ಇದು ನನ್ನ ಪುನರ್ಜನ್ಮ : ವಿಮಾನ ದುರಂತದ ಬಗ್ಗೆ ಧ್ರುವ ಸರ್ಜಾ ಮಾತು

1 Min Read

 

ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಇಂದು ಪ್ರಾಣಪಾಯದಿಂದ ಪಾರಾಗಿದ್ದಾರೆ. ಮಾರ್ಟಿನ್ ಸಿನಿಮಾದ ಶೂಟಿಂಗ್ ಗಾಗಿ ಶ್ರೀನಗರಕ್ಕೆ ತೆರಳುತ್ತಿದ್ದರು. ಈ ವೇಳೆ ಈ ದುರ್ಘಟನೆ ನಡೆದಿದೆ. ದೆಹಲಿಯಿಂದ ಶ್ರೀನಗರಕ್ಕೆ ವಿಮಾನದಲ್ಲಿ ತೆರಳುತ್ತಿದ್ದರು. ಹವಮಾನ ವೈಪರೀತ್ಯದಿಂದಾಗಿ ವಿಮಾನ ದುರಂತ ನಡೆಯಬೇಕಿತ್ತು, ಅದೃಷ್ಟವಶಾತ್ ಯಾವುದೇ ಹಾನಿ ಸಂಭವಿಸಿಲ್ಲ.

ವಿಮಾನವನ್ನು ಲ್ಯಾಂಡ್ ಮಾಡಲು ಆಗದೆ ಪೈಲೆಟ್ ಪರದಾಡಿದ್ದಾರೆ. ಈ ವಿಮಾನದಲ್ಲಿ ಹದಿನೈದು ಜನ ಪ್ರಯಾಣ ಮಾಡುತ್ತಿದ್ದರು. ಹೇಗೋ ಪೈಲೆಟ್ ದೇವರಂತೆ ನಿಧಾನವಾಗಿ ಲ್ಯಾಂಡ್ ಮಾಡಿದ್ದಾನೆ. ಎಲ್ಲರೂ ಸಮಾಧಾನವಾಗಿ ನಿಟ್ಟುಸಿರು ಬಿಟ್ಟಿದ್ದಾರೆ.

ಈ ಘಟನೆ ಬಗ್ಗೆ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಘಟನೆಯ ಬಗ್ಗೆ ಇಂಚಿಂಚು ಮಾಹಿತಿ ಬಿಚ್ಚಿಟ್ಟಿದ್ದಾರೆ. ನನ್ನ ಜೀವನದಲ್ಲಿಯೇ ವಿಮಾನದಲ್ಲಿ ಇದು ಮೊದಲ ಬಾರಿಗೆ ಆದಂತ ಅನುಭವ. ಅತ್ಯಂತ ಕೆಟ್ಟ ಅನುಭವ. ನಾವೀಗ ಸುರಕ್ಷಿತವಾಗಿದ್ದೇವೆ. ಥ್ಯಾಂಕ್ ಗಾಡ್ ಜೈ ಆಂಜನೇಯ. ದೇವರ ಆಶೀರ್ವಾದ, ಅಭಿಮಾನಿಗಳ ಹಾರೈಕೆ, ಜೀವ ಹಾನಿಯಿಂದ ತಪ್ಪಿಸಿಕೊಂಡಿದೆ. ಮೊದಲ ಬಾರಿಗೆ ಸಾವನ್ನು ಎದುರಿಸಿ, ಜೀವ ಸಿಕ್ಕಂತಾಗಿದೆ. ನನ್ನ ತಂದೆ ತಾಯಿ, ನನ್ನ ವಿಐಪಿಗಳು ಹಾಗೂ ನನ್ನ ದೇವರು ಚಿರು ಅಣ್ಣನ ಸಂಪೂರ್ಣ ಆಶೀರ್ವಾದದ ಫಲ ಇದು.

ವಿಮಾನದಲ್ಲಿದ್ದ ಪ್ರತಿ ಪ್ರಯಾಣಿಕರು ತಮ್ಮ ಪ್ರಾಣಕ್ಕಾಗಿ ತಮ್ಮ ದೇವರಿಗೆ ಜೋರಾಗಿ ಪ್ರಾರ್ಥಸುವುದನ್ನು, ಕೇಳುವುದು ನಿಜಕ್ಕೂ ಉಸಿರು ತೆಗೆದುಕೊಳ್ಳುವ ಅನುಭವ. ಸುರಕ್ಷಿತವಾಗಿ ಬಂದಿಳಿಯುತ್ತಿದ್ದಂತೆ ಪ್ರಯಾಣಿಕರು ಸಂತೋಷದಿಂದ ಕಣ್ಣೀರು ಹಾಕಿದರು. ಪ್ರತಿಯೊಬ್ಬರು ತಮ್ಮ ಪ್ರೀತಿ ಪಾತ್ರರಿಗೆ ಕರೆ ಮಾಡಿ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ. ಇದು ಪುನರ್ಜನ್ಮವಾಗಿದೆ. ನಮಗೆಲ್ಲರಿಗೂ ಜೀವನವನ್ನು ಪೂರ್ಣವಾಗಿ ಬದುಕಲು ಅವಕಾಶ ಮತ್ತೆ ಸಿಕ್ಕಿದೆ ಎಂದು ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *