ನವದೆಹಲಿ: ಜ್ಞಾನಪೀಠ ಪ್ರಶಸ್ತಿ ಆಯ್ಕೆ ಸಮಿತಿಯಿಂದ ಇಬ್ಬರ ಹೆಸರನ್ನು ಆಯ್ಕೆ ಮಾಡಲಾಗಿದೆ. ಉರ್ದು ಕವಿ ಗುಲ್ಜಾರ್ ಹಾಗೂ ಅಂಧರಾಗಿದ್ದು ಪುಸ್ತಕಗಳನ್ನು ಬರೆದಿರುವ ರಾಮಭದ್ರಾಚಾರ್ಯ ಅವರಿಗೆ ಜ್ಞಾನಪೀಠ ಪ್ರಶಸ್ತಿಯನ್ನು ಘೋಷಣೆ ಮಾಡಲಾಗಿದೆ. 2023ರ ಜ್ಞಾನಪೀಠ ಪ್ರಶಸ್ತಿಯನ್ನು ಘೋಷಣೆ ಮಾಡಲಾಗಿದೆ.
ಉರ್ದು ಕವಿ ಗುಲ್ಜಾರ್ ಹಿಂದಿ ಸಿನಿಮಾ ಹಾಗೂ ಕಾವ್ಯಕ್ಕೆ ಸಾಕಷ್ಟು ಕೊಡುಗೆಗಳನ್ನು ನೀಡಿದ್ದಾರೆ. ಕವಿ ಗುಲ್ಜಾರ್ ಅವರಿಗೆ ಈ ಹಿಂದೆ ಸಾಹಿತ್ಯ ಅಕಾಡೆಮಿ ಮತ್ತು ದಾದಾ ಸಾಹೇಬ್ ಪಾಲ್ಕೆ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿಗಳು ಕೂಡ ಸಂದಿದೆ. 2002ರಲ್ಲಿ ಉರ್ದು ಸಾಹಿತ್ಯ ಅಕಾಡೆಮಿ ಪ್ರಶಸ್ತಿ, 2013ರಲ್ಲಿ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಮತ್ತು 2004ರಲ್ಲಿ ಪದ್ಮಭೂಷಣ ಪ್ರಶಸ್ತಿಗಳಿಂದ ಪುರಸ್ಕೃತರಾಗಿದ್ದಾರೆ. ಅಲ್ಲದೆ ಹಿಂದಿ ಚಿತ್ರರಂಗದಲ್ಲಿನ ವಿವಿಧ ಕೆಲಸಗಳಿಗಾಗಿ ಐದು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನು ಪಡೆದಿದ್ದಾರೆ.
ಇನ್ನು ರಾಮಭದ್ರಾಚಾರ್ಯರು ಸಂಸ್ಕೃತ ವಿದ್ವಾಂಸರಾಗಿದ್ದಾರೆ. ಅಂಧರಾಗಿದ್ದರು ಮಾಡಿದ ಸಾಧನೆ ಕಡಿಮೆ ಏನು ಅಲ್ಲ. ಆಯ್ಕೆ ಸಮಿತಿ ಅವರ ಸಾಧನೆಯನ್ನು ಗುರುತಿಸಿ ಜ್ಞಾನಪೀಠ ಪ್ರಶಸ್ತಿಯನ್ನು ಘೋಷಣೆ ಮಾಡಲಾಗಿದೆ. ಮಧ್ಯಪ್ರದೇಶದ ಚಿತ್ರಕೂಟದ ತುಳಸಿ ಪೀಠದ ಸಂಸ್ಥಾಪಕರೂ ಹಾಗೂ ಮುಖ್ಯಸ್ಥರಾದ ರಾಮಭದ್ರಚಾರ್ಯರು. ಹಿಂದೂ ಆಧ್ಯಾತ್ಮಿಕ ಗುರುವಾಗಿಯೂ ಗುರುತಿಸಿಕೊಂಡಿರುವ ಇವರು 100ಕ್ಕೂ ಹೆಚ್ಚು ಪುಸ್ತಕಗಳನ್ನು ಬರೆದಿದ್ದಾರೆ.