ಗರ್ಭಕಂಠದ ಕ್ಯಾನ್ಸರ್ ನಿಂದ ಬಳಲುತ್ತಿರುವ ಬಾಲಿವುಡ್ ನಟಿ ಪೂನಂ ಪಾಂಡೆ, ಇತ್ತಿಚೆಗೆ ನಿಧನದ ನಾಟಕವಾಡಿದ್ದರು. ಅವರ ಮ್ಯಾನೇಜರ್ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಪೂನಂ ಪಾಂಡೆ ಸಾವಿನ ಸುದ್ದಿಯನ್ನು ಖಚಿತ ಪಡಿಸಿದ್ದರು. ಹೀಗಾಗಿ ಎಲ್ಲೆಊ ಪೂನಂ ಪಾಂಡೆ ಸತ್ತಿದ್ದಾರೆ ಎಂದೇ ನಂಬಿದ್ದರು, ಅವರ ಸಾವಿಗೆ ಸಂತಾಪ ವ್ಯಕ್ತಪಡಿಸಿದ್ದರು.
ಆದರೆ ಮರುದಿನವೇ ನಾನು ಸತ್ತಿಲ್ಲ, ಬದುಕಿದ್ದೀನಿ. ಆ ರೀತಿಯಾದಂತ ನಾಟಕವಾಡಿದ್ದಕ್ಕೆ ಕ್ಷಮೆ ಇರಲಿ. ಅದಕ್ಕೆ ಕಾರಣ ನನ್ನ ಕ್ಯಾನ್ಸರ್ ಬಗ್ಗೆ ಜಾಗೃತಿ ಮೂಡಲಿ ಎಂದು ಆ ರೀತಿ ಮಾಡಿದೆ ಎಂದು ವಿಡಿಯೋ ಹರಿಬಿಟ್ಟಿದ್ದರು. ಈ ವಿಚಾರವಾಗಿ ಆಕೆಯ ಮಾಜಿ ಪತಿ ಪ್ರತಿಕ್ರಿಯೆ ನೀಡಿದ್ದಾರೆ.
ಪೂನಂ ಪಾಂಡೆ ನಾಲ್ಕು ವರ್ಷಗಳ ಹಿಂದೆ ಸ್ಯಾಮ್ ಬಾಂಬೆ ಎಂಬುವವರ ಜೊತೆಗೆ ಮದುವೆಯಾಗಿದ್ದರು. ಸ್ಯಾಮ್ ಅವರಿಗೆ ಮೊದಲೇ ಎರಡು ಮಕ್ಕಳಿದ್ದರು, ಒಪ್ಪಿ ಪ್ರೀತಿಸಿ ಮದುವೆಯಾಗಿದ್ದರು. ಆದರೆ ಆ ಸಂಬಂಧ ಹೆಚ್ಚು ದಿನ ಉಳಿಯಲೇ ಇಲ್ಲ. ಇದೀಗ ಅವರ ಸಾವಿನ ಬಗ್ಗೆ ಸ್ಯಾಮ್ ಮಾತನಾಡಿದ್ದು, ನನಗೆ ಅವಳು ಅಂದರೆ ಇಷ್ಟ. ಅವಳು ಇಲ್ಲ ಎಂಬ ಸುದ್ದಿ ಕೇಳಿ ನನಗೆ ಏನು ಅನಿಸಲಿಲ್ಲ. ಕಾರಣ ಅವಳ ಸಾವಿನ ಸುದ್ದಿ ನಾನು ನಂಬಲೇ ಇಲ್ಲ. ಯಾವಾಗಲೂ ಅವಳ ಬಗ್ಗೆ ಯೋಚಿಸುತ್ತೇನೆ. ತನ್ನ ಇಮೇಜನ್ನು ಪಕ್ಕಕ್ಕಿಟ್ಟು ಕ್ಯಾನ್ಸರ್ ಬಗ್ಗೆ ಅರಿವು ಮೂಡಿಸಲು ಪೂನಂ ಹೀಗೆ ಮಾಡಿದ್ದರಲ್ಲಿ ತಪ್ಪೇನಿಲ್ಲ ಎಂದಿದ್ದಾರೆ.
ಪೂನಂ ಪಾಂಡೆ ಕೂಡ ತನ್ನ ಸಾವಿನ ಸುದ್ದಿ ಹಬ್ಬಿಸಿದ್ದು, ಗರ್ಭಕಂಠದ ಕ್ಯಾನ್ಸರ್ ಬಗ್ಗೆ ಜಾಗೃತಿ ಮೂಡಲಿ ಎಂಬ ಕಾರಣಕ್ಕೆ. ಪೂನಂ ಪಾಂಡೆ ನಿಧನದ ಸುದ್ದಿ ತಿಳಿದ ಬಳಿಕ, ನಿರೀಕ್ಚೆಯಂತೆ ಹೆಚ್ಚಿನ ಜನ ಆ ಕ್ಯಾನ್ಸರ್ ಬಗ್ಗೆ ಮಾತನಾಡಿದ್ದಾರೆ.