ಬಡವರ ಹೆಣ್ಣು ಮಕ್ಕಳನ್ನು ಪೈಲೆಟ್ ಮಾಡೋಣಾ : ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಆಶ್ವಾಸನೆ

ಬೆಂಗಳೂರು: ಇಂದು ಹಲವು ಅಭಿವೃದ್ಧಿ ಕಾರ್ಯಕ್ರಮಗಳಿಗೆ ಚಾಲನೆ ನೀಡುವ ಅಂಗವಾಗಿ ಪ್ರಧಾನಿ ಮೋದಿ ಅವರು ರಾಜ್ಯಕ್ಕೆ ಭೇಟಿ ನೀಡಿದ್ದಾರೆ‌. ದೇವನಹಳ್ಳಿಯ ಏರೋಸ್ಪೇಸ್ ಪಾರ್ಕ್ ನಲ್ಲಿ ನಿರ್ಮಾಣವಾಗಿರುವ ಅತ್ಯಾಧುನಿಕ ಬೋಯಿಂಗ್ ಇಂಡಿಯಾ ಇಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಕೇಂದ್ರ ಕ್ಯಾಂಪಸ್ ಅನ್ನು ಉದ್ಘಾಟನೆ ಮಾಡಿದ್ದಾರೆ.

ಬಳಿಕ ಮಾತನಾಡಿದ ಪ್ರಧಾನಿ ಮೋದಿ ಅವರು, ಇಂತಹ ಅದ್ಭುತ ಸಂಸ್ಥೆ ಬೆಂಗಳೂರಿನಲ್ಲಿ ನಿರ್ಮಾಣವಾಗಿರುವುದು ಸಂತಸದ ವಿಚಾರವಾಗಿದೆ. ಹೆಣ್ಣು ಮಕ್ಕಳೇ ಇಂದು ಸ್ವಾತಂತ್ರ್ಯವಾಗಿ ವಿಮಾನ ಚಾಲನೆ ಮಾಡಲಿದ್ದಾರೆ. ಶೇಕಡ 15% ರಷ್ಟು ಮಹಿಳೆಯರು ಈ ಕ್ಷೇತ್ರದಲ್ಲಿದ್ದಾರೆ. ಇಂದಿನಿಂದ ಬೋಯಿಂಗ್ ಸುಕನ್ಯ ಕಾರ್ಯಕ್ರಮ ಆರಂಭವಾಗಿದೆ. ನಮ್ಮ ಹೆಣ್ಣು ಮಕ್ಕಳಿಗಾಗಿಯೇ ಈ ಯೋಜನೆ ತರಲಾಗಿದೆ.

ಕೆಲ ತಿಂಗಳ ಹಿಂದೆ ಚಂದ್ರಯಾನಕ್ಕೆಉಪಗ್ರಹ ಹೋಗಿದೆ. ಈವರೆಗೂ ಯಾರೂ ತಲುಪದ ಸ್ಥಳವನ್ನು ನಾವೂ ತಲುಪಿದ್ದೇವೆ. ಭಾರತ, ವಿಶ್ವದ ಮೂರನೆ ಅತಿ ದೊಡ್ಡ ದೇಶ. ದೇಶಿಯ ಪ್ರಯಾಣಿಕನಲ್ಲಿ ಮೂರನೇಯ ಸ್ಥಾನ ಪಡೆದುಕೊಂಡಿದೆ. ಭಾರತದಲ್ಲಿ 2014ರಲ್ಲಿ 70 ನಿಲ್ದಾಣಗಳಿದ್ದವು. ಈಗ ಅದರ ಸಂಖ್ಯೆ 150 ಕ್ಕೆ ಏರಿಕೆಯಾಗಿದೆ. ನಾವೂ ವಿಮಾನಯಾನದಲ್ಲಿ ಅಭಿವೃದ್ಧಿಯಾಗುತ್ತಿದ್ದೇವೆ. ಭಾರತದಲ್ಲಿ ಒಂದು ಸ್ಥಿರವಾದ ಸರ್ಕಾರವಿದೆ. ಭಾರತದಲ್ಲಿ‌ಮೇಕ್ ಇನ್ ಇಂಡಿಯಾ ಯೋಜನೆ ಇದೆ. ನಿಮ್ಮೆಲ್ಲರಿಗೂ ಒಳ್ಳೆಯದಾಗಲಿ. ಮುಖ್ಯವಾಗಿ ಬಡವರ ಮನೆಯ ಹೆಣ್ಣು ಮಕ್ಕಳನ್ನು ಪೈಲೆಟ್ ಮಾಡೋಣಾ ಎಂದಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *