Notice: Undefined index: options in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಪ್ರೊ. ಶ್ರೀಶೈಲ ಆರಾಧ್ಯರವರು ಬಹುಮುಖಿ ವ್ಯಕ್ತಿತ್ವದವರಾಗಿದ್ದರು : ಡಾ.ಬಿ.ರಾಜಶೇಖರಪ್ಪ

Facebook
Twitter
Telegram
WhatsApp

 

ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817

ಸುದ್ದಿಒನ್, ಚಿತ್ರದುರ್ಗ ಫೆ. 05 :  ಕೆಲವರು ಇದ್ಧಾಗ ಸತ್ತಂತೆ ಬದುಕುತ್ತಾರೆ ಮತ್ತೇ ಕೆಲವರು ಸತ್ತ ಮೇಲೂ ಇದ್ದಂತೆ ಬದುಕುತ್ತಾರೆ. ಈ ಗುಂಪಿಗೆ ಸೇರಿದವರು ನಮ್ಮ ಶ್ರೀಶೈಲ ಆರಾಧ್ಯರು ಎಂದು ಕಬೀರಾನಂದಾಶ್ರಮದ ಶ್ರೀ ಸದ್ಗುರು ಶ್ರೀ ಶಿವಲಿಂಗಾನಂದ ಶ್ರೀಗಳು ತಿಳಿಸಿದರು.

ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಚಿತ್ರದುರ್ಗ ಹಾಗೂ ಪ್ರೊ.ಶ್ರೀಶೈಲ ಆರಾಧ್ಯ ಆಭಿಮಾನಿಗಳ ಬಳಗದವತಿಯಿಂದ ನಗರದ ರಾ.ಹೆ.50ರ ಪಿಳ್ಳೇಕೇರನಹಳ್ಳಿಯ ಬಾಪೂಜಿ ವಿದ್ಯಾ ಸಂಸ್ಥೆಯ ಆವರಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಕೆ.ಎಂ. ತಿಪ್ಪೇಸ್ವಾಮಿ ಹಾಗೂ ಪ್ರೊ. ಶ್ರೀಶೈಲ ಆರಾಧ್ಯ ಅವರ ಸ್ಮರಣೆ ಕಾರ್ಯಕ್ರಮದ ಸಾನಿಧ್ಯವಹಿಸಿ ಮಾತನಾಡಿದ ಶ್ರೀಗಳು, ನಮ್ಮ ಮಠಕ್ಕೂ ಆರಾಧ್ಯವರವರಿಗೂ ಉತ್ತಮವಾದ ಒಡನಾಟವಿತ್ತು. ಆವರ ಕೃತಿಗಿಂತ ಮಾತುಗಳು ಬಹಳ ಚನ್ನಾಗಿ ಇದ್ದವು, ಆರಾಧ್ಯರವರು ಒಳ್ಳೆಯ ಮಾತುಗರಾಗಿದ್ದರು. ಇದ್ದಲ್ಲದೆ ಜ್ಯೋತಿಷ್ಯದ ಬಗ್ಗೆಯೂ ಸಹಾ ಆಪಾರವಾದ ಪಾಂಡಿತ್ಯವನ್ನು ಹೊಂದಿದವರಾಗಿದ್ದರು. ಅವರು ಬೇರೆಯವರಿಗೆ ಕಲಿಸುವ ಆಸಕ್ತಿಯನ್ನು ಹೆಚ್ಚಾಗಿ ಹೊಂದಿದ್ದರು. ಅವರು ಹೇಳಿದ ಜ್ಯೋತಿಷ್ಯ ಸುಳ್ಳಾಗಿರಲಿಲ್ಲ ಎಂದರು.

ಆರಾಧ್ಯರವರು ನಮ್ಮನ್ನು ಬಿಟ್ಟು ಬಹು ಬೇಗ ವಿಧಿವಶರಾದರು, ಕಾಲ ಎಲ್ಲವನ್ನು ಸಹಾ ಮಾಡುತ್ತಾ ಹೋಗುತ್ತದೆ. ಇದನ್ನು ತಡೆಯುವ ಶಕ್ತಿ ಯಾರಿಗೂ ಇಲ್ಲವಾಗಿದೆ. ನಾವು ಹುಟ್ಟಿದ ಮೇಲೆ ಇದೇ ರೀತಿ ಬದಕನ್ನು ನಡೆಸಬೇಕೆಂದು ಭಗವಂತ ಬರೆದಿರುತ್ತಾನೆ ಅದರಂತೆ ನಾವುಗಳು ಜೀವನವನ್ನು ಸಾಗಿಸಬೇಕಿದೆ ಇದನ್ನು ಮೀರಿ ನಡೆಯಲು ಸಾಧ್ಯವಿಲ್ಲ, ಸಾವು ಹೇಗೆ ಎಂಬುದನ್ನು ಭಗವಂತ ತಿಳಿಸುವುದಿಲ್ಲ ಆದರೆ ಸಮಯ ಮುಗಿದಾಗ ಮಾತ್ರ ಯಾರನ್ನು ಬಿಡುವುದಿಲ್ಲ ಕರೆದ್ಯೊಯುತ್ತಾನೆ.

ಚಿತ್ರದುರ್ಗ ನಗರದಲ್ಲಿ ಯಾವುದಾದರೊಂದು ರಸ್ತೆಗೆ ಶ್ರೀಶೈಲಾ ಆರಾಧ್ಯರವರ ಹಸೆರನ್ನಿಡುವಂತೆ ನಗರಸಭಗೆ ಮನವಿ ಮಾಡುವುದರ ಮೂಲಕ ಸದಾ ಅವರ ಸ್ಮರಣೆಯನ್ನು ಮಾಡುವಂತಾಗಬೇಕಿದೆ ಎಂದು ಶ್ರೀಗಳು ತಿಳಿಸಿದರು.

ಪ್ರೊ. ಶ್ರೀಶೈಲ ಆರಾಧ್ಯರವರ ಬಗ್ಗೆ ನುಡಿ ನಮನವನ್ನು ಸಲ್ಲಿಸಿದ ಇತಿಹಾಸ ಸಂಶೋಧಕರಾದ ಡಾ.ಬಿ.ರಾಜಶೇಖರಪ್ಪ  ಶ್ರೀಶೈಲ ಆರಾಧ್ಯ ರವರ ವ್ಯಕ್ತಿತ್ವ ಮರೆಯಲಾಗದ ವ್ಯಕಿತ್ವವಾಗಿದೆ. ಪ್ರಾಧ್ಯಾಪಕರಾಗಿ ಇತಿಹಾಸ ಸಂಶೋಧಕರಾಗಿ, ಸಾಹಿತಿಗಳಾಗಿ ಬಹು ಮುಖಿಯಾಗಿದ್ದರು. ಹಲವಾರು ಕ್ಷೇತ್ರಗಳಲ್ಲಿ ಕೆಲಸವನ್ನು ಮಾಡಿರುವ ಆರಾಧ್ಯರವರು ಹಲವಾರು ಜನತೆಯ ಮನಸ್ಸನ್ನು ಗೆದಿದ್ದರು. ಚಿತ್ರದುರ್ಗದಲ್ಲಿ ಹಲವಾರು ಕಡೆಗಳಲ್ಲಿ ತಿರುಗಾಡುವುದರ ಮೂಲಕ ಇತಿಹಾಸವನ್ನು ಸಂಶೋಧನೆ ಮಾಡಿ ಪುಸ್ತಕಗಳನ್ನು ಬರೆದಿದ್ದಾರೆ. ಬ್ರಹ್ಮಗಿರಿಯ ಗುಹಾ ಚಿತ್ರಗಳ ಬಗ್ಗೆ ಆಪಾರವಾದ ಆಸಕ್ತಿಯನ್ನು ಹೊಂದಿದ್ದು ಅದರ ಮೇಲೆ ಸಂಶೋಧನೆಯನ್ನು ಮಾಡಿದ್ದಾರೆ. ನಾವು ಸಹಾ ಇವರ ಜೊತೆಯಲ್ಲಿ ಹೋಗುವುದರ ಮೂಲಕ ಸಾಥ್ ನೀಡಲಾಗಿತ್ತು ಎಂದರು.

ಆರಾಧ್ಯರವರು ಇತಿಹಾಸದ ಬಗ್ಗೆ ಹೇಳುವಾಗ ಕೇಳುವುದೊಂದು ಆಪರೂಪದ ಘಟನೆಯಾಗಿದೆ. ಕೇಳುಗರಿಗೆ ಆಸಕ್ತಿಯನ್ನು ಹುಟ್ಟಿಸುವಂತೆ ತಿಳಿಸುತ್ತಿದ್ದರು. ಇದ್ದಲ್ಲದೆ ತಮಗೆ ತಿಳಿದಷ್ಟು ಜ್ಯೋತಿಷ್ಟುಯದ ಬಗ್ಗೆಯೂ ಸಹಾ ಜನತೆಗೆ ಹೇಳುತ್ತಿದ್ದರು. ಅವರು ಹಲವಾರು ಪುಸ್ತಕಗಳನ್ನು ಬರೆಯುವುದರ ಮೂಲಕ ಉಪಯುಕ್ತವಾದ ಮಾಹಿತಿಯನ್ನು ನೀಡಿದ್ದಾರೆ. ಈಗ ಅವರು ನೆನಪುಗಳನ್ನು ಬಿಟ್ಟು ಹೋಗಿದ್ದಾರೆ. ಅವುಗಳನ್ನು ನಾವುಗಳು ಮೆಲುಕು ಹಾಕುವುದರ ಮೂಲಕ ಅವರನ್ನು ಸ್ಮರಣೆಯನ್ನು ಮಾಡಬೇಕಿದೆ ಎಂದು ತಿಳಿಸಿದರು.

ಮದಕರಿನಾಯಕ ಸಾಂಸ್ಕøತಿಕ ಕೇಂದ್ರದ ಅಧ್ಯಕ್ಷರಾದ ಡಿ.ಗೋಪಾಲಾಸ್ವಾಮಿ ನಾಯಕ್ ಮಾತನಾಡಿ, ಆರಾಧ್ಯರವರಿಗೆ ಆರಾಧ್ಯರವರೆ ಸಾಟಿಯಾಗಿದ್ದಾರೆ. ಅವರು ಹಠವಾದಿಯಾಗಿದ್ದರು ಇಂತಹ ಕೆಲಸವಾಗಬೇಕೆಂದರೆ ಅದು ಆಗಬೇಕಿತ್ತು ಅದನ್ನು ಮಾಡದೇ ಬಿಡುತ್ತಿರಲಿಲ್ಲ, ಅವರಿಎಗ ಹಲವಾರು ಜನ  ಪರಿಚಯ ಇದ್ದರೂ ಸಹಾ ಯಾವೂತ್ತು ಸಹಾ ಪ್ರಶಸ್ತಿಗಳ ಹಿಂದೆ ಹೋದವರಲ್ಲ ಅಲ್ಲದೆ ಪ್ರಶಸ್ತಿಗಾಗಿ ಲಾಭಿಯನ್ನು ಸಹಾ ಮಾಡಿದವರಲ್ಲ ತಮಗಿಂತ ಸಣ್ಣವರಿಗೆ ಪ್ರಶಸ್ತಿ ಬಂದರೂ ಸಹಾ ತಲೆಯನ್ನು ಕೆಡಿಸಿಕೊಂಡವರಲ್ಲ ಮಗಳ ಸಾವಿನಿಂದ ಆರಾಧ್ಯರವರು ಸ್ವಲ್ಪ ಮೆತ್ತಗೆ ಆದರು ಆವರ ಬದುಕನ್ನು ಬೇರೆ ದಿಕ್ಕಿಗೆ ತೆಗೆದುಕೊಂಡು ಹೋಯಿತು ಎಂದರು.

ಸುದ್ದಿಗಿಡುಗ ಪತ್ರಿಕೆಯ ಸಂಪಾದಕರಾದ ಶ.ಮಂಜುನಾಥ್ ಮಾತನಾಡಿ, ಆರಾಧ್ಯರವರು ಕೆಲವೊಂದು ವಿಚಾರಗಳಲ್ಲಿ ತಾತ್ವಿಕ ಭೀನ್ನಾಭಿಪ್ರಾಯವನ್ನು ಹೊಂದಿದ್ದರು, ಅವರ ಪತ್ನಿ ಉಮಾರವರ ಅವರ ಬಹುತೇಕ ಕೆಲಸಗಳನ್ನು ಮಾಡುವಲ್ಲಿ ನೆರವಾಗಿದ್ದರು, ಮನೆಯ ನಿರ್ಮಾಣದಲ್ಲಿ ಅವರ ಪೂರ್ಣವಾದ ಕಾಳಜಿಯನ್ನು ವಹಿಸಿದ್ದರು, ಪತಿಗೆ ತಕ್ಕ ಪತ್ನಿಯಾಗಿದ್ದರು, ಚಿತ್ರದುರ್ಗದಲ್ಲಿ ಹಲವಾರು ಕನ್ನಡ ಸಾಹಿತ್ಯ ಸಮ್ಮೇಳನಗಳು ನಡೆದರು ಸಹಾ ಆರಾಧ್ಯರವರಿಗೆ ಸಮ್ಮೇಳನ ಆಧ್ಯಕ್ಷರಾಗುವ ಭಾಗ್ಯ ಒದಗಿ ಬರಲಿಲ್ಲ ಎನ್ನುವುದು ದುರಂತ ಅಂದು ಚಿತ್ರದುರ್ಗದ ಬೃಹನ್ಮಠದಲ್ಲಿ ನಡೆದ ಸಮಾರಂಭದಲ್ಲಿ ಆರಾಧ್ಯರವರು ಆಡಿದ ಮಾತನ್ನು ಗಂಭೀರವಾಗಿ ಪರಿಗಣಿಸಿದ್ದರೆ ಇಂದು ಶ್ರೀಮಠಕ್ಕೆ ಇಂತಹ ಸ್ಥಿತಿ ಬರುತ್ತಿರಲಿಲ್ಲ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನುವಹಿಸಿದ್ದ ಬಾಪೂಜಿ ವಿದ್ಯಾಸಂಸ್ಥೆಗಳು ಹಾಗೂ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಕೆ.ಎಂ.ವಿರೇಶ್ ಮಾತನಾಡಿ,ಇತಿಹಾಸ ಸಂಶೋಧಕರಾಗಿ ಆರಾದ್ಯರವರು ಉತ್ತಮವಾದ ಕೆಲಸವನ್ನು ಮಾಡಿದ್ದಾರೆ. ಶ್ರೀಮಠದಲ್ಲಿ ಇಂದು ಇರುವ ಸಂಗ್ರಹಾಲಯದ ಹಿಂದೆ ಆರಾಧ್ಯರವರ ಪಾತ್ರ ಹೆಚ್ಚಾಗಿದೆ. ಆರಾಧ್ಯರವರು ಕ್ನನಡ ಪ್ರಾಧ್ಯಾಪಕಾಗಿದ್ದರೂ ಸಹಾ ಇತಿಹಾಸದ ಬಗ್ಗೆ ಆಸಕ್ತಿಯನ್ನು ಹೊಂದುವುದರ ಮೂಲಕ ಅದರ ಅಧ್ಯಯನಕ್ಕೆ ಇಳಿದಿದ್ದರು. ಚಿತ್ರದುರ್ಗದ ಇತಿಹಾಸವನ್ನು ಉಳಿಸುವ ಕಾರ್ಯವನ್ನು ಮಾಡಿದ್ದಾರೆ. ಪ್ರತಿಯೊಬ್ಬರ ಪ್ರೀತಿ, ವಿಶ್ವಾಸವನ್ನು ಗಳಿಸಿದ್ದರು ಎಂದರು.

ಕಾರ್ಯಕ್ರಮದಲ್ಲಿ ಶ್ರೀಶೈಲ ಆರಾಧ್ಯರವರ ಪತ್ನಿ ಉಮಾ ಮಗಳಾದ ರೋಹಿಣಿ, ಅಳಿಯಂದಿರಾದ ಶೈಲೇಂದ್ರ ನಾಗರಾಜ್, ಎಸ್.ನಿಜಲಿಂಗಪ್ಪ ಮೆಮೋರಿಯಲ್ ಟ್ರಸ್ಟ್‍ನ ಟ್ರಸ್ಟಿ ಎಸ್.ಷಣ್ಮುಖಪ್ಪ, ನಿವೃತ್ತ ಶಿಕ್ಷಕ ನಾಗರಾಜ್ ಆರಾಧ್ಯರವರ ಬಗ್ಗೆ ಮಾತನಾಡಿದರು.
ಶಾರದ ಬ್ರಾಸ್‍ಬ್ಯಾಂಡ್ ಮಾಲಿಕರಾದ ಎಸ್.ವಿ.ಗುರುಮೂರ್ತಿ ಭಾಗವಹಿಸಿದ್ದರು. ನಾಗರಾಜ್ ಪ್ರಾರ್ಥಿಸಿದರೆ, ಶಿವಕುಮಾರ್ ಸ್ವಾಗತಿಸಿದರು, ಪಲ್ಲವಿ ವಂದಿಸಿದರು.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಉಪಚುನಾವಣೆ ಫಲಿತಾಂಶದ ಬಳಿಕ ಸಂಪುಟ ವಿಸ್ತರಣೆ : ಡಿಕೆ ಶಿವಕುಮಾರ್ ಹೇಳಿದ್ದೇನು..?

ಮುರುಡೇಶ್ವರ: ರಾಜ್ಯದ ಉಪಚುನಾವಣೆ, ಮಹಾರಾಷ್ಟ್ರ ಎಲೆಕ್ಷನ್ ಮುಗಿಸಿಕೊಂಡು ಡಿಸಿಎಂ ಡಿಕೆ ಶಿವಕುಮಾರ್ ತಮ್ಮ ಪತ್ನಿ ಜೊತೆಗೆ ಬಿಜಚ್ ಕಡೆಗೆ ಹೋಗಿದ್ದಾರೆ. ಮುರುಡೇಶ್ವರ ಬೀಚಗ ಸದ್ದಿನಲ್ಲಿ ಕೂತು ಕೊಂಚ ರಿಲ್ಯಾಕ್ಸ್ ಆಗಿದ್ದಾರೆ. ಇದೇ ವೇಳೆ ಸಂಪುಟ

ವಕ್ಫ್ ವಿರುದ್ದ ನವೆಂಬರ್ 25 ರಂದು ಭಾರತೀಯ ಕಿಸಾನ್ ಸಂಘದಿಂದ ಬೃಹತ್ ಹೋರಾಟ : ಕರಿಕೆರೆ ತಿಪ್ಪೇಸ್ವಾಮಿ

  ವರದಿ ಮತ್ತು ಫೋಟೋ ಕೃಪೆ ಸುರೇಶ್ ಬೆಳಗೆರೆ ಮೊ : 97398 75729 ಸುದ್ದಿಒನ್, ಚಳ್ಳಕೆರೆ, ನವೆಂಬರ್. 22 : ಭಾರತೀಯ ಕಿಸಾನ್ ಸಂಘದ ವತಿಯಿಂದ ವಕ್ಫ್ ವಿರುದ್ಧ ಬೃಹತ್ ಹೋರಾಟವನ್ನು ಹಮ್ಮಿಕೊಳ್ಳಲಾಗಿದೆ

ಎಬಿಆರ್‍ಕೆ ಸೌಲಭ್ಯ ಸದುಪಯೋಗ ಪಡೆದುಕೊಳ್ಳಿ : ಜಿಲ್ಲಾ ಶಸ್ತ್ರಚಿಕಿತ್ಸಕ ಎಸ್.ಪಿ.ರವೀಂದ್ರ

ಚಿತ್ರದುರ್ಗ. ನ.22: ಜಿಲ್ಲಾಸ್ಪತ್ರೆಯಲ್ಲಿ ಲಭ್ಯವಿರುವ ಎಬಿಆರ್‍ಕೆ ಸೌಲಭ್ಯ ಸದುಪಯೋಗ ಪಡೆದುಕೊಳ್ಳಬೇಕು ಎಂದು ಜಿಲ್ಲಾಸ್ಪತ್ರೆ ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಎಸ್.ಪಿ.ರವೀಂದ್ರ ಕೋರಿದ್ದಾರೆ.   ಜಿಲ್ಲಾಸ್ಪತ್ರೆಗೆ ಬರುವಾಗ ರೋಗಿಗಳು ತಪ್ಪದೇ ಆಧಾರ್ ಕಾರ್ಡ್, ರೇಷನ್ ಕಾರ್ಡ್ ನಕಲು ಪ್ರತಿಗಳನ್ನು

error: Content is protected !!