ಚಿಕ್ಕಬಳ್ಳಾಪುರ: ಸದ್ಯ ತೈಲ ಬೆಲೆ ಕೊಂಚ ಇಳಿಕೆಯಾಗಿದ್ದು, ಗ್ರಾಹಕರು ನಿಟ್ಟುಸಿರು ಬಿಡುವಂತೆಯಾಗಿದೆ. ಈ ಬಗ್ಗೆ ಸಚಿವ ಸುಧಾಕರ್ ಕಾಂಗ್ರೆಸ್ ನವರಿಗೆ ತಿರುಗೇಟು ಕೊಟ್ಟಿದ್ದಾರೆ. ತೈಲ ಬೆಲೆ ಇಳಿಕೆ ಮಾಡಿ ಎಂದು ಕಾಂಗ್ರೆಸ್ ಅವರು ಬಾಯಿ ಬಾಯಿ ಬಡಿದುಕೊಳ್ಳುತ್ತಿದ್ರಲ್ಲಾ? ಏಕೆ ಕಾಂಗ್ರೆಸ್ ಅಧಿಕಾರ ಇರುವ ರಾಜ್ಯದವರು ಕಡಿಮೆ ಮಾಡಲಿಲ್ಲ? ಬರೀ ಬಿಜೆಪಿಯವರು ಅಧಿಕಾರದ ರಾಜ್ಯಗಳಲ್ಲಿ ಮಾತ್ರ ಮಾಡಿದ್ದೇವೆ. ರಾಹುಲ್ ಗಾಂಧಿ ಅವರು ಎಲ್ಲಿ ಹೋಗಿದ್ದಾರೆ ಕಾಣಿಸ್ತಿಲ್ಲ? ಏಕೆ? ಅವರು ಕಾಂಗ್ರೆಸ್ ಅಧಿಕಾರದ ರಾಜ್ಯದವರಿಗೆ ಇಳಿಕೆ ಮಾಡಿ ಎಂದು ಆದೇಶ ಮಾಡಕ್ಕಗಲ್ವಾ? ಎಂದು ವ್ಯಂಗ್ಯವಾಡಿದ್ದಾರೆ.
ಇನ್ನು ಬೈ ಎಲೆಕ್ಷನ್ ಫಲಿತಾಂಶದಿಂದ ತೈಲ ಬೆಲೆ ಇಳಿಕೆ ಮಾಡಿದ್ದಲ್ಲ. ಎರಡು ತಿಂಗಳ ಹಿಂದೆ ಬೊಮ್ಮಾಯಿ ಅವರ ಜೊತೆ ದೆಹಲಿಗೆ ಹೋಗಿದ್ವಿ. ಆಗ ನಿರ್ಮಲಾ ಸೀತರಾಮನ್ ಅವರು ಹೇಳಿದ್ದರು. ತೈಲ ಬೆಲೆ ಇಳಿಕೆ ಬಗ್ಗೆ ಲೆಕ್ಕಚಾರ ಮಾಡಿದ್ದೇವೆ ಎಂದು ಹೇಳಿದ್ದರು. ಬೈ ಎಲೆಕ್ಚನ್ ರಿಸಲ್ಟ್ ನಿಂದ ಇಳಿಸಿದ್ದರೆ, ಯಾಕೆ ಹತ್ತಾರು ರಿಸಲ್ಟ್ ಬಂತಲ್ಲ ಆಗಲೇ ಇಳಿಸಬಹುದಿತ್ತು ಎಂದಿದ್ದಾರೆ.
ವಿರೋಧ ಪಕ್ಷದವರು ಹೇಳುವ ಹಾಗೇ ಕಡಿಮೆ ಮಾಡಿಲ್ಲ. ಎರಡ್ಮೂರು ತಿಂಗಳ ಹಿಂದೆಯೇ ಯಾವ ಪ್ರಮಾಣದಲ್ಲಿ ತೈಲ ಬೆಲೆ ಇಳಿಕೆ ಮಾಡಬೇಕೆಂಬುದು ಚಿಂತೆ ಮಾಡಿದ್ವಿ. ಪಂಜಾಬ್, ಛತ್ತೀಸ್ ಘಡದಲ್ಲಿ ಏಕೆ ಮಾಡಲಿಲ್ಲ? ಕಾಂಗ್ರೆಸ್ ಇರೋ ಕಡೆ ರಾಜ್ಯಗಳಲ್ಲೂ ಸಹ ಕೇಂದ್ರ ಸರ್ಕಾರದಿಂದ ಕಡಿಮೆ ಮಾಡಲಾಗಿದೆ. ಕರ್ನಾಟಕದಲ್ಲಿ 07 ರೂ. ಮಾಡಿದ್ದೇವೆ. ಕಾಂಗ್ರೆಸ್ ಅವರು ಏಕೆ ಮಾಡ್ತಿಲ್ಲ? ಎಂದು ಪ್ರಶ್ನಿಸಿದ್ದಾರೆ.