ಭದ್ರಾ ಮೇಲ್ದಂಡೆ ಯೋಜನೆ | 5300 ಕೋಟಿ ಭರವಸೆ ನೀಡಿದ್ದ ಕೇಂದ್ರ ಸರ್ಕಾರ ಹಣ ಬಿಡುಗಡೆ ಮಾಡಲಿ : ಬಿ.ಎನ್.ಚಂದ್ರಪ್ಪ ಒತ್ತಾಯ

1 Min Read

 

ಸುದ್ದಿಒನ್, ಚಿತ್ರದುರ್ಗ, ಜನವರಿ.25 : “ಮಧ್ಯ ಕರ್ನಾಟಕದ ಬಯಲು ಸೀಮೆಯ ಪ್ರದೇಶಗಳಿಗೆ ನೀರೊದಗಿಸುವ ರಾಜ್ಯ ಸರ್ಕಾರದ ಮಹತ್ವದ ಭದ್ರಾ ಮೇಲ್ದಂಡೆ ಯೋಜನೆಗೆ ಕೇಂದ್ರ  ಸಂಚಿವ ಸಂಪುಟ ಸಭೆಯಲ್ಲಿ ಚರ್ಚಿಸಿದ ನಂತರ ರಾಷ್ಟ್ರೀಯ ಯೋಜನೆ ಎಂದು ಘೋಷಿಣೆ ಮಾಡಿ 5300 ಕೋಟಿ ಹಣ ಒದಗಿಸುವುದಾಗಿ ಭರವಸೆ ನೀಡಿದ್ದ ಕೇಂದ್ರ ಸರ್ಕಾರ ಇನ್ನು ಒಂದು ಪೈಸೆ ಹಣ ನೀಡಿಲ್ಲ. ನಾಲ್ಕೂ ಜಿಲ್ಲೆಗಳಿಗೆ ಅನುಕೂಲವಾಗಲಿರುವ ಈ ಯೋಜನೆಗೆ  ತಕ್ಷಣವೇ  ಎಚ್ಚೆತ್ತುಕೊಂಡ ಅನುದಾನ ಬಿಡುಗಡೆ ಮಾಡಬೇಕು ಎಂದು ಕೆ.ಪಿ.ಸಿ.ಸಿ.ಕಾರ್ಯಧ್ಯಕ್ಷರು ಹಾಗೂ ಮಾಜಿ ಸಂಸದರಾದ ಬಿ.ಎನ್ .ಚಂದ್ರಪ್ಪ  ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಿದರು.

ಕೇಂದ್ರ ಸರ್ಕಾರ ಭದ್ರಾ ಮೇಲ್ದಂಡೆ ಯೋಜನೆಯನ್ನು ರಾಷ್ಟ್ರೀಯ ಯೋಜನೆ ವ್ಯಾಪ್ತಿಗೆ ಪಡೆದು ಹಲವು ವರ್ಷ ಕಳೆದರು ಸಹ ಯಾವುದೇ ಹಣ ಬಿಡುಗಡೆ ಮಾಡಿಲ್ಲ.

ಕೇಂದ್ರ ಸರ್ಕಾರ  ಭದ್ರಾ ಯೋಜನೆ ತ್ವರಿತ ಕಾಮಗಾರಿಗೆ ಹಣ ಒದಗಿಸಬೇಕು. ಭದ್ರಾ ಹೋರಟ ಚಿತ್ರದುರ್ಗ, ದಾವಣಗೆರೆ, ತುಮಕೂರು, ಚಿಕ್ಕ ಮಂಗಳೂರು ಜಿಲ್ಲೆಗೆ ಭದ್ರಾ ಯೋಜನೆ ಅನುಕೂಲ ಪಡೆಯಲಿವೆ. ನಾಲ್ಕು ಜಿಲ್ಲೆ 12 ತಾಲೂಕು 367 ಕೆರೆ ತುಂಬಿಸುವ ಯೋಜನೆಯಾಗಿದೆ. 2022 ರಲ್ಲಿ 21647 ಕೋಟಿಗೆ ಪರಿಷ್ಕೃತಗೊಳಿಸಿ ರಾಷ್ಟ್ರೀಯ ಯೋಜನೆ ಮಾಡಬೇಕು ಎಂದು ಕೇಂದ್ರ ಸರ್ಕಾರಕ್ಕೆ ರಾಜ್ಯ ಬಿಜೆಪಿ ಸರ್ಕಾರ 2023 ರಲ್ಲಿ ಕೇಂದ್ರಕ್ಕೆ ಕಳಿಸಿ ಅಗತ್ಯವಾದ ಎಲ್ಲಾ ಮಾಹಿತಿ ರಾಜ್ಯ ಸರ್ಕಾರ ನೀಡಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *