Notice: Undefined index: options in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಕೇಂದ್ರ ಸರ್ಕಾರ ಅಪ್ಪರ್ ಭದ್ರಾ ಯೋಜನೆಗೆ ಹಣ ಬಿಡುಗಡೆ ಮಾಡುತ್ತಿಲ್ಲ ಯಾಕೆ ? ಕೇಂದ್ರ ಸಚಿವ ಎ.ನಾರಾಯಣಸ್ವಾಮಿ ಹೇಳಿದ್ದೇನು ?

Facebook
Twitter
Telegram
WhatsApp

 

ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817

ಸುದ್ದಿಒನ್, ಚಿತ್ರದುರ್ಗ ಫೆ. 11 :  ಕೇಂದ್ರ ಸರ್ಕಾರ ಅಪ್ಪರ್ ಭದ್ರಾ ಯೋಜನೆಗೆ ಹಣವನ್ನು ನೀಡಲು ತಯಾರು ಇದೆ. ಆದರೆ, ರಾಜ್ಯ ಸರ್ಕಾರದಿಂದ ಇದಕ್ಕಾಗಿ ಪ್ರತ್ಯೇಕವಾಗಿ ಬ್ಯಾಂಕ್ ಆಕೌಂಟ್‍ನ್ನು ತೆರೆಯಬೇಕಿದೆ.  ಆದರೆ ಈ ಕೆಲಸವನ್ನು ರಾಜ್ಯ ಸರ್ಕಾರ ಮಾಡುತ್ತಿಲ್ಲ. ಇದರಿಂದ ಕೇಂದ್ರ ಸರ್ಕಾರ ಹಣವನ್ನು ನೀಡುತ್ತಿಲ್ಲ ಎಂದು ಕೇಂದ್ರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ರಾಜ್ಯ ಸಚಿವರಾದ ಎ.ನಾರಾಯಣಸ್ವಾಮಿ ಕಾಂಗ್ರೆಸ್‍ಗೆ ತಿರುಗೇಟು ನೀಡಿದರು.

ಚಿತ್ರದುರ್ಗದಿಂದ ಆಯೋಧ್ಯಗೆ ಹೋಗುತ್ತಿರುವ ಭಕ್ತಾಧಿಗಳಿಗೆ ರೈಲ್ವೆ ನಿಲ್ದಾಣದಲ್ಲಿ ಹಮ್ಮಿಕೊಂಡಿದ್ದ ಬೀಳ್ಕೂಡುಗೆ ಸಮಾರಂಭದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರ ಸರ್ಕಾರ ನೀಡುವ ಹಣವನ್ನು ಆದಕ್ಕೆ ಮಾತ್ರ ಉಪಯೋಗ ಮಾಡಬೇಕಿದೆ ಅದು ಬಿಟ್ಟು ಬೇರೆದಕ್ಕೆ ಉಪಯೋಗ ಮಾಡಬಾರದು ಇದು ಕೇಂದ್ರದ ನಿಯಮವಾಗಿದೆ ಆದರೆ ಕೆಲವರು ಉದ್ದೇಶಕ್ಕೆ ಬಿಟ್ಟು ಬೇರೆದಕ್ಕೆ ಬಳಕೆ ಮಾಡುತ್ತಾರೆ ಈ ಹಿನ್ನಲೆಯಲ್ಲಿ ಇದಕ್ಕಾಗಿ ಬ್ಯಾಂಕ್‍ನಲ್ಲಿ ಪ್ರತ್ಯೇಕವಾಗಿ ಆಕೌಂಟ್ ಮಾಡುವುದರ ಮೂಲಕ ಹಣವನ್ನು ವ್ಯಯ ಮಾಡಬೇಕಿದೆ ಎಂದರು.

ಸಿದ್ದರಾಮಯ್ಯನವರಿಗೆ ಮೋದಿಯವರ ಬಗ್ಗೆ ಹಗುರವನ್ನಾಗಿ ಮಾತನಾಡುವುದನ್ನು ಬಿಡಬೇಕಿದೆ. ದೇಶದ ಯಾವುದೇ ರಾಜ್ಯಕ್ಕೆ ಜಿ.ಎಸ್.ಟಿ. ಬಿಡುಗಡೆ ಮಾಡಿರಬಹುದು ಅಥವಾ ಆರ್ಥಿಕವಾಗಿ ಹಣವನ್ನು ಕೇಂದ್ರ ಸರ್ಕಾರ ಬಿಡುಗಡೆ ಮಾಡಬೇಕೊ ಅದಕ್ಕೆ ಅರ್ಥಿಕ ಇಲಾಖೆ ಇತ್ತೀಚಿನ ದಿನಮಾನದಲ್ಲಿ ಮಾನದಂಡವನ್ನು ರೂಪಿಸಿದೆ ಅನೇಕ ರಾಜ್ಯಗಳಲ್ಲಿ ಕೇಂದ್ರ ಸರ್ಕಾರ ಬಿಡುಗಡೆ ಮಾಡಿದ ಹಣವನ್ನು ಬೇರೆ ಕಾರ್ಯಕ್ಕೆ ಬಳಕೆ ಮಾಡಲಾಗುತ್ತಿದೆ ಇದನ್ನು ತಪ್ಪಿಸುವ ಸಲುವಾಗಿ ಕೇಂದ್ರ ಸರ್ಕಾರ ಇದಕ್ಕಾಗಿ ಪ್ರತ್ಯೇಕವಾಗಿ ಆಕೌಂಟ್‍ನ್ನು ತರೆಯುವಂತೆ ಸೂಚನೆ ಯನ್ನು ನೀಡಿತ್ತು.

ರಾಜ್ಯ ಸರ್ಕಾರಗಳು ಕೇಂದ್ರ ಸರ್ಕಾರ ನಿರ್ದೇಶನದಂತೆ ಪತ್ಯೇಕವಾದ ಆಕೌಂಟುಗಳನ್ನು ತೆರೆಯದೆ ಕೇಂದ್ರ ಹಣವನ್ನು ನೀಡಿದ ತಕ್ಷಣವೇ ಅದನ್ನು ಡ್ರಾ ಮಾಡುವ ರಾಜ್ಯ ಸರ್ಕಾರಗಳಿಗೆ ಕೇಂದ್ರ ಸರ್ಕಾರ ನೋಡಿಕೊಂಡು ಇರಲು ಸಾಧ್ಯವಿಲ್ಲ, ಕೇಂದ್ರ ಸರ್ಕಾರ ಭದ್ರ ಮೇಲ್ದಂಡೆಗಾಗಿ ಪ್ರತ್ಯೆಕವಾಗಿ ಎಸ್ರೋ ಆಕೌಂಟ್‍ನ್ನು ಮಾಡುವಂತೆ ಕೇಂದ್ರ ಸರ್ಕಾರ ರಾಜ್ಯ ಸರ್ಕಾರಕ್ಕೆ ಹಲವಾರು ಬಾರಿ ಸೂಚನೆಯನ್ನು ನೀಡಿತ್ತು.  ಆದರೆ ರಾಜ್ಯ ಸರ್ಕಾರ ಇದುವರೆವಿಗೂ ಎಸ್ರೋ ಆಕೌಂಟ್‍ನ್ನು ಮಾಡಿಲ್ಲ, ಇದು ಬಿಟ್ಟು ಕೇಂದ್ರ ಸರ್ಕಾರದ ಮೇಲೆ ಆಪಾದನೆಯನ್ನು ಮಾಡುವುದರಿಂದ ಏನು ಪ್ರಯೋಜ ಇಲ್ಲ ಅರ್ಥ ಸಚಿವರ ಇಲಾಖೆಯ ಅಧಿಕಾರಿಗಳ ಜೊತೆಯಲ್ಲಿ ಮಾತನಾಡಿ ಸಮಸ್ಯೆಯನ್ನು ಪರಿಹಾರ ಮಾಡಿಕೊಳ್ಳಬೇಕಿದೆ ಎಂದು ಮುಖ್ಯಮಂತ್ರಿಗಳಿಗೆ ನಾರಾಯಣಸ್ವಾಮಿ ತಿಳಿಸಿದರು.

ರಾಜ್ಯ ಸರ್ಕಾರ ಈ ಕೊಡಲೇ ಎಸ್ರೋ ಅಕೌಂಟ್‍ನ್ನು ಪ್ರಾರಂಭ ಮಾಡಿ ಕಡತವನ್ನು ಕೇಂದ್ರಕ್ಕೆ ಕಳುಹಿಸಿದರೆ ಸಂಬಂಧಪಟ್ಟ ಸಚಿವರ ಜೊತೆಯಲ್ಲಿ ಮಾತನಾಡಿ ಹಣವನ್ನು ಬಿಡುಗೆಡೆ ಮಾಡುವಲ್ಲಿ ಪ್ರಮಾಣಿಕ ಪ್ರಯತ್ನವನ್ನು ಮಾಡಲಾಗುವುದು. ಅಪ್ಪರ್ ಭದ್ರಾ ಯೋಜನೆಯಲ್ಲಿ ಸರಿಯಾದ ರೀತಿಯಲ್ಲಿ ಕೆಲಸ ನಡೆಯುತ್ತಿಲ್ಲ ಈ ಹಿನ್ನಲೆಯಲ್ಲಿ ಕೇಂದ್ರ ಸರ್ಕಾರವೂ ಸಹಾ ಮೊದಲ ಕಂತಿನ ಹಣವನ್ನು ಬಿಡುಗಡೆ ಮಾಡಿ ತದ ನಂತರ ರಾಜ್ಯ ಸರ್ಕಾರದಿಂದ ಎಸ್ರೋ ಆಕೌಂಟನ್ನು ಪ್ರಾರಂಭಿಸುವಂತೆ ಒತ್ತಾಯವನ್ನು ಮಾಡುವಂತೆ ಕೇಂದ್ರ ಸಚಿವರ ಬಳಿ ತಿಳಿಸಿದ್ದೇನೆ ಎಂದ ಸಚಿವರು, ಇದರ ಬಗ್ಗೆ ಬೇಗ ಪ್ರಧಾನ ಮಂತ್ರಿಗಳನ್ನು ಬೇಟಿ ಮಾಡಿ ಆದಷ್ಟು ಬೇಗ ಪ್ರಧಾನ ಮಂತ್ರಿಗಳನ್ನು ಬೇಟಿ ಮಾಡಿ ಭದ್ರಾಕ್ಕೆ ಹಣವನ್ನು ಬಿಡುಗಡೆ ಮಾಡುವ ವ್ಯವಸ್ಥೆಯನ್ನು ಮಾಡಲಾಗುವುದು. 1900 ಕೋಟಿ ಹಣವನ್ನು ರೈಲ್ವೆ ಇಲಾಖೆ ಬಿಡುಗಡೆ ಮಾಡಲಾಗಿದೆ. ಟೆಂಡರ್ ನಡೆಯುತ್ತಿದೆ. ರಾಜ್ಯ ಸರ್ಕಾರ ಕೇಂದ್ರದ ಸೂಚನೆಯನ್ನು ಪಾಲನೆ ಮಾಡಬೇಕಿದೆ. ಹಣವನ್ನು ಕೇಳಬೇಕಿದೆ ಎಂದು ತಿಳಿಸಿದರು.

ರಣತಂತ್ರವನ್ನು ರೂಪಿಸುವುದಕ್ಕೆ ಇರುವುದು ರಾಜಕೀಯ ಪಕ್ಷ ಇದೆ. ರಣತಂತ್ರ ರೂಪಿಸುವುದಕ್ಕೆ ಇರುವುದೇ ರಾಜಕೀಯ ಪಕ್ಷ. ರಣತಂತ್ರವನ್ನು ರೂಪಿಸುವ ಅವಶ್ಯಕತೆ ದೇಶದಲ್ಲಿ ಇಲ್ಲ, ಬಿಜೆಪಿ ಮೋದಿಯವರ ಹತ್ತು ವರ್ಷಗಳ ಆಡಳಿತ ಮತ್ತು ಅಭೀವೃದಿ, ವಿಕಸಿತ ಭಾರತ ದೇಶದ ಪ್ರತಿ ಮನೆಗೆ ಕೇಂದ್ರ ಸರ್ಕಾರದ ಹತ್ತು ವರ್ಷದ ಸಾಧನೆಯನ್ನು ಮತದಾರರಿಗೆ ತಿಳಿಸಿದ್ದಿವಿ ರಣತಂತ್ರದ ಅವಶ್ಯಕತೆ ಇಲ್ಲ, ಬಿಜೆಪಿ ಕಾರ್ಯಕರ್ತರಿಗಿಂತ ದೇಶದ ವಿರೋಧ ಪಕ್ಷದನಾಯಕರು 2024ರ ಚುನಾವಣೆಯಲ್ಲಿ 400ಕ್ಕಿಂತ ಹೆಚ್ಚು ಸ್ಥಾನ ಬಿಜೆಪಿಗಳಿಸಲಿದೆ ಎಂಬ ವಿಶ್ವಾಸ ಕಾಂಗ್ರೆಸ್‍ರವರಿಗೆ ಇರುವುದಾದರೆ ಮತದಾರರ ವಿಶ್ವಾಸವನ್ನು ಹೇಳುವುದಿಲ್ಲ. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ರಾಷ್ಟ್ರೀಯ ಪಕ್ಷಗಳು ಸ್ಥಳಿಯರಿಗೆ ಟೀಕೇಟ್ ನೀಡಲಿ ಅವಕಾಶವನ್ನು ನೀಡುವುದು ಎಲ್ಲಾ ರಾಷ್ಟ್ರ ಪಕ್ಷಗಳ ಅಗತ್ಯ ಇದೆ. ಇದರ ಬಗ್ಗೆ ಚರ್ಚೆಯಾಗುತ್ತಿದೆ ಎಂದರು.

ನಾನು ರಾಜಕಾರಣಿಯಲ್ಲ ನನ್ನನ್ನು ಕೆದಕಕ್ಕೆ ಹೋಗಬೇಡಿ, ಬಿಜೆಪಿಯ ನಿಷ್ಠಾವಂತ ಕಾರ್ಯಕರ್ತ, ಪಕ್ಷದ ಬೆಳವಣಿಗೆಯಲ್ಲಿ ನಾನು ಒಬ್ಬ ನಾನು ಎಲ್ಲಿ ಹೋಗುತ್ತೀಯ ಎಲ್ಲಿ ಬರುತ್ತೀಯ ಎಂದು ಕೆಣಕಕ್ಕೆ ಹೋಗಬೇಡಿ, ಬಿಜೆಪಿ ದೇಶದ ಅಭಿವೃದ್ದಿ ದೃಷ್ಟಿಯಿಂದ ಬರಬೇಕಿದೆ ಅಧಿಕಾರದ ದೃಷ್ಟಿಯಿಂದ ಅಲ್ಲ, ದೇಶವನ್ನು ವಿಶ್ವಕ್ಕೆ ಗುರು ರೀತಿಯಲ್ಲಿ ಸ್ಥಾನವನ್ನು ಪಡೆಯುವಂತ ಭಾರತವನ್ನು ಕಟ್ಟುವುದಕ್ಕೆ ಬಿಜೆಪಿ ಅವಶ್ಯಕತೆ ಇದೆ ಮೋದಿಯವರ ಆಡಳಿತ ಅವಶ್ಯಕತೆ ಇದೆ ಈ ದೃಷ್ಟಿಯಲ್ಲಿ ಮೋದಿಯವರ ಹೆಜ್ಜೆಯಲ್ಲಿ ಹೆಜ್ಜೆಯನ್ನು ಇಡುವ ಕಾರ್ಯಕರ್ತ ನಾರಾಯಣಸ್ವಾಮಿಯಾಗಿದ್ದಾರೆ ಎಂದರು.

ಈ ಸಂದರ್ಭದಲ್ಲಿ ವಿಧಾನ ಪರಿಷತ್ಯ ಸದಸ್ಯರಾದ ಕೆ.ಎಸ್.ನವೀನ್, ಆಯೋಧ್ಯೆಯ ಶ್ರೀರಾಮ ದರ್ಶನ ಅಭಿಯಾನದ ಸಂಚಾಲಕರಾದ ಜಗದೀಶ್ ಹಿರೇಮನಿ, ಬಿಜೆಪಿ ಮುಖಂಡರಾದ ಅನಿತ್‍ಕುಮಾರ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಈ ರಾಶಿಯವರ ವ್ಯವಹಾರಗಳು ನಷ್ಟವಾಗಲು ಅಕ್ಕಪಕ್ಕದವರ ಕೈಚಳಕವೇ ಕಾರಣ

ಈ ರಾಶಿಯವರ ವ್ಯವಹಾರಗಳು ನಷ್ಟವಾಗಲು ಅಕ್ಕಪಕ್ಕದವರ ಕೈಚಳಕವೇ ಕಾರಣ: ಈ ರಾಶಿಯ ಕುಟುಂಬದಲ್ಲಿ ಕಲಹಗಳು ಆಗಲು ದಾಯಾದಿಗಳೇ ಕಾರಣ : ಈ ರಾಶಿಯ ಗಂಡ ಹೆಂಡತಿ ದೂರವಾಗಲು ಹಿತೈಷಿಗಳೇ ಕಾರಣ : ಶನಿವಾರ-ರಾಶಿ ಭವಿಷ್ಯ

ಸಿಇಎನ್ ಪೊಲೀಸರ ದಾಳಿ : ಅಂತರ್ ರಾಜ್ಯ ಗಾಂಜಾ ಪೆಡ್ಲರ್ ಬಂಧನ

ಸುದ್ದಿಒನ್, ಚಿತ್ರದುರ್ಗ, ನವೆಂಬರ್. 22 : ಆಂದ್ರಪ್ರದೇಶದ ವಿಶಾಖಪಟ್ಟಣಂ ನಿಂದ ಗಾಂಜಾವನ್ನು ತಂದು ಚಿತ್ರದುರ್ಗ ನಗರಕ್ಕೆ ಬಂದು ಗಾಂಜಾ ಮಾರಾಟ ಮಾಡುತ್ತಿದ್ದ ಡ್ರಗ್ಸ್‌ ಪೆಡ್ಲರ್‌ನನ್ನು ಸಿಇಎನ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ಬಿಹಾರದ ಹರಿ ಓಂಕುಮಾರ್(24

ಪೆಟ್ರೋಲ್ ಬಂಕಿನಲ್ಲಿ ವಂಚನೆ ಆರೋಪ : ಗ್ರಾಹಕರು ಹಾಗೂ ಸಿಬ್ಬಂದಿಗಳ ನಡುವೆ ಮಾತಿನ ಚಕಮಕಿ

  ವರದಿ ಮತ್ತು ಫೋಟೋ ಕೃಪೆ ಸುರೇಶ್ ಬೆಳಗೆರೆ ಮೊ : 97398 75729 ಸುದ್ದಿಒನ್, ಚಳ್ಳಕೆರೆ, ನವೆಂಬರ್. 22 : ಬೈಕ್ ಗಳಿಗೆ ಪೆಟ್ರೋಲ್ ಹಾಕುವ ವೇಳೆ ಗ್ರಾಹಕರಿಗೆ ಇಲ್ಲಿನ ಸಿಬ್ಬಂದಿ ವಂಚನೆ

error: Content is protected !!