗೆಯನ್ನೇ ಇಷ್ಟ ಪಡ್ತೀನಿ. ಅವರು ಬೆಳೆದಷ್ಟು ಒಂದಷ್ಟು ಜನಕ್ಕೆ ಮಾದರಿಯಾಗಿ ಇರ್ತಾರೆ. ಎಲ್ಲರಿಗೂ ಮಾದರಿಯಾಗಿ ಕೊನೆವರೆಗೂ ದರ್ಶನ್ ಅವರು ಇರಬೇಕು ಎಂದು ನಾನು ಭಾವಿಸ್ತೀನಿ. ಕಾರಣ ಗೆಲುವು ಲೈಫ್ ಟೈಮ್ ಇರಲ್ಲ. ಗೆದ್ದಾಗ ತಗ್ಗಿಬಗ್ಗಿ ನಡೆಯಬೇಕು, ಸೋತಾಗ ಏನು ಮಾಡಿದ್ರು ನಡೆಯುತ್ತೆ. ಗೆದ್ದಾಗ ಎಲ್ಲರ ಕಣ್ಣು ನಮ್ಮ ಮೇಲೆ ಇರುತ್ತೆ, ಸೋತರೆ ಯಾರು ನಮ್ಮನ್ನು ನೋಡಲ್ಲ. ದರ್ಶನ್ ಅವರು ಮಾತಾಡಿದ್ದು ಸೂಕ್ತ ಅನಿಸಲಿಲ್ಲ. ಅವರು ಮಾತಾಡಿದ್ದು ಅವರಿಗೆ ಸರಿ ಅನಿಸಬೇಕು. ನನ್ನಿಂದ ಏನಾದ್ರೂ ತಪ್ಪಿದ್ರೆ ನಾನು ಕ್ಷಮೆ ಕೇಳ್ತೀನಿ. ನನ್ನದು ತಪ್ಪೇನಿಲ್ಲ, ಕ್ಷಮೆ ಕೇಳುವ ಪ್ರಮೇಯ ಕೂಡ ಇಲ್ಲ. ನನ್ನ ಹೇಳಿಕೆಗೆ ನಾನು ಈಗಲೂ ಬದ್ಧ, ನಾನು ಯೂಟರ್ನ್ ಹೊಡೆಯೋ ಗಿರಾಕಿ ಅಲ್ಲ. ಸಮಸ್ಯೆ ಬಂದಾಗ ಬೆನ್ನು ತೋರಿಸಲ್ಲ, ನಂದೇನಿದ್ರೂ ಫೇಸ್ ಟು ಫೇಸ್ ಅಷ್ಟೇ ಎಂದಿದ್ದಾರೆ.