Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಪ್ರಾಣ ಪ್ರತಿಷ್ಠೆಗೆ ಅಷ್ಟು ಶಕ್ತಿ ಇದೆಯಾ..? ಅಯೋಧ್ಯೆ ಬಾಲರಾಮನೇ ಇದಕ್ಕೆ ಸಾಕ್ಷಿ ?

Facebook
Twitter
Telegram
WhatsApp

ಸುದ್ದಿಒನ್ :  ಕಳೆದ ಕೆಲವು ದಿನಗಳಿಂದ ದೇಶದ ಎಲ್ಲೆಡೆ ಅಯೋಧ್ಯೆ ರಾಮಮಂದಿರದ ಬಗ್ಗೆಯೇ ಚರ್ಚೆ ನಡೆಯುತ್ತಿದೆ. ರಾಮ ರಾಮ ರಾಮ, ಎಲ್ಲರ ಮನಸಲ್ಲೂ ಎಲ್ಲರ ಬಾಯಲ್ಲೂ ರಾಮ ಸ್ಮರಣೆಯೊಂದೇ ಜಪ. ಇದೇ ತಿಂಗಳ 22ರಂದು ಶ್ರೀರಾಮನ ಮೂರ್ತಿ ಪ್ರತಿಷ್ಠಾಪಿಸುವ ಮೂಲಕ ಅಯೋಧ್ಯೆ ರಾಮಮಂದಿರವನ್ನು ಉದ್ಘಾಟಿಸಲಾಯಿತು. 

ಕೋಟಿಗಟ್ಟಲೆ ಜನರು ಈ ಕಾರ್ಯಕ್ರಮವನ್ನು ಟಿವಿ ಮತ್ತು ಫೋನ್‌ಗಳ ಮೂಲಕ ಬಹಳ ವಿಜೃಂಭಣೆಯಿಂದ ವೀಕ್ಷಿಸಿದರು. ಪ್ರಾಣ ಪ್ರತಿಷ್ಠೆಯ ನಂತರ ಬಲರಾಮನ ದರ್ಶನಕ್ಕೆ ಭಕ್ತರ ದಂಡು ಹರಿದು ಬರುತ್ತಿದೆ.

ಹಿಂದೂ ಸಂಪ್ರದಾಯಗಳ ಪ್ರಕಾರ ದೇವಸ್ಥಾನಗಳನ್ನು ಹೊಸದಾಗಿ ನಿರ್ಮಿಸಿದಾಗ, ವಿಗ್ರಹ ಪ್ರಾಣ ಪ್ರತಿಷ್ಠೆ ಬಹಳ ಮುಖ್ಯ. ಪ್ರಾಣ ಪ್ರತಿಷ್ಠೆ ಎಂದರೆ ಪ್ರಾಣಶಕ್ತಿಯನ್ನು ವಿಗ್ರಹದಲ್ಲಿ ಸ್ಥಾಪಿಸುವುದು. ಪ್ರಾಣ ಪ್ರತಿಷ್ಠೆ ಎಂದರೆ ಆ ದೇವರನ್ನು ವಿಗ್ರಹದಲ್ಲಿ ಆವಾಹನೆ ಮಾಡುವುದು. ಈ ಕಾರ್ಯಕ್ರಮದ ಮೂಲಕ ಮೂರ್ತಿ ಪೂಜೆಗೆ ಅರ್ಹವಾಗುತ್ತದೆ.

ವಿಗ್ರಹವನ್ನು ಪವಿತ್ರ ನದಿ ನೀರಿನಿಂದ ಅಭಿಷೇಕ ಮಾಡಿ, ನಂತರ ಶುದ್ಧವಾದ ಬಟ್ಟೆಯಿಂದ ಒರೆಸಲಾಗುತ್ತದೆ ಮತ್ತು ಸಾಂಪ್ರದಾಯಿಕವಾಗಿ ಮಂತ್ರ ಪಠಣದಿಂದ ಅಲಂಕರಿಸಲಾಗುತ್ತದೆ. ಬಳಿಕ ಆ ದೇವರಿಗೆ ಹಾರತಿ ನೀಡಿ ನೈವೇದ್ಯ ಅರ್ಪಿಸುತ್ತಾರೆ. ಅಯೋಧ್ಯೆಯ ಬಾಲ ರಾಮನ ಪ್ರಾಣ ಪ್ರತಿಷ್ಠೆಯ ಸಂದರ್ಭದಲ್ಲೂ ಹೀಗೆಯೇ ಮಾಡಲಾಗಿತ್ತು.
ರಾಮನ ಜನನವಾದ ಅಭಿಜಿತ್ ಮುಹೂರ್ತದಲ್ಲಿ ಬಾಲರಾಮನಿಗೆ ಪ್ರಾಣ ಪ್ರತಿಷ್ಠೆ ಮಾಡಲಾಯಿತು.

ಪ್ರಾಣ ಪ್ರತಿಷ್ಠೆಗೆ ಮೊದಲು ಇದ್ದ ರಾಮನ ಮೂರ್ತಿ ಮತ್ತು ಪ್ರಾಣ ಪ್ರತಿಷ್ಠೆಯ ನಂತರ ಅಯೋಧ್ಯೆಯ ಬಾಲ ರಾಮನ ಪ್ರತಿಮೆಯಲ್ಲಿ ಅಜಗಜಾಂತರ ವ್ಯತ್ಯಾಸ ಕಂಡುಬಂದಿದ್ದು, ಪ್ರಾಣ ಪ್ರತಿಷ್ಠೆಯ ನಂತರದ ಬಾಲರಾಮನಲ್ಲಿ ಜೀವಕಳೆ ತುಂಬಿ ತುಳುಕುತ್ತಿರುವ ದೃಶ್ಯಕ್ಕೆ ದೇಶಕ್ಕೆ ದೇಶವೇ ಸಾಕ್ಷಿಯಾಗಿದೆ. ಮತ್ತು ಆ ಜೀವಕಳೆ ಎಲ್ಲರ ಗಮನಕ್ಕೂ ಬಂದಿದ್ದು, ಎಲ್ಲರನ್ನೂ ಹುಬ್ಬೇರಿಸುವಂತೆ ಮಾಡಿದೆ.

ಇದನ್ನು ಸ್ವತಃ ಮೂರ್ತಿಯ ಶಿಲ್ಪಿ ಅರುಣ್ ಯೋಗಿ ರಾಜ್ ಹೇಳಿದ್ದಾರೆ. ನಾನೇ ತಿಂಗಳಾನುಗಟ್ಟಲೆ ಕೆತ್ತಿದ ಪ್ರತಿಮೆಯೇ ಆಗಿದ್ದರೂ ಪ್ರಾಣಪ್ರತಿಷ್ಠೆಯ ನಂತರ ರಾಮನ ಮೂರ್ತಿಯಲ್ಲಿ ಬಾರೀ ಬದಲಾವಣೆ ಕಂಡಿದ್ದೇನೆ. ವಿಗ್ರಹವನ್ನು ಕೆತ್ತುವಾಗ ಕಂಡ ವಿಗ್ರಹಕ್ಕೂ ನಂತರ ಅಯೋಧ್ಯೆಗೆ ಬಂದು ರಾಮನ ದರ್ಶನ ಮಾಡಿ ಗರ್ಭಗುಡಿಯಲ್ಲಿದ್ದ ವಿಗ್ರಹವನ್ನು ಕಂಡು ಅಚ್ಚರಿಯಾಗಿದ್ದೇನೆ. ಬಾಲರಾಮನ ಮುಖದಲ್ಲಿ ನಗುವಿನ ಜತೆಗೆ ಮುಖದ ಹಾವಭಾವ ಬದಲಾಗಿದೆ ಎಂದರು.

ಅರುಣ್ ಯೋಗಿ ರಾಜ್ ಅವರು ತಮ್ಮ ಕುಟುಂಬದವರಿಂದ ಏಳು ತಿಂಗಳಿಗಿಂತಲೂ ಹೆಚ್ಚು ದೂರವಿದ್ದು ಅತ್ಯಂತ ಶ್ರದ್ದೆ ಮತ್ತು ಭಕ್ತಿಯಿಂದ ಬಾಲ ರಾಮನ ವಿಗ್ರಹವನ್ನು ಕೆತ್ತಿದ್ದರು. ಆ ವಿಗ್ರಹವನ್ನು ಅವರಿಗಿಂತ ಹೆಚ್ಚು ಸೂಕ್ಷ್ಮವಾಗಿ ಮತ್ತು ಹತ್ತಿರವಾಗಿ ಯಾರೂ ಗಮನಿಸಿರಲಿಲ್ಲ.
ಅಂತಹ ವ್ಯಕ್ತಿಯೇ ರಾಮನ ಮೂರ್ತಿಯಲ್ಲಿ  ಬದಲಾವಣೆ ಆಗಿದೆ ಎಂದು ಹೇಳಿರುವುದು ಗಮನಾರ್ಹ. ಪ್ರಾಣ ಪ್ರತಿಷ್ಠೆಯ ನಂತರ ರಾಮನ ವಿಗ್ರಹವು ಹೆಚ್ಚು ಕಳೆಯಿಂದ ಕಾಣುತ್ತಿದೆ ಎಂದು ಭಕ್ತರೇ ಹೇಳುತ್ತಿದ್ದಾರೆ.

ಪ್ರಾಣ ಪ್ರತಿಷ್ಠೆಗೂ ಮುನ್ನ ಮೂರ್ತಿಯ ವಾತಾವರಣವೇ ಬೇರೆ. ಪ್ರಾಣಪ್ರತಿಷ್ಠೆಯ ನಂತರ ಗರ್ಭಗುಡಿಯ ವಾತಾವರಣವೇ ಬೇರೆ. ದೀಪದ ಕಾಂತೀಯ ಬೆಳಕಿನ ನಡುವೆ, ಬಂಗಾರದ ಆಭರಣಗಳು, ಬಣ್ಣ ಬಣ್ಣದ ಹೂವಿನ ಮಾಲೆಗಳು, ಆ ಬಾಲ ರಾಮನ ಸೌಂದರ್ಯವನ್ನು ಇಮ್ಮಡಿಗೊಳಿಸಿದೆ. ಅಯೋಧ್ಯೆಯಲ್ಲಿ ಶ್ರೀರಾಮನನ್ನು ದರ್ಶನ ಮಾಡಿದ ನಂತರ ಭಕ್ತರು ಅಲೌಕಿಕ  ಭಾವನೆ ಅನುಭವಿಸಿದವು ಎಂದು ಭಕ್ತರು ಹೇಳುತ್ತಿದ್ದಾರೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಅಶ್ವಿನಿ ಪುನೀತ್ ರಾಜ್‍ಕುಮಾರ್ ನಿಂದಿಸಿದ ಕಿಡಿಗೇಡಿಗಳು ಈಗ ಗಪ್ ಚಿಪ್..!

ಆರ್ಸಿಬಿ ಆಟಗಾರರು ಆರಂಭದಲ್ಲಿ ಬ್ಯಾಕ್ ಟು ಬ್ಯಾಕ್ ಸೋಲುತ್ತಾ ಬಂದಿತ್ತು. ಇದು ಅಭಿಮಾನಿಗಳಿಗೆ ಸಹಜವಾಗಿಯೇ ಬೇಸರವಾಗಿತ್ತು. ಆದರೆ ಈ ಸೋಲು-ನೋವಿನ ನಡುವೆ ಯಾರೋ ಕಿಡಿಗೇಡಿಗಳು ಅಶ್ವಿನಿ ಪುನೀತ್ ರಾಜ್‍ಕುಮಾರ್ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದರು. ಕೆಟ್ಟ

ಚಿತ್ರದುರ್ಗ ಜಿಲ್ಲೆಯಲ್ಲಿ ಕಳೆದ 24 ಗಂಟೆಯಲ್ಲಿ ಎಲ್ಲೆಲ್ಲಿ ಮಳೆಯಾಗಿದೆ ? ಇಲ್ಲಿದೆ ಮಾಹಿತಿ…!

  ಚಿತ್ರದುರ್ಗ. ಮೇ.19 : ಜಿಲ್ಲೆಯಾದ್ಯಂತ ಕೃತಿಕಾ ಮಳೆ ಸುರಿಯುತ್ತಿದ್ದು, ಜಿಲ್ಲೆಯ ವಿವಿಧ ಭಾಗಗಳಲ್ಲಿ ಉತ್ತಮ ಮಳೆಯಾಗಿದೆ. ಶನಿವಾರ ಸುರಿದ ಮಳೆ ವಿವರದನ್ವಯ ಚಿತ್ರದುರ್ಗ -1ರಲ್ಲಿ 24.0, ಮಿ.ಮೀ ಚಿತ್ರದುರ್ಗ -2ರಲ್ಲಿ 33.7, ಭರಮಸಾಗರ

ಫೈನಲಿ ಪ್ಲೇ ಆಫ್ ಗೆ ಗ್ರ್ಯಾಂಡ್ ಎಂಟ್ರಿಯಾಯ್ತು RCB

ಬೆಂಗಳೂರು: ನಿನ್ನೆ ಸಂಜೆಯಿಂದ ಬೆಂಗಳೂರಿನಲ್ಲಿ ಬಾರೀ ಮಳೆ. ಆರ್ಸಿಬಿ ಪಂದ್ಯದ ವೇಳೆ ಮಳೆಯಾಟ ಜೋರಾಗಿತ್ತು. ಒಮ್ಮೊಮ್ಮೆ ಮಳೆ ಬಂದು ಬಂದು ನಿಲ್ಲುತ್ತಿತ್ತು. ಇದರಿಂದ ಆರ್ಸಿಬಿ ಅಭಿಮಾನಿಗಳಿಗೆ ಬೇಸರವೂ ಆಗಿತ್ತು. ಆದ್ರೆ ಆರ್ಸಿಬಿ ಕೊಟ್ಟ ಟಾರ್ಗೆಟ್‌

error: Content is protected !!