Notice: Undefined index: options in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಪರಶುರಾಂಪುರವನ್ನು ತಾಲ್ಲೂಕು ಕೇಂದ್ರವನ್ನಾಗಿ ಘೋಷಣೆ ಮಾಡಿ : ಪಿಲ್ಲಹಳ್ಳಿ ಸಿ.ಚಿತ್ರಲಿಂಗಪ್ಪ ಒತ್ತಾಯ

Facebook
Twitter
Telegram
WhatsApp

ವರದಿ ಮತ್ತು ಫೋಟೋ ಕೃಪೆ,  ಸುರೇಶ್ ಪಟ್ಟಣ್,                         ಮೊ : 98862 95817

ಸುದ್ದಿಒನ್, ಚಿತ್ರದುರ್ಗ ಫೆ. 15 :  ಆಂಧ್ರ ಗಡಿಭಾಗದಲ್ಲಿ ಪರಶುರಾಂಪುರವನ್ನು ತಾಲ್ಲೂಕು ಕೇಂದ್ರವನ್ನಾಗಿ ಘೋಷಣೆ ಮಾಡುವಂತೆ ಒತ್ತಾಯಿಸಿ ಜಿಲ್ಲಾಧಿಕಾರಿಗಳವರ ಮೂಲಕ ಸರ್ಕಾರವನ್ನು ಸಾಮಾಜಿಕ ಹೋರಾಟಗಾರ ಪಿಲ್ಲಹಳ್ಳಿ ಸಿ.ಚಿತ್ರಲಿಂಗಪ್ಪ ಒತ್ತಾಯಿಸಿದ್ದಾರೆ. 

ಹುಂಡೇಕರ್ ಸಮಿತಿ, 2008ರ ಎಂ.ಬಿ.ಪ್ರಕಾಶ್ ಸಮಿತಿ ವರದಿ ಅನ್ವಯ ಆಂಧ್ರ ಗಡಿಭಾಗದ ಚಿತ್ರದುರ್ಗ ಜಿಲ್ಲೆಯ ಅತ್ಯಂತ ದೊಡ್ಡ ಹೋಬಳಿ ಕೇಂದ್ರವಾದ ಪರಶುರಾಂಪುರವನ್ನು ತಾಲ್ಲೂಕ್ ಆಗಿ ಘೋಷಣೆ ಮಾಡಬಹುದು ಎನ್ನುವ ಶಿಫಾರಸ್ಸು ಮಂಡಿಸಲಾಗಿತ್ತು. ಶಿಫಾರಸ್ಸಿನ ವರದಿ ಅನ್ವಯ ನಮ್ಮಗಳ ಆಳುವ ಸರ್ಕಾರಗಳು ಈಗಾಗಲೇ ಪರಶುರಾಂಪುರವನ್ನು ತಾಲ್ಲೂಕ್ ಆಗಿ ಘೋಷಣೆ ಮಾಡಿದ್ದರೆ ಇತಿಹಾಸದ ಪುಟ ಸೇರುತಿತ್ತು ಪರಶುರಾಂಪುರ. ತಾಲ್ಲೂಕ್ ಆಗಲಿಕ್ಕೆ ಮಾನದಂಡದ ಕಡತಗಳು ಹಾಗೂ ವಿಷಯಗಳು ಸರ್ಕಾರದ ಬಳಿಯಿವೆ. ಕಳೆದ 30 ವರ್ಷಗಳಿಂದ ಆಯಾ ಪಕ್ಷದ ಸರ್ಕಾರಗಳಿಗೆ, ಆಯಾಪಕ್ಷದ ಮುಖ್ಯಮಂತ್ರಿಗಳಿಗೆ ಮನವಿಗಳನ್ನು ಸಲ್ಲಿಸುತ್ತಾ ಬಂದಿದ್ದೇವೆ. ನಿರಂತರ ವಿವಿಧ ತೆರನಾದ ಹೋರಾಟಗಳನ್ನು ಮಾಡುತ್ತಾ ಬಂದು ಸರ್ಕಾರದ ಗಮನ ಸೆಳೆದಿದ್ದೇವೆ.

ರಾಜಕೀಯ ಸ್ಥಿತ್ಯಾಂತರ ಕಾರಣಗಳ ನೆಪದೊಡ್ಡಿ ಮೀನಾಮೇಷ ಏಣಿಸುತ್ತಾ ಪರಶುರಾಂಪುರವನ್ನು ತಾಲ್ಲೂಕು ಆಗಿ ಘೋಷಣೆ ಮಾಡದಿರುವುದು ಈ ಭಾಗದ ಜನ ಸಾಮಾನ್ಯರಿಗೆ ಅತ್ಯಂತ ನೋವಿನ ಸಂಗತಿಯಾಗಿದೆ. 2019ರ ವಿಧಾನಸಭೆ ಚುನಾವಣಾ ಸಂದರ್ಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಮನವಿಸಲ್ಲಿಸಲಾಗಿತ್ತು. ಆಗ ಅವರು ಬಹಿರಂಗ ಸಭೆಯಲ್ಲಿ ಪರಶುರಾಂಪುರವನ್ನು ತಾಲ್ಲೂಕ್ ಆಗಿ ಘೋಷಣೆ ಮಾಡುತ್ತೇನೆ ಎಂದು ಹೇಳಿದ್ದರು.

2023ರ ವಿಧಾನಸಭಾ ಚುನಾವಣೆ ಸಂದರ್ಭದ ಬಹಿರಂಗ ಸಭೆಯಲ್ಲಿ ಸೇರಿದ್ದ ಜನರಿಗೆ ನಮ್ಮ ಸರ್ಕಾರ ಬರುವುದು ನಿಶ್ಚಿತ, ಪರಶುರಾಂಪುರ ತಾಲ್ಲೂಕ್ ಆಗುವುದು ನಿಶ್ಚಿತ ಎಂದು ಭರವಸೆಯಿತ್ತಿದ್ದರು. ಆದರೆ ಸರ್ಕಾರ ಬಂದು ಇಷ್ಟು ದಿನವಾದರೂ ಸಹಾ ಪರಶುರಾಂಪುರ ತಾಲ್ಲೂಕ್ ಆಗಿ ಘೋಷಣೆ ಆಗಿಲ್ಲ. ಚಳ್ಳಕೆರೆ ವಿಧಾನಸಭಾ ಕ್ಷೇತ್ರದ 3ನೇ ಬಾರಿ ಶಾಸಕರಾದ  ಟಿ.ರಘುಮೂರ್ತಿ ರವರು, 2023ರ 3ನೇ ಬಾರಿ ಶಾಸಕರಾದ ಸಂದರ್ಭದಲ್ಲಿ ಪರಶುರಾಂಪುರ ತಾಲ್ಲೂಕ್ ಆಗಿ ಘೋಷಣೆ ಆಗದಿದ್ದರೆ ರಾಜಕೀಯದಿಂದ ನಿವೃತ್ತಿ ಪಡೆಯುತ್ತೇನೆ’ ಎಂದು ಶಪಥ ಮಾಡಿದ್ದಲ್ಲದೆ ಎರಡು ಬಾರಿ ಅಧಿವೇಶನದಲ್ಲಿ ಸರ್ಕಾರದ ಗಮನಕ್ಕೆ ತಂದು ಮಾತನಾಡಿದ್ದಾರೆ. ಹಾಗೂ ಮಾಡಲೇಬೇಕು, ಪರಶುರಾಂಪುರ ಹೋಬಳಿಯ ಜನಸಾಮಾನ್ಯರಿಗೆ ಸಾಮಾಜಿಕ ನ್ಯಾಯ ಒದಗಿಸಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಮುಖ್ಯಮಂತ್ರಿಯವರು ಬಜೆಟ್ ಮಂಡಿಸುವ ಸಂದರ್ಭದಲ್ಲಿ ಹಾಗೂ ಅಧಿವೇಶನದಲ್ಲಿ ಪರಶುರಾಂಪುರವನ್ನು ತಾಲ್ಲೂಕ್ ಆಗಿ ಘೋಷಣೆ ಮಾಡಲೆಬೇಕೆಂದು ಇಡೀ ಪರಶುರಾಮಪುರ ಜನಸಾಮಾನ್ಯರ ಪರವಾಗಿ ಸಾಮಾಜಿಕ ಹೋರಾಟಗಾರ ಪಿಲ್ಲಹಳ್ಳಿ ಸಿ.ಚಿತ್ರಲಿಂಗಪ್ಪ ಪ್ರಗತಿಪರ ರೈತ ಹೋರಾಟಗಾರರಾದ ಹಾಲಿಗೊಂಡನಹಳ್ಳಿ, ಕೆ.ವಿ.ರುದ್ರಮುನಿಯಪ್ಪ, ಪರಶುರಾಂಪುರದ ರೈತ ಮುಖಂಡ ಬಿ.ಕೆ.ರಜಾಕ್ ಸಾಬ್, ಚಂದ್ರಣ್ಣ, ಪಿಲ್ಲಹಳ್ಳಿ ಪ್ರಸನ್ನ ಕುಮಾರ್ ಮನವಿ ಮಾಡಿದ್ದಾರೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಅಕ್ರಮ ಕಸಾಯಿ ಖಾನೆ ಬಂದ್ ಮಾಡಿ : ದಾದಾ ಪೀರ್ ಆಗ್ರಹ : ವಿಡಿಯೋ ವೈರಲ್..!

ಸುದ್ದಿಒನ್, ಹಿರಿಯೂರು : ಅಕ್ರಮವಾಗಿ ಕಸಾಯಿ ಖಾನೆ ನಡೆಸುತ್ತಿರುವವರ ವಿರುದ್ಧ ದಾದಾ ಪೀರ್ ಎಂಬುವವರು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ. ದಾದಾ ಪೀರ್ 6ನೇ ವಾರ್ಡ್ ನಲ್ಲಿ ವಾಸಿಸುವವ ವ್ಯಕ್ತಿಯಾಗಿದ್ದಾರೆ. ಕಸಾಯಿ ಖಾನೆಯಿಂದ ಮಕ್ಕಳು ಅನಾರೋಗ್ಯಕ್ಕೆ

ಬದುಕಿನಲ್ಲಿ ರಂಗಭೂಮಿ ಉತ್ತಮ ಮಾರ್ಗದರ್ಶನ ನೀಡುತ್ತದೆ : ಡಾ.ಬಸವಕುಮಾರ ಸ್ವಾಮೀಜಿ

    ಸುದ್ದಿಒನ್, ಚಿತ್ರದುರ್ಗ, ನವೆಂಬರ್. 22: ಜೀವನ ಒಂದು ನಾಟಕರಂಗ ನಾವುಗಳು ಅದರ ಪಾತ್ರಧಾರಿಗಳು. ಬದುಕಿನಲ್ಲಿ ನಾನಾ ಕಷ್ಟಸುಖಗಳು ಬರುತ್ತವೆ. ಅದಕ್ಕೆಲ್ಲಾ ಉತ್ತಮ ಮಾರ್ಗದರ್ಶನ ನೀಡುವುದು ರಂಗಭೂಮಿ ಮಾತ್ರ ಎಂದು ಎಸ್.ಜೆ.ಎಮ್. ವಿದ್ಯಾಪೀಠದ

ಉಪಚುನಾವಣೆ ಫಲಿತಾಂಶದ ಬಳಿಕ ಸಂಪುಟ ವಿಸ್ತರಣೆ : ಡಿಕೆ ಶಿವಕುಮಾರ್ ಹೇಳಿದ್ದೇನು..?

ಮುರುಡೇಶ್ವರ: ರಾಜ್ಯದ ಉಪಚುನಾವಣೆ, ಮಹಾರಾಷ್ಟ್ರ ಎಲೆಕ್ಷನ್ ಮುಗಿಸಿಕೊಂಡು ಡಿಸಿಎಂ ಡಿಕೆ ಶಿವಕುಮಾರ್ ತಮ್ಮ ಪತ್ನಿ ಜೊತೆಗೆ ಬಿಜಚ್ ಕಡೆಗೆ ಹೋಗಿದ್ದಾರೆ. ಮುರುಡೇಶ್ವರ ಬೀಚಗ ಸದ್ದಿನಲ್ಲಿ ಕೂತು ಕೊಂಚ ರಿಲ್ಯಾಕ್ಸ್ ಆಗಿದ್ದಾರೆ. ಇದೇ ವೇಳೆ ಸಂಪುಟ

error: Content is protected !!