ಸುದ್ದಿಒನ್, ಚಿತ್ರದುರ್ಗ, ಜನವರಿ.23 : ಲೋಕಸಭೆಗೆ ಈಗಾಗಾಲೇ ತಯಾರಿ ನಡೆಯುತ್ತಿದ್ದು, ಈ ಬಗ್ಗೆ ಸಚಿವ ಮಧು ಬಂಗಾರಪ್ಪ ಮಾತನಾಡಿದ್ದಾರೆ. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಹೈ ಕಮಾಂಡ್ ಸೂಚಿಸುವಂತೆ ಅಭ್ಯರ್ಥಿಗಳ ಗೆಲ್ಲಿಸಿಕೊಂಡು ಬರುವ ಜವಾಬ್ದಾರಿ ಉಸ್ತುವಾರಿಗಳ ಕೆಲಸವಾಗಿದೆ. ನಾನು ಮಂಗಳೂರು ಉಸ್ತುವಾರಿ ಇದ್ದೇನೆ ಅಲ್ಲೆಲ್ಲಾ ಒತ್ತು ಕೊಡಲು ಸೂಚಿಸಿದ್ದಾರೆ. ಹಾಲಿ ಸಚಿವರಿಗೂ ಲೋಕಸಭೆಗೆ ಹೋಗಲು ಹೇಳಿದರೆ ನಾವು ತಲೆ ಬಾಗಬೇಕಾಗುತ್ತದೆ. ಪ್ರಜಾ ಪ್ರಭುತ್ವ ಉಳಿಯಬೇಕಾದರೆ ಪಕ್ಷದ ವರಿಷ್ಠರು ಹೇಳಿದಂತೆ ಕೇಳಬೇಕಾಗುತ್ತದೆ ಎಂದಿದ್ದಾರೆ.
ಭಾರತ್ ಜೋಡೋ ನ್ಯಾಯ ಯಾತ್ರೆಯಲ್ಲಿ ಹಲ್ಲೆಗೆ ಯತ್ನದ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ಹಲ್ಲೆಗೆ ಯತ್ನಿಸುವುದು ತೊಂದರೆ ಕೊಡುವುದು ಹೊಸದೇನಲ್ಲ ಕಿತಾಪತಿ ಮಾಡುವುದರಲ್ಲಿ ನಂಬರ್ 1 ಬಿಜೆಪಿಯವರು, ನಾವು ರಾಮನ ಭಕ್ತರೆ ಅಲ್ಲ ಎನ್ನುವಂತೆ ಬಿಂಬಿಸುತ್ತಾರೆ. ಯಾವ ಹಿಂದೂ ಬೇರೆ ಧರ್ಮ ಜಾತಿ ಗೌರವವನ್ನು ಕೊಡ್ತಾರೆ ಅವರೇ ನಿಜವಾದ ಹಿಂದುಗಳು, ದೇವರ ಹೆಸರಲ್ಲಿ ರಾಜಕಾರಣ ಮಾಡುವುದು ಒಳ್ಳೆ ಪದ್ದತಿಯಲ್ಲ. ಸಂವಿಧಾನವೇ ನಮ್ಮ ದೇಶದ ದೇವರು. ಅದನ್ನು ಮನೆಗೆ ಅಡವಿಡಬಾರದು.
ಒಂದೊಂದು ದೇವರನ್ನು ಒಂದೊಂದು ಪಕ್ಷಕ್ಕೆ ಅಡವಿಡಬಾರದು, ನೀವು ರಾಮಭಕ್ತರಾದರೆ ಇನ್ನೊಬ್ಬರು ರಾಮನ ವಿರೋಧಿಗಳ? ನಾವು ಎಲ್ಲ ಧರ್ಮ ದೇವರ ಭಕ್ತರು. ಅಧಿಕಾರದಲ್ಲಿದ್ದಾಗ ನಾವು ಬಹಳ ಜವಾಬ್ದಾರಿಯಿಂದಿರಬೇಕು ಎಂದರು. ಅವರು ಜವಾಬ್ದಾರಿಯಿಂದ ನಡೆದುಕೊಳ್ಳುತ್ತಿಲ್ಲ ಇದನ್ನು ನಾವು ಖಂಡಿಸುತ್ತೇವೆ. ಕರ್ನಾಟಕ ಸರ್ಕಾರ ಭಾಗ್ಯಗಳನ್ನು ನೀಡಿ ಹರಾಜಾಗಿದೆ ಎನ್ನುತ್ತಾರೆ. ಆದರೆ 92 % ರಷ್ಟು ಯಶಸ್ಸನ್ನು ನಾವು ಖಂಡಿದ್ದೇವೆ. ಭಾಗ್ಯಗಳ ಸೌಲಭ್ಯವನ್ನು ಬಿಜೆಪಿಯವರು ಪಡೆಯುತ್ತಿದ್ದಾರೆ.ನಾವು ಪಡೆದಿಲ್ಲ ಎಂದು ಹೇಳಲಿ ನೋಡೋಣ, ನಾವು ಭಾಗ್ಯ ಕೊಟ್ಟಿರೋದು ಅರ್ಥಿಕ ಸಂಕಷ್ಟ ನೀಗಿಸಲು, ಓಟಿಗಾಗಿ ಅಲ್ಲ. ಎಲ್ಲಾ ಭಾಗ್ಯಗಳಿಗೂ ಸರ್ಕಾರ ಹಣ ಕಟ್ಟುತ್ತಿದೆ ಯಾವುದೇ ತೊಂದರೆ ಇಲ್ಲ.
ಬಿಜೆಪಿಅರ್ಥ ಮಾಡ್ಕೋಬೇಕು. ಅವರ ಸರ್ಕಾರವಿದ್ದಾಗ ಕೇವಲ ಯೋಜನೆಗಳನ್ನು ಘೊಷಣೆ ಮಾಡಿದರು, ಜಲ್ಲಿಕಲ್ಲು ಹಾಕಿದರು. ಆದರೆ ಹಣ ಬಿಡುಗಡೆ ಮಾಡಲಿಲ್ಲ. ಈಗ ನಾವು ಒದ್ದಾಡುತ್ತಿದ್ದೇವೆ.ಇವರ ಹಣೆ ಬರಹಕ್ಕೆ ಟ್ಯಾಕ್ಸ್ ಸಂಗ್ರಹಿಸಲು ಸಾಧ್ಯವಾಗಲಿಲ್ಲ. ಕೇಂದ್ರ ಸರ್ವ ಶಿಕ್ಷಣ ಅಭಿಯಾನಕ್ಕೆ ಶಿಕ್ಷಣ ಇಲಾಖೆಗೆ 1800 ಕೋಟಿ ಕೊಡುತ್ತದೆ. ಪಕ್ಕದ ರಾಜ್ಯಕ್ಕೆ 3000 ಕೊಡುತ್ತಾರೆ. ಆದ್ದರಿಂದ ಮಂಜೂರಾಗಿದೆ ಎಂದುಬಂದಿರುವ ಪತ್ರವನ್ನು ವಾಪಾಸ್ಸು ಕಳಿಸುವಂತೆ ಪತ್ರಕ್ಕೆ ಸಹಿ ಮಾಡಿ ಬಂದಿದ್ದೇನೆ ಎಂದರು. ಅಭಿವೃದ್ದಿ ಬಗ್ಗೆ ಮಾತಾಡದ ಬಿಜೆಪಿಯವರು ಧರ್ಮದ ಬಗ್ಗೆ ಮಾತಾಡಿ ಅದರ ಮೇಲೆ ರಾಜಕಾರಣ ಮಾಡುತ್ತೇವೆ ಎನ್ನುತ್ತಾರೆಂದು ಕಿಡಿಕಾರಿದರು. ಉತ್ತರದಲ್ಲಿ ಭಾರತ್ ಜೋಡೋ ನ್ಯಾಯ. ಯಾತ್ರೆಯಲ್ಲಿ ಅಡ್ಡಿ ಮಾಡುವ ಕೆಲಸವನ್ನು ಮಾಡಿದ್ದಾರೆ. ಕೇಂದ್ರ ಸರ್ಕಾರ ಇದನ್ನು ತಡೆಯಬೇಕಿತ್ತು. ತಡೆದಿಲ್ಲ, ನಮ್ಮಲ್ಲಿ ಕೂಡ ತಡೆಯಲು ಪ್ರಯತ್ನ ಮಾಡಿದ್ದರೂ ಕೂಡ ನಾವು ಬಿಟ್ಟಿಲ್ಲ, ನಾವು ಗಟ್ಟಿಯಾಗಿ ನಿಂತು ಎದುರಿಸಿದ್ದೇವೆ. ಕಾನೂನನ್ನು ದುರುಪಯೋಗಪಡಿಸಿಕೊಳ್ಳಲು ಬಿಡಲಿಲ್ಲ. ಉತ್ತರ ಭಾರತದಲ್ಲಿ ಕಾನೂನು ಸತ್ತು ಹೋಗಿದೆ. ಬಿಜೆಪಿಯವರು ಶ್ರೀರಾಮನನ್ನು ಬೀದಿ ಬೀದಿಯಲ್ಲಿ ಓಡಾಡಿಸಿದ್ದಾರೆ ಅವರಿಗೆ ಖಂಡಿತ ಶಾಪ ಬರುತ್ತದೆ. ಬಿಜೆಪಿ ಚೀಪ್ ಪಾಲಿಟಿಕ್ಸ್ ಮಾಡುತ್ತದೆ. ರಾಮ ನಮ್ಮ ಹೃದಯದಲ್ಲಿದ್ದಾರೆ.