Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ದೀಪದಲ್ಲಿ ಅಡಗಿದೆ ತ್ಯಾಗದ ಬೋಧನೆ, ಸಾಧನೆಯ ಕಿಚ್ಚು : ದೀಪಾವಳಿ ವಿಶೇಷ ಲೇಖನ : ಎಸ್. ಸರೋಜ

Facebook
Twitter
Telegram
WhatsApp

ಲೇಖಕರು : ಎಸ್ ಸರೋಜ, ಪತ್ರಕರ್ತರು, ತುಮಕೂರು,

ದೀಪಾವಳಿ ಅಂದ್ರೆ ಎಲ್ಲರಿಗೂ ಇಪ್ಪ .. ಖುಷಿ , ಯಾಕಂದ್ರೆ ಜೀವನದಲ್ಲಿರುವ ಕತ್ತಲೆಯನ್ನು ಸರಿಸಿ ನಮ್ಮ ಬದುಕಿಗೆ ಬೆಳಕನ್ನ ನೀಡುವ ಹಬ್ಬವೇ ದೀಪಾವಳಿ ಮನುಷ್ಯನಲ್ಲಿರುವ ಅಂಧಕಾರ , ಅಜ್ಞಾನ , ಬುದ್ಧಿ , ಆಚಾರ – ವಿಚಾರಗಳಿಗೆ ಅಂಟಿಕೊಂಡಂತ ಕತ್ತಲೆಯನ್ನ ಸರಿಸಿ ವಿಶೇಷ ಸ್ಥಾನ ನೀಡುವಂತ ಹಬ್ಬ ಎಂದೇ ನಂಬಲಾಗುತ್ತೆ ಮನಸ್ಸಿನಲ್ಲಿರುವ ಎಲ್ಲಾ ನೆಗೆಟಿವ್ ಅಂಶಗಳನ್ನ ತೊಡೆದು ಹಾಕಿ , ಪಾಸಿಟಿವ್ ಅಂಶಗಳನ್ನ ತುಂಬುವುದು , ಹೀಗಾಗಿ ದೀಪಾವಳಿ ಹಬ್ಬಕ್ಕೆ ವಿಶೇಷವಾದ ಅರ್ಥವಿದೆ . ವಿಶೇಷವಾಗಿ ಹಬ್ಬ ಆಚರಿಸುತ್ತಾರೆ . ದೀಪಾವಳಿಯಲ್ಲಿ ದೀಪಗಳಿಗೆ ಪ್ರಾಮುಖ್ಯತೆ ದೀಪಾವಳಿ ಎಂದಾಕ್ಷಣಾ ಎಲ್ಲರ ಗಮನಕ್ಕೂ ಬರುವುದು ದೀಪಗಳು ಮನೆಯಲ್ಲಿ ಪ್ರತಿನಿತ್ಯ ದೀಪ ಹಚ್ಚಿದ್ರು ಸಹ ದೀಪಾವಳಿಯಂದು ಮನ ತುಂಬ ದೀಪಗಳಿರುತ್ತವೆ , ಕಣ್ಣು ಹಾಯಿಸಿದಲ್ಲೆಲ್ಲಾ ದೀಪದ ಬೆಳಕಿನ ಅಂದ ಕಾಣುತ್ತದೆ . ನಮ್ಮ ಸಂಸ್ಕೃತಿಯೂ ಅದೇ ಯಾವುದೇ ಕೆಲಸವನ್ನು ಶುರು ಮಾಡಬೇಕೆಂದರೂ ಮೊದಲು ದೇವರಿಗೆ ದೀಪಗಳನ್ನ ಹಚ್ಚುತ್ತೇವೆ . ಅದರಂತೆ ಲಕ್ಷ್ಮೀದೇವಿಯ ವೃದ್ಧಿಗೂ ದೀಪಗಳನ್ನ ಬೆಳಗುತ್ತೇವೆ , ದೀಪದಿಂದಲೇ ದೀಪವನ ಹಚ್ಚುವುದು ಇನ್ನು ಶ್ರೇಷ್ಠಕರವಾಗಿರುತ್ತೆ .

ದೀಪ ಹಚ್ಚುವುದರ ಹಿಂದೆ ಮತ್ತೊಂದು ವಿಶೇಷತೆಯಿದ ದೀಪ ಹಚ್ಚಿದ್ರ ಸುತ್ತಲೂ ಬೆಳಕು ಹರಿಯುತ್ತದೆ , ದೀಪದ ಗಮನ ಊರ್ಧ್ವ ಮುಖವಾಗಿರಬೇಕು. ಹೀಗಾಗಿ ದೀಪ ಬೆಳಗುವ ಮನುಷ್ಯ ಕೂಡ ಊರ್ಧ್ವಗಾಮಿಯಾಗಿರಬೇಕು, ಮನುಷ್ಯ ತನ್ನ ಇತಿಮಿತಿ ಮೀರಿ ಸದಾ ದೀಪ ಮೇಲಕ್ಕೆ ಬೆಳಗಿದಂತೆ , ಮೇಲಕ್ಕೆ ಏರುತ್ತ ಹೋಗಬೇಕು . ತಾನೂ ಉರಿದರೂ ಸುತ್ತಮುತ್ತಲಿನವರಿಗೆ ಬೆಳಕ ನೀಡಬೇಕು . ಅದು ತ್ಯಾಗದ ಸಂಕೇತವಾಗಿರುತ್ತದೆ .

ಈ ದೀಪಾವಳಿಯನ್ನ ಕಾರ್ತೀಕ ದೀಪೋತ್ಸವ ಎನ್ನಲಾಗುತ್ತೆ ಕಾರ್ತೀಕ ಮಾಸದಲ್ಲಿ ಕತ್ತಲು ಹೆಚ್ಚು . ಹೀಗಾಗಿ ಹೆಚ್ಚೆಚ್ಚು ದೀಪಗಳನ್ನ ಹಚ್ಚಿ , ಕತ್ತಲಿನ ನಡುವೆ ಬೆಳಕನ್ನ ತೋರಿಸಲಾಗುತ್ತೆ . ದೀಪಾವಳಿಯನ್ನ ಈ ಹಿಂದೆಲ್ಲಾ 5 ದಿನಗಳು ಆಚರಣೆ ಮಾಡಲಾಗುತ್ತಿತ್ತು . ಆ ಐದು ದಿನದಲಿ ಮೊದಲ ದಿನ ನೀರು ತುಂಬುವುದು , ಎರಡನೇ ದಿನ ನರಕ ಚತುರ್ದಶಿ , ಮೂರನೇ ದಿನ ದೀಪಾವಳಿ ಅಮವಾಸ್ಯೆ ನಾಲ್ಕನೇ ದಿನ ಬಲಿಪಾಡ್ಯಮಿ , ಐದನೇ ದಿನ ಯಮದ್ವಿತೀಯ ಆಚರಣೆಯನ್ನು ಒಳಗೊಂಡಿರುತ್ತಿತ್ತು . ಆದ್ರೆ ಈಗ ದೀಪಾವಳಿ ಹಬ್ಬ ಮೂರೇ ದಿನಕ್ಕೆ ಸೀಮಿತವಾಗಿದೆ .

ಐದು ದಿನದ ಹಬ್ಬ ಆಚರಣೆ ಈ ಹಿಂದೆ ಹೇಗಿರುತ್ತಿತ್ತು ಗೊತ್ತಾ..?

ಯಾವುದೇ ಹಬ್ಬ ಬರ್ತಾ ಇದೆ ಎಂದಾಗಲೂ ಮೊದಲು ನಮ್ಮ ತಲೆಗೆ ಬರೋದು ಮನೆಯ ಸ್ವಚ್ಛತೆ. ದೀಪಾವಳಿ ಹಬ್ಬಕ್ಕೂ ಅದು ಮುಖ್ಯವಾಗಿತ್ತು. ಮನೆಯಲ್ಲಿರುವ ಬಲೆ, ಕಸಗಳನ್ನು ಚೆನ್ನಾಗಿ ಹೊಡೆದು, ಇಡೀ ಮನೆಯನ್ನ ಸ್ವಚ್ಛತೆಯನ್ನ ಮಾಡುತ್ತಾರೆ.  ಹಿರಿಯರು ಕೂಡಿಟ್ಟ ಇಡೀ ಪಾತ್ರೆಗಳನ್ನು, ದೇವರ ಸಾಮಾನುಗಳನ್ನು ತೊಳೆದು ಹಬ್ಬಕ್ಕೆ ಸಿದ್ಧತೆ ಮಾಡಿಕೊಳ್ಳುವುದು ಪ್ರತೀತಿ.

ಹೊಸ ನೀರನ್ನ ಹಂಡೆಗೆ ತುಂಬಿಸಿ, ದೀಪ ಬೆಳಗಿಸಿ ಪೂಜೆ ಮಾಡುತ್ತಾರೆ. ಮರುದಿನ ಬೆಳಗ್ಗೆ ಅದೇ ನೀರಿನಲ್ಲಿ ಸ್ನಾನ ಮಾಡುತ್ತಾರೆ. ನಂತರ ಹಬ್ಬವನ್ನ ಅದ್ಧೂರಿಯಾಗಿ ಮಾಡುತ್ತಾರೆ.

ಎಣ್ಣೆ ಸ್ನಾನ : ದೀಪಾವಳಿ ಹಬ್ಬದ ಮೊದಲಿಗೆ ಎಣ್ಣೆ ಸ್ನಾನ ಮಾಡುವ ಸಂಪ್ರದಾಯವಿದೆ. ಇದಕ್ಕೆ ಕಾರಣ ಸಮುದ್ರಮಥನದ ಸಮಯದಲ್ಲಿ ಶ್ರೀವಿಷ್ಣು ಅಮೃತಕಲಶದೊಡನೆ ಧನ್ವಂತರಿಯಾಗಿ ಅವತಾರವೆತ್ತಿದ ಈ ದಿನ ತುಂಬುವ ಸ್ನಾನದ ನೀರಿನಲ್ಲಿ ಗಂಗೆಯೂ, ಎಣ್ಣೆಯಲ್ಲಿ ಧನಲಕ್ಷ್ಮೀಯೂ ಇರುತ್ತಾಳೆಂಬುದು ನಂಬಿಕೆ. ಈ ನೀರಿನಿಂದ ಸ್ನಾನಮಾಡಿದರೆ ಆಯುರಾರೋಗ್ಯ ಆಯಸ್ಸು ವೃದ್ಧಿಸುವುದೆಂದೂ ಮತ್ತು ಸಕಲ ಪಾಪಗಳೂ ನಿವಾರಣೆಯಾಗುವುದೆಂಬ ನಂಬಿಕೆಯಿದೆ. ನರಕಾಸುರನನ್ನು ಕೊಂದ ಪಾಪ ಪರಿಹಾರಕ್ಕಾಗಿ ಶ್ರೀಕೃಷ್ಣ ಕೂಡ ಈ ದಿನ ಎಣ್ಣೆಸ್ನಾನ ಶಾಸ್ತ್ರ ಮಾಡಿದ್ದನು ಎಂದು ಹೇಳಲಾಗುತ್ತದೆ.

ನರಕ ಚತುರ್ದಶಿ : ಹಬ್ಬದ ಮೊದಲ ದಿನ ನರಕಚತುದರ್ಶಿಯಾಗಿದ್ದು, ನರಕ ಚತುರ್ದಶಿಯ ಕೇಂದ್ರಬಿಂದುವೇ ನರಕಾಸುರ. ಮಹಾವಿಷ್ಣು ತನ್ನ ವರಾಹವತಾರದಲ್ಲಿದ್ದಾಗ ಅವನ ಶರೀರದಿಂದ ಒಂದು ತೊಟ್ಟು ಬೆವರು ಭೂಮಿಗೆ ಬೀಳಲಾಗಿ ಭೂದೇವಿಯಲ್ಲಿ ನರಕಾಸುರ ಜನಿಸುತ್ತಾನೆ. ಇದರಿಂದಾಗಿ ಅವನಿಗೆ ಭೌಮಾಸುರ, ಭೂಮಿಪುತ್ರ ಎಂಬ ಹೆಸರುಗಳೂ ಉಂಟು. ಭೂದೇವಿ ವಿಷ್ಣುವನ್ನು ಬೇಡಿ ತನ್ನ ಮಗ ನರಕಾಸುರನಿಗೆ ವೈಷ್ಣವಾಸ್ತ್ರವನ್ನು ವರವಾಗಿ ಕೊಡಿಸುತ್ತಾಳೆ. ಇದರಿಂದ ಬಲಿಷ್ಠನಾದ ನರಕಾಸುರ ಲೋಕಕಂಠಕನಾಗುತ್ತಾನೆ. ಇಂದ್ರ ಮತ್ತು ಅವನ ತಾಯಿ ಅಧಿತಿಯನ್ನೂ ಬಿಡದೆ ಕಾಡತೊಡಗಿದಾಗ ಇಂದ್ರ, ಶ್ರೀಕೃಷ್ಣನ ಮೊರೆ ಹೋಗುತ್ತಾನೆ. ನರಕಾಸುರನ ದುಷ್ಟತನ ತಾಯಿ ಭೂದೇವಿಗೂ ಸಹಿಸದಾದಾಗ ಈ ದುಷ್ಟ ಮಗನನ್ನು ಕೊಂದು ಲೋಕವನ್ನು ಕಾಪಾಡುವಂತೆ ಭೂದೇವಿ ಶ್ರೀಕೃಷ್ಣನಿಗೆ ಹೇಳಿದಾಗ, ಅಶ್ವಯುಜಕೃಷ್ಣ ಚತುರ್ದಶಿಯ ಕಗ್ಗತ್ತಲಿನಲ್ಲಿ ಶ್ರೀಕೃಷ್ಣನು ನರಕಾಸುರನನ್ನು ಸಂಹರಿಸುತ್ತಾನೆ. ಆ ದಿನವೇ ನರಕ ಚತುರ್ದಶಿ. ದುಷ್ಟ ಸಂಹಾರದ ಸಂಕೇತವಾಗಿ ಆ ದಿನ ಪಟಾಕಿ ಸಿಡಿಸಿ ಸಂಭ್ರಮಿಸಿ ವಿಜಯದ ನಗೆಯಲ್ಲಿ ಎಲ್ಲರೂ ಖುಷಿಪಡುತ್ತಾರೆ. ಹಾಗೆಯೇ ನರಕಾಸುರನನ್ನು ಕೊಂದು ಅವನ ಬಂಧನದಲ್ಲಿದ್ದ ಸಾವಿರಾರು ಕನ್ಯೆಯರನ್ನು ಶ್ರೀಕೃಷ್ಣ ಬಂಧಮುಕ್ತಗೊಳಿಸಿದ್ದರಿಂದಾಗಿ ಕನ್ಯಾಸೆರೆ ಬಿಡಿಸಿದ ಶ್ರೀಕೃಷ್ಣ ಸ್ವರೂಪಿಯಾದ ಅಳಿಯಂದಿರನ್ನು ಕನ್ಯಾಪಿತೃಗಳು ಈ ಹಬ್ಬದಂದು ತಮ್ಮ ಮನೆಗೆ ಆಹ್ವಾನಿಸಿ ವಿಶೇಷವಾಗಿ ಆಧರಿಸಿ ಉಪಚರಿಸುವ ಸಂಪ್ರದಾಯವನ್ನು ಕೂಡ ಈ ದಿನ ಕಾಣಬಹುದಾಗಿದೆ.

ಅಮಾವಾಸ್ಯೆಯ ಲಕ್ಷ್ಮಿ ಪೂಜೆ:  ನರಕ ಚತುರ್ದಶಿಯ ಮಾರನೆಯ ದಿನ ಅಂದರೆ ದೀಪಾವಳಿಯ ಎರಡನೇ ದಿನ, ದೀಪಾವಳಿ ಅಮಾವಾಸ್ಯೆಯಾಗಿದ್ದು, ಅವತ್ತು ಲಕ್ಷ್ಮಿಪೂಜೆ ಮಾಡಲಾಗುತ್ತದೆ. ಮಹಾವಿಷ್ಣುವಿನ ಪತ್ನಿಯೂ ಆದ ಮಹಾಲಕ್ಷ್ಮಿಯನ್ನು ಆರಾಧಿಸುವ ಹಬ್ಬವೇ ಧನಲಕ್ಷ್ಮೀ ಪೂಜೆ. ಸಮುದ್ರ ಮಥನದಿಂದ ಲಕ್ಷ್ಮೀ ಉದಯಿಸಿದ ದಿನವೂ ಹೌದು. ಹೀಗಾಗಿ ಉತ್ತರ ಭಾರತೀಯರಿಗೆ ಹೆಚ್ಚಿನ ಸಂಭ್ರಮ. ಅದರಲ್ಲೂ ವ್ಯಾಪಾರಿಗಳಿಗೆ ದೀಪ ಲಕ್ಷ್ಮೀ ಬೆಳಗಿ ಧನಲಕ್ಷ್ಮೀ ಬರುವ ಭಾಗ್ಯದ ದಿನವೇ ಆಗಿದೆ. ಅವರಿಗೆ ವ್ಯಾಪಾರ ವಹಿವಾಟಿನ ವಾಣಿಜ್ಯದ ನೂತನ ವರ್ಷ ಉದಯಿಸುವುದೇ ಈ ದಿನ. ಹಾಗಾಗಿ ಅತ್ಯಂತ ಸಂತೋಷದಿಂದ ಕಾರ್ತಿಕ ಮಾಸದ ಆರಂಭದ ಈ ಅಮಾವಾಸ್ಯೆಯ ಮಹಾರಾತ್ರಿಯಲ್ಲಿ ಮಹಾಲಕ್ಷ್ಮೀಗೆ ಮಹದಾನಂದದಿಂದ ದೀಪಾರಾಧನೆಯೊಡನೆ ಲಕ್ಷ್ಮೀಪೂಜೆಯನ್ನು ಮಾಡುತ್ತಾರೆ.

ಬಲಿಪಾಡ್ಯಮಿ : ಹಬ್ಬದಲ್ಲಿ ಮೂರನೆಯ ದಿನವನ್ನು ಬಲಿಪಾಡ್ಯಮಿಯಾಗಿ ಆಚರಿಸಲಾಗುತ್ತಿದೆ. ಆವತ್ತು ಬಲಿಚಕ್ರವರ್ತಿ ಭೂಲೋಕ ಸಂಚಾರ ಬರುತ್ತಾನೆ ಎಂಬ ನಂಬಿಕೆಯೂ ಇದೆ. ಅಂದು ಬಲೀಂದ್ರ ಪೂಜೆಯೂ ನಡೆಯುತ್ತದೆ. ಪೌರಾಣಿಕ ಕಥೆಯ ಪ್ರಕಾರ ಮಹಾವಿಷ್ಣುಭಕ್ತ ದಾನಶೂರ ದೈತ್ಯರಾಜ ಬಲಿ ಚಕ್ರವರ್ತಿಯ ಬಳಿಗೆ ವಾಮನ ಅವತಾರಿಯಾಗಿ ಬಂದ ಮಹಾವಿಷ್ಣು, ಬಲಿಯಿಂದ ಮೂರು ಹೆಜ್ಜೆ ಊರುವಷ್ಟು ಭೂಮಿಯನ್ನು ದಾನವಾಗಿ ಪಡೆದು ಎರಡು ಹೆಜ್ಜೆಗಳಲ್ಲಿ ಆಕಾಶ ಭೂಮಿಗಳನ್ನು ಅಳೆದುಕೊಂಡು ತ್ರಿವಿಕ್ರಮನಾಗಿ ಬೆಳೆದು ಮೂರನೇ ಹೆಜ್ಜೆಯನ್ನು ಬಲಿಯ ಕೋರಿಕೆಯಂತೆ ಅವನ ತಲೆಯ ಮೇಲಿಟ್ಟು ಬಲಿಚಕ್ರವರ್ತಿಯನ್ನು ಪಾತಾಳಕ್ಕೆ ತುಳಿದುಬಿಡುತ್ತಾನೆ. ಆಗ ಬಲಿಯ ಭಕ್ತಿಯನ್ನು ಮತ್ತು ದಾನಶೀಲಗುಣವನ್ನು ಮೆಚ್ಚಿದ ವಿಷ್ಣು ಪ್ರತಿವರ್ಷ ಒಂದು ದಿನ ಅವನ ಹೆಸರಿನಲ್ಲಿ ಪೂಜೆ ನಡೆಯುವಂತೆ ವರ ನೀಡುತ್ತಾನೆ. ಆ ರೀತಿ ಆಚರಿಸಲ್ಪಡುವ ದಿನವೇ ಬಲಿಪಾಡ್ಯಮಿ. ಅಂದು ಬಲಿ ಚಕ್ರವರ್ತಿ ಭೂಲೋಕ ಸಂಚಾರಕ್ಕೆ ಬರುತ್ತಾನೆಂಬ ನಂಬಿಕೆಯಲ್ಲಿ ಬಲೀಂದ್ರಪೂಜೆ ನಡೆಯುತ್ತದೆ.

ಗೋವರ್ಧನಗಿರಿ ಎತ್ತಿದ ದಿನ : ಭಾಗವತ ಪುರಾಣದ ಪ್ರಕಾರ ಕಾರ್ತಿಕ ಶುಕ್ಲಪಾಡ್ಯಮಿ ಶ್ರೀಕೃಷ್ಣನು ಇಂದ್ರನನ್ನು ಸೋಲಿಸಿದ ದಿನವೂ ಹೌದು. ಇಂದ್ರನ ದಾಳಿಯಿಂದ ತನ್ನ ಗೋಸಮೂಹವನ್ನು ರಕ್ಷಿಸಲು ಶ್ರೀಕೃಷ್ಣನು ಗೋವರ್ಧನ ಗಿರಿಯನ್ನೆತ್ತಿದ ದಿನವಿದು. ಆದ್ದರಿಂದಲೇ ಅಂದು ಗೋಪೂಜೆ ಮತ್ತು ಗೋವರ್ಧನ ಪೂಜೆಯನ್ನು ಆಚರಿಸಲಾಗುತ್ತದೆ. ಕೆಲವೆಡೆ ರೈತರು ಇದನ್ನು ಹಟ್ಟಿಹಬ್ಬವೆಂದು ಆಚರಿಸುತ್ತಾರೆ.

ಹಬ್ಬದ ಆಚರಣೆ ತಿಳಿದು ಕೊಂಡ್ರಿ ಆದರೆ, ದಸರಾ ಹಬ್ಬ ಮುಗಿದ 21ನೇ ದಿನಕ್ಕೆ ದೀಪಾವಳಿ ಹಬ್ಬ ಯಾಕೆ ಬರುತ್ತೆ ಗೊತ್ತಾ..? ಅದಕ್ಕೆ ಪುರಾಣದ ಹಿನ್ನೆಲೆಯೂ ಇದೆ. ಪ್ರತಿ ವರ್ಷ ದಸರಾ ನಂತರ ಕೇವಲ 21 ದಿನಗಳ ನಂತರ ದೀಪಾವಳಿ ಬರುತ್ತದೆ.

ಶ್ರೀರಾಮನು ತನ್ನ ಇಡೀ ಸೈನ್ಯವನ್ನು ಶ್ರೀಲಂಕಾದಿಂದ ಅಯೋಧ್ಯೆಗೆ ಕಾಲ್ನಡಿಗೆಯಲ್ಲಿ ಹೊರಡುತ್ತಾರೆ. ಆಗ ಇಡೀ ಸೈನ್ಯ 504 ಗಂಟೆಗಳನ್ನು ತೆಗೆದುಕೊಳ್ಳುತ್ತಾರೆ. ಈ ಬಗ್ಗೆ ವಾಲ್ಮೀಕಿ ರಿಷಿ ರಾಮಾಯಣದಲ್ಲಿ ಬರೆದಿದ್ದಾರೆ. ಆ 504 ಗಂಟೆಗಳನ್ನು 24 ಗಂಟೆಗಳಿಂದ ಭಾಗಿಸಿದರೆ 21 ದಿನಗಳಾಗುತ್ತವೆ. ಹೀಗಾಗಿ ದಸರಾ ಕಳೆದ 21 ದಿನಗಳಿಗೆ ದಸರಾ ಹಬ್ಬ ಬರಲಿದೆ.

ದೀಪದಿಂದ ದೀಪವಾ ಹಚ್ಚಬೇಕು ಮಾನವ,  ಪ್ರೀತಿಯಿಂದ ಪ್ರೀತಿ ಹಂಚಲು.. ಅನ್ನೋ ಮಾತಿನಂತೆ ದೀಪಾವಳಿಯನ್ನ ಆಚರಿಸಬೇಕಾಗುತ್ತದೆ. .ಈ ಆಶ್ವಿನಿ ಮಾಸದಲ್ಲಿ ನವರಾತ್ರಿಯನ್ನು ವಿಜೃಂಭಣೆಯಿಂದ ಆಚರಿಸಿದ್ದೇವೆ, ಅದರ ವಿಜೃಂಭಣೆ ಮುಗಿಯುತ್ತಿದ್ದ ಹೊಸ್ತಿಲಲ್ಲೆ ದೀಪಾವಳಿಯ ವಾತಾವರಣ ಮನೆಮಾಡಿದೆ. ಯಾವುದೋ ಮೂಲೆಯಲ್ಲಿ ಗಂಟು ಸೇರಿದ್ದ ಹಣತೆಗಳೆಲ್ಲಾ ಹೊರಬರಲಾರಂಭಿಸಿವೆ. ಮನೆ ಮುಂದೆ ಆಕಾಶ ದೀಪಗಳು ಮಿನುಗಲಾರಂಭಿಸಿವೆ. ದೇಶದೆಲ್ಲೆಡೆ ದೀಪಾವಳಿ ಸಂಭ್ರಮ ಕಳೆಗಟ್ಟಿದೆ. ಬೆಳಕಿನ ಹಬ್ಬ ದೀಪಾವಳಿ ಭಾರತದ ಅತಿದೊಡ್ಡ ಹಬ್ಬವಾಗಿದ್ದು ಸಂಭ್ರಮ ಸಡಗರದಿಂದ ಆಚರಿಸಲಾಗುತ್ತದೆ.

ದೀಪಾವಳಿಯಲ್ಲಿ ಪಟಾಕಿಯೂ ಪ್ರಾಮುಖ್ಯತೆ ವಹಿಸಿದೆ. ಆದ್ರೆ ಕೆಮಿಕಲ್ ಯುಕ್ತ ಪಟಾಕಿ ಸುರಕ್ಷತೆಯಲ್ಲ ಅನ್ನೋದು ಎಲ್ಲರಿಗೂ ಗೊತ್ತು. ಹಾಗಂತ ಪಟಾಕಿ ಹೊಡೆಯದೆ ಇದ್ದರೆ ಹಬ್ಬದ ಕಳೆ ಹೆಚ್ಚಾಗಲ್ಲ. ಪಾಟಕಿ ಹೊಡೆತಿರಿ ಅದಕ್ಕೆಂದೆ ಪರಿಸರ ಸ್ನೇಹಿ ಪಟಾಕಿಯೂ ಮಾರುಕಟ್ಟೆಯಲ್ಲಿ ಲಭ್ಯವಿರುತ್ತೆ. ಸಂಪ್ರದಾಯದ ಜೊತೆ ಜೊತೆಗೆ ವಿಜೃಂಭಣೆಯೂ ಇರಬೇಕು. ಹೀಗಾಗಿ ಸುರಕ್ಷತೆಯೊಂದಿಗೆ ಹಬ್ಬ ಆಚರಣೆ ಮಾಡಬೇಕು.

ಪಟಾಕಿ ಹೊಡೆದು ಅದೆಷ್ಟೋ ಜನ ಕಣ್ಣುಗಳನ್ನ ಕಳೆದುಕೊಂಡಿದ್ದಾರೆ. ಪ್ರತಿ ವರ್ಷವೂ ಇಂಥ ದುರ್ಘಟನೆಗಳು ಕಿವಿಗೆ ಬೀಳ್ತಾನೆ ಇರುತ್ತವೆ. ದೀಪಾವಳಿ ದೀಪಗಳ ಹಬ್ಬ ಹೀಗಾಗಿ ದೀಪಗಳನ್ನ ಹೆಚ್ಚೆಚ್ಚು ಬೆಳಗಿ, ಪಟಾಕಿಯನ್ನ ಪರಿಸರ ಸ್ನೇಹಿ ಪಟಾಕಿ ಉಪಯೋಗಿಸಿ, ದೀಪಾವಳಿಯನ್ನ ಸುರಕ್ಷತೆಯಾಗಿ ಆಚರಿಸಿ ಅನ್ನೋದೆ ಸುದ್ದಿ ಒನ್ ಪತ್ರಿಕೆಯ ಕಳಕಳಿ ಕೂಡ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಚಿತ್ರದುರ್ಗ | ಮೇ 1ರಂದು ವಿದ್ಯುತ್ ವ್ಯತ್ಯಯ

ಚಿತ್ರದುರ್ಗ. ಏ.30: ಚಿತ್ರದುರ್ಗ ವಿಭಾಗ ವ್ಯಾಪ್ತಿಯಲ್ಲಿರುವ ಪಂಡರಹಳ್ಳಿ ಲೈನ್‍ನ ಟ್ಯಾಪಿಂಗ್ ಪಾಯಿಂಟ್‍ನಿಂದ ಪಂಡರಹಳ್ಳಿ 66/11 ಕೆವಿ ವಿ.ವಿ ಕೇಂದ್ರದವರೆಗೆ ಡ್ರೇಕ್ ಕಂಡಕ್ಟರ್ ಬಳಸಿ ಉದ್ದೇಶಿತ 66 ಕೆವಿ ಲೈನ್ ಮತ್ತು ಕೊಯೊಟ್ ಕಂಡಕ್ಟರ್ ಬಳಸಿ

ಜೆಡಿಎಸ್ ಪಕ್ಷದಿಂದ ಪ್ರಜ್ವಲ್ ರೇವಣ್ಣ ಅಮಾನತು : ಕೋರ್ ಕಮಿಟಿಯಲ್ಲಿ ತೀರ್ಮಾನ

ಹುಬ್ಬಳ್ಳಿ: ಅಶ್ಲೀಲ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಸದ ಪ್ರಜ್ವಲ್ ರೇವಣ್ಣ ಅವರನ್ನು ಜೆಡಿಎಸ್ ಪಕ್ಷದಿಂದ ಅಮಾನತು ಮಾಡಲಾಗಿದೆ. ಜಿ.ಟಿ ದೇವೇಗೌಡರ ನೇತೃತ್ವದ ಕೋರ್ ಕಮಿಟಿಯಲ್ಲಿ ಈ ಸಂಬಂಧ ನಿರ್ಧಾರವಾಗಿದ್ದು, ಅಮಾನತು ಮಾಡಲಾಗಿದೆ. ಈ ಸಂಬಂಧ

ಬಿಜೆಪಿ ನಾಯಕನಿಗೆ ಮಾತ್ರ ಪೆನ್ ಡ್ರೈವ್ ಕೊಟ್ಟಿದ್ದೆ : ಶಾಕಿಂಗ್ ವಿಡಿಯೋ ಬಿಟ್ಟ ಡ್ರೈವರ್ ಕಾರ್ತಿಕ್

ಹಾಸನ: ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಪ್ರಕರಣ ದಿನೇ ದಿನೇ ಹಲವು ವಿಚಾರಗಳು ಹೊರಗೆ ಬರುತ್ತಿವೆ. ನಿನ್ನೆಯಷ್ಟೇ ವಕೀಲ, ಬಿಜೆಪಿ ನಾಯಕ ದೇವರಾಜೇಗೌಡ, ಪೆನ್ ಡ್ರೈವ್ ವಿಚಾರವಾಗಿ ಮಾತನಾಡಿ, ಕಾರ್ತಿಕ್ ಬಳಿ ಪೆನ್ ಡ್ರೈವ್

error: Content is protected !!