ಫೆಬ್ರವರಿ 22ರಂದು ಬರಗೂರು ರಾಮಚಂದ್ರಪ್ಪನವರ ಆಯ್ದ ಅನುಭವಗಳ ಕಥನ “ಕಾಗೆ ಕಾರುಣ್ಯದ ಕಣ್ಣು” ಜನಾರ್ಪಣೆ ಸಮಾರಂಭ

1 Min Read

 

ಚಿತ್ರದುರ್ಗ, ಫೆಬ್ರವರಿ.20 : ಗೆಳೆಯರ ಬಳಗದ ವತಿಯಿಂದ ಬರಗೂರು ರಾಮಚಂದ್ರಪ್ಪನವರ ಆಯ್ದ ಅನುಭವಗಳ ಕಥನ “ಕಾಗೆ ಕಾರುಣ್ಯದ ಕಣ್ಣು” ಜನಾರ್ಪಣೆ ಸಮಾರಂಭ ಇದೇ ಫೆ.22ರಂದು ಬೆಳಿಗ್ಗೆ 11ಕ್ಕೆ ಚಿತ್ರದುರ್ಗ ನಗರದ ತ.ರಾ.ಸು ರಂಗಮಂದಿರದಲ್ಲಿ ಏರ್ಪಡಿಸಲಾಗಿದೆ.

ಸಾಹಿತಿ ಡಾ.ರಾಜಪ್ಪ ದಳವಾಯಿ ಕೃತಿಯ ಜನಾರ್ಪಣೆ ಮಾಡುವರು. ಲೇಖಕಿ ಡಾ.ತಾರಿಣಿ ಶುಭದಾಯಿನಿ ಕೃತಿ ಕುರಿತು ಮಾತನಾಡುವರು. ಅತಿಥಿಗಳಾಗಿ ಬಿ.ಎ.ಲಿಂಗಾರೆಡ್ಡಿ, ಕೆ.ಎಂ.ವೀರೇಶ್, ಮೆಹಬೂಬ್ ಪಾಷಾ, ಜಿ.ಎಸ್.ಮಂಜುನಾಥ್, ಪ್ರೊ.ಸಂದೀಪ್, ಪಿ.ರಘು, ಓ.ಪರಮೇಶ್ವರಪ್ಪ ಭಾಗವಹಿಸುವರು. ಕೃತಿಯ ಲೇಖಕ ಪ್ರೊ.ಬರಗೂರು ರಾಮಚಂದ್ರಪ್ಪ, ನಾಡೋಜ ಡಾ.ಬರಗೂರು ಪ್ರತಿಷ್ಠಾನದ ಪ್ರಧಾನ ಕಾರ್ಯದರ್ಶಿ ಡಾ.ಸುಂದರರಾಜ ಅರಸು ವಿಶೇಷ ಉಪಸ್ಥಿತಿವಹಿಸುವರು.

ಕಾರ್ಯಕ್ರಮದ ಆಯೋಜಕರಾದ ಚಿಕ್ಕಪ್ಪನಹಳ್ಳಿ ಷಣ್ಮುಖ, ಡಾ.ಜೆ.ಕರಿಯಪ್ಪ ಮಾಳಿಗೆ, ಅಹೋಬಲಪತಿ, ಗೋವಿಂದಪ್ಪ ಗೌನಹಳ್ಳಿ, ಗೋಪಾಲಸ್ವಾಮಿ ನಾಯಕ, ವಿನಾಯಕ್ ತೊಡರನಾಳ್, ಸಿ.ರಾಜಶೇಖರ್ ಉಪಸ್ಥಿತರಿರುವರು ಎಂದು ಗೆಳೆಯರ ಬಳಗ ಪ್ರಕಟಣೆ ತಿಳಿಸಿದೆ.

Share This Article
Leave a Comment

Leave a Reply

Your email address will not be published. Required fields are marked *