ಬೆಂಗಳೂರು: ಜಯದೇವ ಆಸ್ಪತ್ರೆಯ ನಿರ್ದೇಶಕರಾಗಿದ್ದ ಡಾ. ಮಂಜುನಾಥ್ ಅವರು ತಮ್ಮ ಅಧಿಕಾರಾವಧಿ ಮುಗಿದು, ಈಗ ನಿವೃತ್ತಿಯಾಗಿದ್ದಾರೆ. ಇದರ ನಡುವೆ ಅವರನ್ನು ರಾಜಕೀಯಕ್ಕೆ ಕರೆತೆಉವ ಪ್ರಯತ್ನ ನಡೆಯುತ್ತಿದೆ. ಮುಂಬರುವ ಲೋಕಸಭಾ ಚುನಾವಣೆಯಲ್ಲಿಯೇ ಅವರಿಗೆ ಟಿಕೆಟ್ ನೀಡುವುದಕ್ಕೆ ಬಿಜೆಪಿ ತಯಾರಿದೆ. ಇತ್ತಿಚೆಗಷ್ಟೇ ಮಾಜಿ ಸಿಎಂ ಕುಮಾರಸ್ವಾಮಿ ಅವರು ಈ ವಿಚಾರದ ಬಗ್ಗೆ ತಿಳಿಸಿದ್ದರು. ಬಿಜೆಪಿಯವರೇ ಟಿಕೆಟ್ ನೀಡುವುದಾಗಿ ಹೇಳುತ್ತಿದ್ದಾರೆ ಎಂದಿದ್ದರು.
ಇದೀಗ ಡಾ. ಮಂಜುನಾಥ್ ಅವರು ಚುನಾವಣೆಗೆ ಸ್ಪರ್ಧೆ ಮಾಡಲಿ ಎಂದು ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಪ್ತವೀಣ್ ಶೆಟ್ಟಿ ಅವರು ಕೂಡ ಬೆಂಬಲ ನೀಡಿದ್ದಾರೆ. ರಾಜ್ಯದ ಯಾವುದೇ ಕ್ಷೇತ್ರದಿಂದ ಬೇಕಾದರೂ ಅವೆಉ ಸ್ಪರ್ಧೆ ಮಾಡಲಿ, ಕರ್ನಾಟಕ ರಕ್ಷಣಾ ವೇದಿಕೆ ಸೇರಿದಂತೆ ಎಲ್ಲಾ ಕನ್ನಡ ಪರ ಸಂಘಟನೆಗಳು ಅವರಿಗಾಗಿ ಕೆಲಸ ಮಾಡುತ್ತೇವೆ. ಅತ್ಯಧಿಕ ಮತಗಳಿಂದ ಅವರನ್ನು ಗೆಲ್ಲಿಸಿಕೊಂಡು ಬರುತ್ತೇವೆ. ನಿವೃತ್ತಿಯಾಗಿ ಮನೆಯಲ್ಲಿರುವುದು ರಾಜ್ಯಕ್ಕೆ ಶೋಭೆಯಲ್ಲ. ಈ ಬಾರಿಯ ಚುನಾವಣೆಯಲ್ಲಿ ಸ್ಪರ್ಧಿಸಿ, ನಿಮ್ಮ ಸೇವೆ ನಾಡಿಗೆ ಅತ್ಯವಶ್ಯಕವಾಗಿದೆ ಎಂದು ಎಲ್ಲರು ಒತ್ತಾಯಿಸುತ್ತಿದ್ದಾರೆ.
ಜಯದೇವ ಆಸ್ಪತ್ರೆಯನ್ನೇ ದೇಶವೇ ನೋಡುವಂತೆ ಮಾಡಿದ್ದಾರೆ. ದೇಶದ ಹಿತ ದೃಷ್ಟಿಯಿಂದ ಸೂಕ್ತವಾದ ಸಲಹೆಗಳನ್ನು ನೀಡುತ್ತಾರೆ. ಪ್ರಧಾನ ಮಂತ್ರಿಗಳಿಗೆ ಮತ್ತು ಸಂಸದರಿಗೆ ಸಲಹೆ ನೀಡುತ್ತಾರೆ. ಹೀಗಾಗಿ ಅವರು ಈ ಬಾರಿಯ ಲೋಕಸಭಾ ಚುನಾವಣೆಗೆ ಸ್ಪರ್ಧಿಸುವಂತೆ ಇತ್ತಾಯಿಸುತ್ತೇವೆ ಎಂದು ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಪ್ರವೀಣ್ ಶೆಟ್ಟಿ ಹೇಳಿದ್ದಾರೆ.
ಜಯದೇವ ಆಸ್ಪತ್ರೆಯನ್ನು ಇಡೀ ದೇಶವೇ ತಿರುಗಿ ನೋಡುವಂತೆ ಮಾಡಿದ್ದು ಡಾ. ಮಂಜುನಾಥ್ ಅವರು. ಆದರೆ ಈಗ ನಿವೃತ್ತಿಯಾಗಿದ್ದಾರೆ. ಸರ್ಕಾರ ಇನ್ನಷ್ಟು ಅವಧಿ ಮುಂದುವರೆಸಿದ್ದರು ಅವರು ಖುಷಿಯಿಂದ ಸೇವೆ ಮಾಡುತ್ತಿದ್ದರು. ಆದರೆ ಆ ಜಾಗಕ್ಕೆ ಈಗ ಬೇರೆಯವರನ್ನು ತಂದು ಕೂರಿಸಿದ್ದಾರೆ.