Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

38 ಸಾವಿರ ಮುಸ್ಲಿಂ ಮತದಾರರಿದ್ರು, ಆ ಮತ ಎಲ್ಲಿಗೋದ್ವು : ಹೆಚ್ ಡಿ ಕುಮಾರಸ್ವಾಮಿ ಪ್ರಶ್ನೆ

Facebook
Twitter
Telegram
WhatsApp

ಬೆಂಗಳೂರು: ಹಾನಗಲ್ ಹಾಗೂ ಸಿಂದಗಿ ಕ್ಷೇತ್ರದ ಉಪಚುನಾವಣೆಯ ಫಲಿತಾಂಶ ಹೊರಬಿದ್ದಿದೆ. ಒಂದು ಕ್ಷೇತ್ರದಲ್ಲಿ ಬಿಜೆಪಿ ಮತ್ತೊಂದು ಕ್ಷೇತ್ರದಲ್ಲಿ ಕಾಂಗ್ರೆಸ್ ಪಾರುಪತ್ಯ ಸಾಧಿಸಿದೆ. ಆದರೆ ಜೆಡಿಎಸ್ ಎರಡು ಕ್ಷೇತ್ರದಲ್ಲೂ ಹೀನಾಯವಾಗಿ ಸೋಲು ಕಂಡಿದೆ. ಈ ಬೆನ್ನಲ್ಲೇ ಸುದ್ದಿಗೋಷ್ಟಿ ನಡೆಸಿರುವ ಮಾಜಿ ಸಿಎಂ ಕುಮಾರಸ್ವಾಮಿ, ಪಕ್ಷವನ್ನ ಸಮರ್ಥನೆ ಮಾಡಿಕೊಂಡಿದ್ದಾರೆ.

ಜೆ ಪಿ ಭವನದಲ್ಲಿ ಸುದ್ದಿಗೋಷ್ಟಿ ನಡೆದಿದ್ದು, ಯಾವುದೇ ಪಕ್ಷವನ್ನ ಕಟ್ಟಬೇಕು ಅಂದ್ರೆ ಆರ್ಥಿಕ ಶಕ್ತಿ ತುಂಬಾ ಮುಖ್ಯ. ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷದಲ್ಲಿ ಹಣ ಎಷ್ಟಿದೆ ಅಂತ ಪುನರುಚ್ಚಾರ ಮಾಡುವ ಅಗತ್ಯವಿಲ್ಲ. ಇದು ಪ್ರಾದೇಶಿಕ ಪಕ್ಷ ಉಳಿಸಬೇಕು. ಆರ್ಥಿಕತೆ ಬೇಕು, ಹೀಗಾಗಿ ಇದೆ ಜವಾಬ್ದಾರಿಯನ್ನು ಎಲ್ಲರೂ ಹೊರಬೇಕು.

ಮಹಿಳಾ, ಯುವ, ಮುಸ್ಲಿಂ, ಕ್ರಿಶ್ಚಿಯನ್, ಒಬಿಸಿ ಹೀಗೆ ಎಲ್ಲರನ್ನು ಕರೆದು ಕಾರ್ಯಗಾರ ಮಾಡಿದೆ. ಏಳು ದಿನಗಳ ಕಾರ್ಯಕ್ರಮ ಇದಾಗಿತ್ತು. ಇದು ಉತ್ತಮ ಕಾರ್ಯಕ್ರಮವಾಗಿತ್ತು. ಅದಕ್ಕೆ ಹಣ ಜೋಡಿಸಲು ಏನು ತೊಂದರೆ ಆಯ್ತು ಗೊತ್ತಿದೆ. ಉಪ ಚುನಾವಣೆಗೂ ಎಷ್ಟು ಶ್ರಮಪಟ್ಟರೂ ಗೊತ್ತಿದೆ. ಸೋಲು ಗೆಲುವಿನ ಬಗ್ಗೆ ಮಾತಾಡಲ್ಲ ಎಂದಿದ್ದಾರೆ.

2023 ಕ್ಕೆ ಚುನಾವಣೆಗೆ ನಾನು ಆಕ್ಟೀವ್ ಆಗಿ ಕೆಲಸ ಮಾಡಬೇಕು ಅಂತ ತೀರ್ಮಾನ ಮಾಡಿದ್ದೇನೆ. ಎಲ್ಲರೂ ಆಕ್ಟೀವ್ ಆಗಿ ಕೆಲಸ ಮಾಡಬೇಕು. ಅನೇಕ ಯೋಜನೆ ಯೋಜಿಸಿದ್ದಾರೆ. ಉಪ ಚುನಾವಣೆ ಫಲಿತಾಂಶ ನಮಗೆ ಹೇಗೆ ಬಂದಿದೆಯೋ ಅದನ್ನು ಸ್ವೀಕಾರ ಮಾಡ್ತೀವಿ. ಜನರ ತೀರ್ಮಾನದಂತೆ ಹೋಗ್ತೀವಿ. ಪ್ರಾದೇಶಿಕ ಪಕ್ಷ ಉಳಿಯಲು ಕೆಲಸ ಮಾಡ್ತೀವಿ ಎಂದಿದ್ದಾರೆ.

 

ನಮ್ಮ ಅಭ್ಯರ್ಥಿ ಎರಡು ಕ್ಷೇತ್ರದಲ್ಲೂ ನಿಂತಿದ್ದರು. 38 ಸಾವಿರ ಮುಸ್ಲಿಂ ಮತದಾರರು ಇದ್ದರು. ಆದ್ರೆ ಆ ಮತಗಳು ಅದು ಯಾರಿಗೆ ಹೋಯ್ತು. ಬಿಜೆಪಿಗೆ ಕೊಟ್ಟರಾ..? ನಮಗಿಲ್ಲ ಅಂದರೆ ಆ ಮತಗಳೆಲ್ಲಾ ಕಾಂಗ್ರೆಸ್ ಗೆ ಹೋಗಿರುತ್ತದೆ. ಅವರ ಆಪಾದನೆ ಕೂಡ ನಮ್ಮ ಮೇಲೆ ಇದೆ. ದೇವೇಗೌಡರು ಅವರ ಮಗ ಸೇರಿ‌ ಮುಸ್ಲಿಂ ಅಭ್ಯರ್ಥಿ ಹಾಕಿದ್ದಾರೆ. ನಮ್ಮನ್ನು ಸೋಲಿಸಲು ಹೀಗೆ ಮಾಡಿದ್ದಾರೆ ಎಂದು ಆಪಾದನೆ ಮಾಡಿದ್ದಾರೆ. ನಾಲ್ಕು ಸಾವಿರ ಬಂದಿದೆ ನಮಗೆ ಉಳಿದದ್ದು ಎಲ್ಲಿ ಹೋಯ್ತು. ನಾನು ಜನತೆ ತೀರ್ಮಾನಕ್ಕೆ ಬೀಡ್ತೀನಿ. ಯಾರ ಬಗ್ಗೆಯೂ ನಾನು ಮಾತಾಡಲ್ಲ ಎಂದಿದ್ದಾರೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಇಂದಿನಿಂದ ರಾಜ್ಯಾದ್ಯಂತ ಮಳೆ : ಬೆಂಗಳೂರಿಗೆ ಮಳೆ ದರ್ಶನ ಯಾವಾಗಿಂದ..?

ಬೆಂಗಳೂರು: ಬಿಸಿಲಿನ ತಾಪ ಅದ್ಯಾಕೆ ದಿನೇ ದಿನೇ ಏರಿಕೆಯಾಗುತ್ತಿದೆಯೋ ತಿಳಿದಿಲ್ಲ. ಜನರಂತು ಬಿಸಿಲಿನ ಬೇಗೆಗೆ ಹೈರಾಣಾಗಿ ಹೋಗಿದ್ದಾರೆ. ಕಳೆದ ವರ್ಷವಂತು ಮಳೆಯಿಲ್ಲ ಈ ವರ್ಷ ಮೊದಲ ಮಳೆಯೂ ಸರಿಯಾಗಿ ಆಗಿಲ್ಲ. ಮೇ ತಿಂಗಳಿಗೆ ಬಂದರೂ

ಆದಷ್ಟು ಬೇಗ ಸತ್ಯ ಹೊರಬರಲಿದೆ ಎಂದು ಪೋಸ್ಟ್ ಹಾಕಿ ಕಮೆಂಟ್ ಆಫ್ ಮಾಡಿದ ಪ್ರಜ್ವಲ್ ರೇವಣ್ಣ..!

ಬೆಂಗಳೂರು: ಅಶ್ಲೀಲ ವಿಡಿಯೋಗಳಿರುವ ಪೆನ್ ಡ್ರೈವ್ ಎಲ್ಲೆಡೆ ವೈರಲ್ ಆಗುತ್ತಿದ್ದಂತೆ ಪ್ರಜ್ವಲ್ ರೇವಣ್ಣ ಸೀದಾ ಜರ್ಮನಿ ಪ್ರವಾಸಕ್ಕೆ ಹೊರಟಿದ್ದರು. ವಿಚಾರ ದೊಡ್ಡದಾದ ಕೂಡಲೇ ಎಚ್ಚೆತ್ತ ರಾಜ್ಯ ಸರ್ಕಾರ, ಪ್ರಕರಣವನ್ನು ಎಸ್ಐಟಿ ತನಿಖೆಗೆ ವಹಿಸಿತ್ತು. ಎಸ್ಐಟಿ

ಹೆಚ್ಚಾದ ಬಿಸಿಲು ಕುರಿ-ಮೇಕೆ ಇನ್ನಿತರೆ ಜಾನುವಾರುಗಳನ್ನು ರಕ್ಷಿಸಿಕೊಳ್ಳಿ : ವಿ.ಎ.ಪ್ರಕಾಶ್‍ರೆಡ್ಡಿ

ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್,   ಮೊ : 78998 64552 ಸುದ್ದಿಒನ್, ಚಿತ್ರದುರ್ಗ, ಮೇ. 01 : ಈ ವರ್ಷದ ಬೇಸಿಗೆ ಬಿಸಿಲು ಅತಿಯಾಗಿರುವುದರಿಂದ ಕುರಿ-ಮೇಕೆ ಇನ್ನಿತರೆ ಜಾನುವಾರುಗಳನ್ನು ಬೆಳಿಗ್ಗೆ ಆರು

error: Content is protected !!