Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಬಾಂಧವ್ಯ ಬೆಸೆಯುವ ಬೆಳಕಿನ ಹಬ್ಬ : ವಿಶೇಷ ಲೇಖನ : ಡಾ.ಸಂತೋಷ್

Facebook
Twitter
Telegram
WhatsApp

ಲೇಖಕರು : ಡಾ.ಸಂತೋಷ್
ದಂತ ವೈದ್ಯರು, ಹೊಳಲ್ಕೆರೆ
ಮೊ.ನಂ: 9342466936

ಬದಲಾಗುತ್ತಿರುವ  ಜೀವನಶೈಲಿ ಹಾಗೂ ಆಧುನಿಕತೆಯತ್ತ ಹೆಜ್ಜೆ ಹಾಕುತ್ತಿರುವ ಯುವಜನರಿಂದ ಜಗತ್ತೇ ಬದಲಾವಣೆಗೆ ತೆರೆದುಕೊಳ್ಳುತ್ತಿದೆ.
ಅದರಲ್ಲೂ ನಗರ ಹಾಗೂ ಪಟ್ಟಣ ಪ್ರದೇಶಗಳಲ್ಲಿ  ಧಾರ್ಮಿಕ ಆಚರಣೆಗಳು, ಹಬ್ಬದ ಆಚರಣೆಗಳು ಒತ್ತಡದ ಬದುಕಿನ ಶೈಲಿಯಿಂದ ಹಾಗೂ ಸಮಯದ ಅಭಾವದಿಂದ, ಮಾಡುವ ಆಸಕ್ತಿ ಇಲ್ಲದೆ ಕಳೆದುಹೋಗುತ್ತಿದೆ.

ಹಿಂದೆಲ್ಲಾ ಅವಿಭಕ್ತ ಕುಟುಂಬಗಳು ಹೆಚ್ಚಾಗಿದ್ದವು. ಮನೆಕೆಲಸಗಳನ್ನು ಪರಸ್ಪರ ಸಹಕಾರದಿಂದ ನಡೆಸಿಕೊಂಡು ಬರಲಾಗುತ್ತಿತ್ತು. ಆದರೆ, ಇಂದು ವಿಭಕ್ತ ಕುಟುಂಬಗಳು ಹೆಚ್ಚಾದ ಕಾರಣ ಮನೆಗಳಲ್ಲಿ ಎಲ್ಲಾ ಆಚರಣೆಗಳನ್ನು ಮಾಡಲು ಸಾಧ್ಯವಾಗುವುದಿಲ್ಲ.

ಆದರೆ, ಗ್ರಾಮೀಣ ಪ್ರದೇಶಗಳಲ್ಲಿ ಇಂದಿಗೂ ಎಲ್ಲ ಹಬ್ಬಗಳನ್ನು ವಿಭಿನ್ನವಾಗಿ, ವಿಶಿಷ್ಟವಾಗಿ ಚಾಚೂತಪ್ಪದೆ ಸಂಪ್ರದಾಯಬದ್ಧವಾಗಿ ನಡೆಸಿಕೊಂಡು ಬರಲಾಗುತ್ತಿದೆ. ಅದಕ್ಕೆ ದೀಪಾವಳಿ ಕೂಡ ಹೊರತಲ್ಲ.
ಹಿಂದಿನಿಂದಲೂ ಹಬ್ಬಗಳು ಪ್ರಕೃತಿಯ ಜೊತೆಜೊತೆಗೆ ಮನುಷ್ಯನ ಅವಿನಾಭಾವ ಸಂಬಂಧ ಇರುವುದನ್ನು ಸೂಚಿಸುತ್ತವೆ. ಬದಲಾಗುವ ಋತುಮಾನಕ್ಕೆ ತಕ್ಕಂತೆ ಹಬ್ಬಗಳು ಇದ್ದು, ಅವು ಮನುಷ್ಯನ ಜೀವನದ ಮೇಲೆ ಒಂದು ರೀತಿಯ ಸಕಾರಾತ್ಮಕ ಪರಿಣಾಮ ಉಂಟು ಮಾಡುತ್ತದೆ.

ದೀಪಾವಳಿ ಹಬ್ಬವೆಂದರೆ ಗ್ರಾಮೀಣ ಪ್ರದೇಶದಲ್ಲಿ ಒಂದು ರೀತಿಯ ಸಡಗರ, ಸಂಭ್ರಮ. ದೀಪ ಹಚ್ಚುವುದು, ಪಟಾಕಿ ಹೊಡೆಯುವುದು, ಸಿಹಿಯೂಟ ಸವಿಯುವುದು. ದೀಪಾವಳಿಯ ಎರಡು ಮೂರು ದಿನಗಳು ಮಾತ್ರ ಪಟ್ಟಣ ನಗರ ಪ್ರದೇಶದಲ್ಲಿ ಕಂಡುಬರುತ್ತದೆ.

ಆದರೆ, ಗ್ರಾಮೀಣ ಪ್ರದೇಶದಲ್ಲಿ ದೀಪಾವಳಿ ಹಬ್ಬ ಎಂದರೆ ಬಾಂಧವ್ಯ ಬೆಸೆಯುವ, ಕುಟುಂಬದವರು, ಬಂಧು-ಬಳಗದವರು ಪರಸ್ಪರ ಸೇರುವ, ಬೆರೆಯುವ ಹಬ್ಬವಾಗಿರುತ್ತದೆ. ಇದನ್ನು 3 ದಿನಕ್ಕೆ ಸೀಮಿತ ಮಾಡದೇ ತಿಂಗಳೆಲ್ಲಾ ಆಚರಿಸುತ್ತಾರೆ.

ಹಬ್ಬಕ್ಕಾಗಿ ತಮ್ಮ ಮನೆಗಳನ್ನು ಸ್ವಚ್ಛಗೊಳಿಸಿ ತಳಿರು-ತೋರಣಗಳಿಂದ ಸಿಂಗರಿಸಿ, ಅಂಗಳವನ್ನು ಸಗಣಿ ನೀರಿನಿಂದ ಸಾರಿಸಿ ಮನೆಯ ಮುಂದೆ ರಂಗೋಲಿ ಹಾಕಿ ಅದರ ಮೇಲೆ ಸಗಣಿ ಉಂಡೆಯನ್ನು ಮಾಡಿ ಅದರಲ್ಲಿ ಹುಲ್ಲು ಗರಿಕೆ ಸಿಕ್ಕಿಸಿ ಬೆನಕಪ್ಪಗಳನ್ನು ಮಾಡುತ್ತಾರೆ. ಅಂತಹ ಬೆನಕಪ್ಪಗಳನ್ನು ಒಲೆಯ ಮುಂದೆ, ಹೊಸ್ತಿಲ ಬಳಿಯಲ್ಲೂ ಕೂಡ ಇಡುತ್ತಾರೆ. ಆ ರಂಗೋಲಿಯ ಮೇಲೆ ಜೋಳದ ತೆನೆಗಳನ್ನು, ತಂಗಟೆಯ ಹೂವುಗಳನ್ನು ಹರಡುತ್ತಾರೆ. ತಮ್ಮ ಮನೆಗಳ ಮುಂದೆ  ಕವಸೇ ಹುಲ್ಲುಗಳ ಜಡೆ ಹೆಣೆದು ಕಟ್ಟುತ್ತಾರೆ.

ಬಾಗಿಲ ಹೊಸ್ತಿಲು ಭಾಗದ ಎರಡು ಬದಿಗಳಲ್ಲಿ ಅದನ್ನು ಇರಿಸುತ್ತಾರೆ. ಜೊತೆಗೆ ಲಕ್ಷ್ಮಿ ಪೂಜೆಯನ್ನು ಮಾಡುವ ಜಾಗದಲ್ಲಿ ಕೂಡ ಎರಡೂ ಬದಿಯಲ್ಲಿ ಕವಸೇ ಹುಲ್ಲಿನ ಜಡೆ ಹೆಣೆದು ಗಂಟುಕಟ್ಟಿ ಇಡುತ್ತಾರೆ.
ಸಾಮಾನ್ಯವಾಗಿ ಕಿರು ದೀಪಾವಳಿಯ ಸಂಭ್ರಮವೂ ಶುರುವಾಗುವುದೇ ಗೋಧೂಳಿ ಸಮಯದಲ್ಲಿ ಅಥವಾ ಸಂಜೆಯ ನಂತರ.

ಕೆಲವು ಕಡೆಗಳಲ್ಲಿ ಮನೆಯ ಪ್ರತಿಯೊಂದು ಬಾಗಿಲಿನ ಎರಡೂ ಕಡೆಗಳಲ್ಲಿ ಕವಸೇ ಹುಲ್ಲಿನಿಂದ ಹೆಣೆದ ಜಡೆಗಳನ್ನು ಇಡುವರು. ಮನೆಯ ಮುಂಬಾಗಿಲು ಹಾಗೂ ಮನೆಯ ಕಟ್ಟುಗಳು, ಚೌಕಗಳ ಮುಂದೆ ಎರಡು ಭಾಗಕ್ಕೂ ಇದನ್ನು ಇಟ್ಟು ಪೂಜೆ ಮಾಡುತ್ತಾರೆ.
ಮನೆಯ ದೇವರ ಪೂಜೆಯನ್ನು ಮಾಡಿ ನೈವೇದ್ಯಗಳನ್ನು ಎಡೆಮಾಡಿ ನೆಂಟರಿಷ್ಟರೊಂದಿಗೆ ಕಲಿತು ಊಟ ಮಾಡುವುದು ಹಬ್ಬದ ಸಂಭ್ರಮ. ಈ ಹಬ್ಬವನ್ನು ಕಾರ್ತಿಕ ಮಾಸದ ಸಂಪೂರ್ಣ ತಿಂಗಳು ಆಚರಿಸುತ್ತಾರೆ.

ಹಬ್ಬವನ್ನು ಜನತೆ ಒಂದೇ ದಿನ ಮಾಡುವುದಿಲ್ಲ. ಕಾರಣ ಇವರ ಮನೆಗೆ ಅವರು, ಅವರ ಮನೆಗೆ ಇವರು ಹೋಗಬೇಕಾದ ಕಾರಣಕ್ಕೆ ಪ್ರತ್ಯೇಕ ದಿನಗಳಂದು ಮಾಡುತ್ತಾರೆ.

ಬಾಂಧವ್ಯವನ್ನು ಬೆಸೆಯುವಿಕೆ ಇದರ ಉದ್ದೇಶ. ಅಮಾವಾಸ್ಯೆಯಿಂದ ಅಮಾವಾಸ್ಯೆ ಒಳಗಡೆ ಮಂಗಳವಾರ /ಶುಕ್ರವಾರ ಯಾವುದಾದರೂ ದಿನ ಕಿರು ದೀಪಾವಳಿಯನ್ನು ಆಚರಿಸುತ್ತಾರೆ.
ಪ್ರತಿ ಮನೆಯಲ್ಲೂ ಹಬ್ಬವನ್ನು ಪ್ರತ್ಯೇಕ ದಿನ ಆಚರಿಸಲಾಗುತ್ತದೆ. ಸಂಜೆ ಸಮಯದಲ್ಲಿ ಲಕ್ಷ್ಮೀದೇವಿ ಮನೆಗೆ ಬರುತ್ತಾಳೆ ಎನ್ನುವ ನಂಬಿಕೆ ಇದೆ. ಬಂಧುಬಳಗವನ್ನು ಒಟ್ಟಿಗೆ ಕರೆದು ಹಬ್ಬವನ್ನು ಆಚರಿಸುವ ಸಲುವಾಗಿ ಇಡೀ ಕಾರ್ತಿಕ ಮಾಸದ ಪೂರ್ತಿ ಹಬ್ಬವನ್ನು ಅವರ ಅನುಕೂಲಕ್ಕೆ ತಕ್ಕಂತೆ ಆಚರಿಸುತ್ತಾರೆ.

ಡಾ.ಸಂತೋಷ್
ದಂತ ವೈದ್ಯರು, ಹೊಳಲ್ಕೆರೆ
ಮೊ.ನಂ: 9342466936

Facebook
Twitter
Telegram
WhatsApp
suddionenews

suddionenews

Leave a Comment

Top Stories

ಪ್ರಜ್ವಲ್ ಜೊತೆಗೆ ರೇವಣ್ಣ ಮೇಲೂ ದೂರು ದಾಖಲು : ಮನೆ ಕೆಲಸದಾಕೆಯಿಂದ ಆರೋಪ..!

ಹಾಸನ: ಪ್ರಜ್ವಲ್ ರೇವಣ್ಣ ಅವರದ್ದು ಎನ್ನಲಾದ ಅಶ್ಲೀಲ ವಿಡಿಯೋ ಇರುವ ಪೆನ್ ಡ್ರೈವ್ ಗಳು ಹಾಸನದಾದ್ಯಂತ ಸದ್ದು ಮಾಡುತ್ತಿವೆ. ಈ ಸಂಬಂಧ ಈಗಾಗಲೇ ಪ್ರಜ್ವಲ್ ರೇವಣ್ಣ ವಿರುದ್ಧ ಎಫ್ಐಆರ್ ದಾಖಲಾಗಿದೆ. ಸದ್ಯ ಪ್ರಜ್ವಲ್ ರೇವಣ್ಣ

ಚಿತ್ರದುರ್ಗ | ಭೋವಿ ಗುರುಪೀಠಕ್ಕೆ ಗೀತಾ ಶಿವರಾಜಕುಮಾರ ಭೇಟಿ

ಸುದ್ದಿಒನ್, ಚಿತ್ರದುರ್ಗ, ಏಪ್ರಿಲ್. 28 : ಇಲ್ಲಿನ ಶ್ರೀ ಜಗದ್ಗುರು ಸಿದ್ದರಾಮೇಶ್ವರ ಮಹಾಸಂಸ್ಥಾನ, ಭೋವಿ ಗುರುಪೀಠಕ್ಕೆ ಭಾನುವಾರ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಶ್ರೀಮತಿ ಗೀತಾ ಶಿವರಾಜಕುಮಾರ ಅವರು ಭೇಟಿ ನೀಡಿ, ಗುರುಪೀಠದ

ಚಿತ್ರದುರ್ಗ | ಭೋವಿ ಗುರುಪೀಠಕ್ಕೆ ಗೀತಾ ಶಿವರಾಜಕುಮಾರ ಭೇಟಿ

ಸುದ್ದಿಒನ್, ಚಿತ್ರದುರ್ಗ, ಏಪ್ರಿಲ್. 28 : ಇಲ್ಲಿನ ಶ್ರೀ ಜಗದ್ಗುರು ಸಿದ್ದರಾಮೇಶ್ವರ ಮಹಾಸಂಸ್ಥಾನ, ಭೋವಿ ಗುರುಪೀಠಕ್ಕೆ ಭಾನುವಾರ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಶ್ರೀಮತಿ ಗೀತಾ ಶಿವರಾಜಕುಮಾರ ಅವರು ಭೇಟಿ ನೀಡಿ, ಗುರುಪೀಠದ

error: Content is protected !!