ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಗರಂ ಆಗಿದ್ದಾರೆ. ಬಾಕಿ ಉಳಿದಿರುವ ಕಡತಗಳ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆಮೆ ನಡಿಗೆಯ ಸರ್ಕಾರವೂ ಅಲ್ಲ ನಿಂತ ನೀರಿನ ಸರ್ಕಾರ ಎಂದಿದ್ದಾರೆ.
ಇದು ಆಮೆ ನಡಿಗೆಯ ಸರ್ಕಾರವೂ ಅಲ್ಲ, ನಿಂತ ನೀರಿನ ಸರ್ಕಾರ ಎಂಬುದನ್ನು ಕುಂತಲ್ಲೇ ಕೂತು ಧೂಳು ತಿನ್ನುತ್ತಿರುವ, 1.37 ಲಕ್ಷ ಕಡತಗಳು ಸಾಕ್ಷಿ ನುಡಿಯುತ್ತಿವೆ. ಕಾಂಗ್ರೆಸ್ ಸರ್ಕಾರ ಅಭಿವೃದ್ಧಿಯ ಹಾದಿಯಲ್ಲಿ ಹೆಜ್ಜೆ ಇಡುವ ಮಾತು ಹಾಗಿರಲಿ ಜನರ ಕಷ್ಟ, ನಿವೇದನೆಗಳಿಗೆ ನಿತ್ಯ ಸ್ಪಂದಿಸಬೇಕಿದ್ದ ಕಡತಗಳೂ
ಚಲನ ಶೀಲತೆ ಕಳೆದು ಕೊಂಡಿವೆ ಎಂದರೆ ಈ ಸರ್ಕಾರ ಸ್ವಾಧೀನ ಕಳೆದು ಕೊಂಡಿದೆ ಎಂದೇ ಅರ್ಥೈಸಬೇಕಾಗಿದೆ.
ಸರ್ಕಾರದ ಮಂತ್ರಿಗಳು ಜವಾಬ್ದಾರಿ ಮರೆತರೆ ಅಧಿಕಾರಿಗಳು ನಿಷ್ಕ್ರೀಯ ರಾಗುತ್ತಾರೆ ಆಗ ಆಡಳಿತ ಯಂತ್ರವೂ ನಿಯಂತ್ರಣ ಕಳೆದು ಕೊಳ್ಳುತ್ತದೆ,ಇದರ ಪರಿಣಾಮದ ಬಿಸಿ ಅನುಭವಿಸುವವರು ಜನರು ಮಾತ್ರ. ಜನರ ತಾಳ್ಮೆಯ ಕಟ್ಟೆ ಒಡೆಯುವ ಮುನ್ನ ಸರ್ಕಾರ ಎಚ್ಚೆತ್ತು ಕೊಳ್ಳಲಿ ಜಡ್ಡುಗಟ್ಟಿರುವ ಆಡಳಿತ ವ್ಯವಸ್ಥೆಗೆ ಚುರುಕು ಮುಟ್ಟಿಸಲಿ, ಈ ನಿಟ್ಟಿನಲ್ಲಿ ಈಗಷ್ಟೇ ಎಚ್ಚೆತ್ತುಕೊಂಡಿರುವ ಮುಖ್ಯಮಂತ್ರಿಗಳು ಸರ್ಕಾರವನ್ನು ನಿದ್ದೆಯಿಂದ ಎಬ್ಬಿಸಲು ಹೊರಟಿದ್ದಾರೆ ಎಂದು ಟ್ವಿಟ್ಟರ್ ಮೂಲಕ ಕಿಡಿಕಾರಿದ್ದಾರೆ.