ಈ ಬಾರಿಯ ಬಿಗದ ಬಾಸ್ ಮನೆಯಲ್ಲಿ ಹೆಚ್ಚು ಗಮನ ಸೆಳೆದವರಲ್ಲಿ ವರ್ತೂರು ಸಂತೋಷ್ ಕೂಡ ಒಬ್ಬರು. ಮೈಮೇಲಿದ್ದ ಒಡವೆಗಳಿಂದಾನೇ ಹೆಚ್ಚು ಗಮನ ಸೆಳೆದಿದ್ದರು. ಜೊತೆಗೆ ಹಳ್ಳಿಕಾರ್ ಒಡೆಯ ಎಂದು ಫೇಮಸ್ ಆಗಿದ್ದ, ವರ್ತೂರು ಸಂತೋಷ್ ವಿಚಾರಕ್ಕೆ ಇದ್ದ ಕ್ರೇಜ್ ಏನು ಕಡಿಮೆ ಅಲ್ಲ. ಬಿಗ್ ಬಾಸ್ ಮನೆಯಿಂದ ಹೊರ ಬಂದ ಮೇಲೂ ವರ್ತೂರು ಸಂತೋಷ್ ಕ್ರೇಜ್ ಮುಂದುವರೆದಿದೆ. ಸನ್ಮಾನ, ಸಭೆ, ಸಮಾರಂಭಗಳು ನಡೆಯುತ್ತಲೆ ಇದೆ.
ವರ್ತೂರು ಸಂತೋಷ್ ಅವರಿಗೆ, ವರ್ತೂರು ಠಾಣೆಯ ಎಸ್ಐ ಆಗಿದ್ದ ತಿಮ್ಮರಾಯಪ್ಪ ಅವರು ನಿನ್ನೆಯಷ್ಟೇ ಸನ್ಮಾನ ಮಾಡಿದ್ದರು. ಅದರಲ್ಲೂ ಯೂನಿಫಾರ್ಮ್ ನಲ್ಲಿ, ವರ್ತೂರು ಸಂತೋಷ್ ಅವರು ಇದ್ದ ಜಾಗಕ್ಕೆ ಹೋಗಿ ಸನ್ಮಾನ ಮಾಡಿ ಬಂದಿದ್ದರು. ಇದೇ ವಿಚಾರಕ್ಕೆ ಇದೀಗ ಎಸ್ಐ ತಿಮ್ಮರಾಯಪ್ಪ ಅವರನ್ನು ಅಮಾನತು ಮಾಡಲಾಗಿದೆ.
ಎಸ್ಐ ತಿಮ್ಮರಾಜು ಅವರು ವರ್ತೂರು ಸಂತೋಷ್ ಇದ್ದ ಜಾಗಕ್ಕೆ ಹೋಗಿ ಸನ್ಮಾನ ಮಾಡಿದ್ದು, ಕೆಲವರ ವಿರೋಧಕ್ಕೆ ಕಾರಣವಾಗಿತ್ತು. ಅವರಿದ್ದ ಜಾಗಕ್ಕೆ ಹೋಗಿ ಸನ್ಮಾನ ಮಾಡುವುದು ಏನಿತ್ತು ಎಂದೇ ಪ್ರಶ್ನಿಸಿದ್ದಾರೆ. ವರ್ತೂರು ಸಂತೋಷ್ ಅವರು ಕೂಡ ಇತ್ತಿಚೆಗೆ ಜೈಲಿಗೆ ಹೋಗಿ ಬಂದಿದ್ದರು. ಹೀಗಾಗಿ ಸಾಕಷ್ಟು ವಿರೋಧ ವ್ಯಕ್ತವಾಗಿತ್ತು. ಇದೀಗ ಎಸ್ಐ ತಿಮ್ಮರಾಯಪ್ಪ ಅವರನ್ನು ವರ್ತೂರು ಠಾಣೆಯಿಂದ ಆಡುಗೋಡಿ ಠಾಣೆಗೆ ವರ್ಗಾವಣೆ ಮಾಡಿ ಆದೇಶಿಲಾಗಿದೆ.
ಬಿಗ್ ಬಾಸ್ ಮನೆಯಿಂದ ಬಂದ ಮೇಲೆ ವರ್ತೂರು ಸಂತೋಷ್, ತಮ್ಮ ಮನೆಯಲ್ಲಿ ದೊಡ್ಡದಾಗಿ ಕಾರ್ಯಕ್ರಮ ಮಾಡಿದ್ದರು. ಈ ಅದ್ದೂರಿ ಕಾರ್ಯಕ್ರಮಕ್ಕೆ ಬಿಗ್ ಬಾಸ್ ಮನೆಯ ಸದಸ್ಯರೆಲ್ಲರೂ ಭಾಗವಹಿಸಿದ್ದರು. ಎಲ್ಲರೂ ಮತ್ತೆ ಒಟ್ಟಾಗಿ ಸೇರಿ ಸಂಭ್ರಮಿಸಿದರು.