ಸುದ್ದಿಒನ್, ಚಿತ್ರದುರ್ಗ. ಜ.19: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ 2023-24ನೇ ಶೈಕ್ಷಣಿಕ ಸಾಲಿನಲ್ಲಿ ಜನವರಿ ಆವೃತ್ತಿ ಪ್ರಥಮ ವರ್ಷದ ಬಿ.ಎ, ಬಿ.ಕಾಂ, ಬಿ.ಎಸ್ಸಿ, ಬಿ.ಲಿಬ್, ಬಿ.ಸಿ.ಎ, ಬಿ.ಬಿ.ಎ, ಬಿ.ಎಸ್.ಡಬ್ಲ್ಯೂ, ಎಂ.ಎ, ಎಂ.ಕಾಂ, ಎಂ.ಎ, ಎಂ.ಸಿ.ಜೆ, ಎಂ.ಲಿಬ್, ಎಂ.ಬಿ.ಎ, ಎಂ.ಸಿ.ಎ, ಎಂ.ಎಸ್.ಡಬ್ಲ್ಯೂ ಸ್ನಾತಕ, ಸ್ನಾತಕೋತ್ತರ ಪದವಿಗಳಿಗೆ ಮತ್ತು ಪಿಜಿ ಡಿಪ್ಲೊಮಾ, ಡಿಪ್ಲೊಮಾ ಸರ್ಟಿಫಿಕೇಟ್ ಕೋರ್ಸ್‍ಗಳ ಪ್ರವೇಶಾತಿಗಾಗಿ ಆನ್‍ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದ್ದು, ಪ್ರವೇಶಾತಿ ಪ್ರಕ್ರಿಯೆಯು ಈಗಾಗಲೇ 2024ರ ಜನವರಿ 10 ರಿಂದ ಪ್ರಾರಂಭವಾಗಿರುತ್ತದೆ.
ಆಸಕ್ತ ವಿದ್ಯಾರ್ಥಿಗಳು ವಿವಿಧ ಪದವಿ, ಕೋರ್ಸ್‍ಗಳ ಪ್ರವೇಶಾತಿಗೆ ಆನ್‍ಲೈನ್ ಅಡ್ಮಿಷನ್ ಪೋರ್ಟ್‍ಲ್ https://ksouportal.com/views/studentHome.aspx ನಲ್ಲಿ ಆನ್‍ಲೈನ್ ಮೂಲಕ ಪ್ರವೇಶಾತಿಯ ಅರ್ಜಿಯನ್ನು ಭರ್ತಿ ಮಾಡಿ ಸಲ್ಲಿಸಿ, ತದನಂತರ ಚಿತ್ರದುರ್ಗ ಪ್ರಾದೇಶಿಕ ಕೇಂದ್ರ ಕಚೇರಿಯನ್ನು ಖುದ್ದಾಗಿ ಭೇಟಿ ನೀಡಿ ಆನ್‍ಲೈನ್ ಮುಖಾಂತರ ಪ್ರವೇಶಾತಿ ಶುಲ್ಕವನ್ನು ಪಾವತಿಸಿ, ಪ್ರವೇಶಾತಿ ಪಡೆಯಬಹುದಾಗಿದೆ.
ಬಿಪಿಎಲ್ ಕಾರ್ಡ್ ಹೊಂದಿರುವ ಮಹಿಳಾ ಅಭ್ಯರ್ಥಿಗಳಿಗೆ, ಡಿಫೆನ್ಸ್ ಹಾಗೂ ಮಾಜಿ ಸೈನಿಕ ವಿದ್ಯಾರ್ಥಿಗಳಿಗೆ, ಆಟೋ, ಕ್ಯಾಬ್ ಚಾಲಕರು ಮತ್ತು ಅವರ ಹೆಂಡತಿ ಮತ್ತು ಇಬ್ಬರು ಮಕ್ಕಳಿಗೆ, ಕೆಎಸ್‍ಆರ್‍ಟಿಸಿ ಚಾಲಕರುಗಳಿಗೆ ಬೋಧನಾ ಶುಲ್ಕದಲ್ಲಿ ರಿಯಾಯಿತಿ ಇರುತ್ತದೆ. ಅಲ್ಲದೇ ಕೋವಿಡ್-19 ನಿಂದ ಮೃತಪಟ್ಟವರ ಮಕ್ಕಳಿಗೆ, ತೃತೀಯ ಲಿಂಗಿಗಳಿಗೆ, ಪೂರ್ಣ ಪ್ರಮಾಣದ ದೃಷ್ಠಿಹೀನ ವಿದ್ಯಾರ್ಥಿಗಳಿಗೆ (ಬಿ.ಇಡಿ, ಎಂ.ಬಿ.ಎ ಕೋರ್ಸುಗಳನ್ನು ಹೊರತುಪಡಿಸಿ) ಪೂರ್ಣ ಶುಲ್ಕದ ವಿನಾಯಿತಿ ಇರುತ್ತದೆ. ಅಲ್ಲದೇ ಎರಡು ಶೈಕ್ಷಣಿಕ ಕೋರ್ಸ್‍ಗಳನ್ನು ಏಕಕಾಲದಲ್ಲಿ ಒಂದು ಭೌತಿಕ ಕ್ರಮದಲ್ಲಿ ಮತ್ತೊಂದು ದೂರಶಿಕ್ಷಣ ಕ್ರಮದಲ್ಲಿ ಓದಲು ಅವಕಾಶವಿರುತ್ತದೆ.
ಆಸಕ್ತ ವಿದ್ಯಾರ್ಥಿಗಳು ಪ್ರವೇಶಾತಿಯ ಅಂತಿಮ ದಿನಾಂಕ 2024ರ ಮಾರ್ಚ್ 31ರೊಳಗೆ ಹೆಚ್ಚಿನ ಸಂಖ್ಯೆಯಲ್ಲಿ ಇದರ ಸದುಪಯೋಗ ಪಡೆದುಕೊಳ್ಳಬಹುದು.
ಹೆಚ್ಚಿನ ಮಾಹಿತಿಗಾಗಿ ವಿಶ್ವವಿದ್ಯಾನಿಲಯದ ಅಧಿಕೃತ ವೆಬ್‍ಸೈಟ್
www.ksoumysuru.ac.in
ವೀಕ್ಷಿಸುವುದು ಅಥವಾ ದೂರವಾಣಿ ಸಂಖ್ಯೆ 8690544544, 8800335638 ಅಥವಾ ಕೇಂದ್ರ ಕಚೇರಿ ಮೈಸೂರು ದೂರವಾಣಿ ಸಂಖ್ಯೆ 0821-2500981, 0821-2519941, ದೂರವಾಣಿ ಸಂಖ್ಯೆ 7090762378, 8722669855 ಗೆ ಕರೆ ಮಾಡವುದು ಅಥವಾ ಖುದ್ದಾಗಿ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ ಚಿತ್ರದುರ್ಗ ಪ್ರಾದೇಶಿಕ ಕೇಂದ್ರ ಕಚೇರಿಯನ್ನು ಸಂಪರ್ಕಿಸಬಹುದು ಎಂದು ಚಿತ್ರದುರ್ಗ ಪ್ರಾದೇಶಿಕ ನಿರ್ದೇಶಕಿ ಬಿ.ಆರ್.ರಾಧಿಕಾ ತಿಳಿಸಿದ್ದಾರೆ.