ಡಾ.ಮಂಜುನಾಥ್ ನಿವೃತ್ತಿ ಬಗ್ಗೆ ಕುಮಾರಸ್ವಾಮಿ ಬೇಸರ : ರಾಜಕೀಯಕ್ಕೆ ಬರ್ತಾರ ಫೇಮಸ್ ಹೃದ್ರೋಗ ತಜ್ಞ

suddionenews
1 Min Read

ಬೆಂಗಳೂರು: ಜಯದೇವ ಆಸ್ಪತ್ರೆಯಲ್ಲಿ ನಿರ್ದೇಶಕರಾಗಿದ್ದ ಡಾ. ಮಂಜುನಾಥ್ ಸೇವಾ ಅವಧಿ ಮುಕ್ತಾಯವಾಗಿದೆ‌. ಈಗಾಗಲೇ ಆ ಸ್ಥಾನಕ್ಕೆ ಸರ್ಕಾರ ಬೇರೆಯವರನ್ನು ನೇಮಕ ಮಾಡಿದೆ. ಈ ಸಂಬಂಧ ಮಾಜಿ ಸಿಎಂ ಕುಮಾರಸ್ವಾಮಿ ಬೇಸರ ಹೊರ ಹಾಕಿದ್ದಾರೆ. ಸರ್ಕಾರದ ಜಾತಿ ರಾಜಕಾರಣದಿಂದಾಗಿ ಡಾ. ಮಂಜುನಾಥ್ ಅವರು ನಿವೃತ್ತಿಯಾಗಿದ್ದಾರೆ ಎಂದು ಆರೋಪ ಮಾಡಿದ್ದಾರೆ.

ಅವರು ಸುದೀರ್ಘವಾಗಿ ಕೆಲಸ ಮಾಡಿರುವುದು ಹಾಗೂ ಆಸ್ಪತ್ರೆಯನ್ನು ಆ ಮಟ್ಟಿಗೆ ಅಭಿವೃದ್ಧಿ ಮಾಡಿರುವುದು ನಮ್ಮ ದೇಶದ ಇತಿಹಾಸದಲ್ಲಿ ದಾಖಲೆಯಾಗಿದೆ. ಅವರು ಬಡವರಿಗೆ ಕೊಟ್ಟಂತ ಚಿಕಿತ್ಸೆಯಿಂದ ಜನ ಮಾತನಾಡುತ್ತಾರೆ. ಸರ್ಕಾರ ಅವರ ಸ್ಥಾನಕ್ಕೆ ಪ್ರಭಾರ ನಿರ್ದೇಶಕರನ್ನು ನೇಮಕ ಮಾಡಿದೆ. ಅವೆ ವಯಸ್ಸು 69 ಆಗಿದೆ. ಅದೇ ಆಸ್ಪತ್ರೆಯಲ್ಲಿ ವೈಸ್ ಚಾನ್ಸಲರ್ ಆಗಿದ್ದವರನ್ನೇ ನೇಮಕ ಮಾಡಿದ್ದಾರೆ. ಯಾಕೆ ಡಾ. ಮಂಜುನಾಥ್ ಅವರ ಆರೋಗ್ಯ ಸರಿ ಇಲ್ವಾ..? 66ರ ಆಸುಪಾಸಿನಲ್ಲಿರುವವರನ್ನೇ ಅಲ್ಲಿ ಮುಂದುವರೆಸಬಹುದಿತ್ತು. ಇದರಲ್ಲಿ ಅಸೂಯೆ ಅನ್ನುವುದು ಇದೆಯಲ್ಲ. ಜಾತಿ ರಾಜಕಾರಣ ಮಾಡಿ ಮಂಜುನಾಥ್ ಅವರನ್ನು ತೆಗೆದಿದ್ದಾರೆ ಎಂದಿದ್ದಾರೆ.

ಇನ್ನು ಡಾ. ಮಂಜುನಾಥ್ ಅವರು ಚುನಾವಣೆಗೆ ಸ್ಪರ್ಧಿಸುತ್ತಾರಾ ಎಂಬ ಮಾತಿಗೆ, ಲೋಕಸಭಾ ಚುನಾವಣೆಗೆ ಅವರ ಸ್ಪರ್ಧೆ ಬಗ್ಗೆ ಚರ್ಚೆ ನಡೀತಾ ಇದೆ. ನಮ್ಮ ಮಿತ್ರ ಪಕ್ಷ ಬಿಜೆಪಿಯವರಿಂದಾನೂ ಸಲಹೆ ಇದೆ. ನಿಮ್ಮ ಪಕ್ಷದಿಂದ ಬೇಡ, ನಮ್ಮ ಪಕ್ಷದಿಂದಾನೇ ಅವರನ್ನು ನಿಲ್ಲಿಸುತ್ತೇವೆ ಎಂದುದ್ದಾರೆ. ಅವರು ಚುನಾವಣೆಗೆ ಸ್ಪರ್ಧೆ ಮಾಡುವುದಕ್ಕೆ ಒಪ್ಪಿಗೆ ನೀಡಿದರೆ, ಅವರು ಮಾಡಿರುವ ಸಮಾಜ ಸೇವೆಗಳನ್ನು ಗಮನಿಸದಾಗ ಸಾಮಾನ್ಯ ಪ್ರಜೆಯಾಗಿಯೇ ನಾನು ಬಹಳ ಸಂತೋಷ ಪಡುತ್ತೀನಿ ಎಂದಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *