ಬೆಂಗಳೂರು: ಗ್ಯಾರಂಟಿ ಯೋಜನೆಗಳು ಈಗಾಗಲೇ ಬಡವರ ಪಾಲಿನ ಆಶಾ ಕಿರಣಗಳಾಗಿ ಕೆಲಸ ಮಾಡುತ್ತಿವೆ. ಮುಂದೆ ಲೋಕಸಭಾ ಚುನಾವಣೆ ಇದೆ. ಸಹಜವಾಗಿಯೇ ಜನರಿಗೆ ಸರ್ಕಾರದ ಮೇಲಿನ ಬಜೆಟ್ ಮೇಲೆ ನಿರೀಕ್ಷೆಗಳು ಹೆಚ್ಚಾಗುತ್ತವೆ. ಮುಂದಿನ ತಿಂಗಳು ಫೆಬ್ರವರಿ 16ರಂದು ರಾಜ್ಯ ಬಜೆಟ್ ಮಂಡನೆ ಮಾಡಲಿದೆ.
ಫೆಬ್ರವರಿ 12ರಿಂದ 23ರ ತನಕ ರಾಜ್ಯ ವಿಧಾನಮಂಡಲ ಅಧಿವೇಶನ ನಡೆಯಲಿದೆ. ಫೆಬ್ರವರಿ 16ಕ್ಕೆ ರಾಜ್ಯ ಬಜೆಟ್ ಮಂಡನೆಯಾಗಲಿದೆ. ಮೊದಲ ಅಧಿವೇಶನದ ದಿನ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಭಾಷಣ ಮಾಡಲಿದ್ದಾರೆ. ಈ ಬಜೆಟ್ ಮೇಲೆ ಹೊಸ ನಿರೀಕ್ಷೆಗಳನ್ನೇ ಜನ ಇಟ್ಟುಕೊಂಡಿದ್ದಾರೆ.
ಈ ಬಗ್ಗೆ ಸಚಿವ ಹೆಚ್ ಕೆ ಪಾಟೀಲ್ ಮಾಹಿತಿ ನೀಡಿದ್ದಾರೆ, ಇಂದು ಸಚಿವ ಸಂಪುಟದಲ್ಲಿ ಈ ಬಗ್ಗೆ ತೀರ್ಮಾನ ಮಾಡಲಾಗಿದೆ. ಸಚಿವ ಸಂಪುಟದಲ್ಲಿ 12ರಂದು ವಿಧಾನಮಂಡಲ ಅಧಿವೇಶನ ಕರೆಯುತ್ತಾ ಇದ್ದೀವಿ. ಜಂಟಿ ಅಧಿವೇಶನ 12ಕ್ಕೆ ನಡೆಯುತ್ತದೆ.16ಕ್ಕೆ ನಮ್ಮ ರಾಜ್ಯದ ಬಜೆಟ್ ಮಂಡನೆಯಾಗಲಿದೆ. 23ರ ತನಕ ವಿಧಾನ ಮಂಡಲದ ನಡವಳಿಕೆಗಳು ನಡೆಯುತ್ತವೆ ಎಂದು ತಿಳಿಸಿದ್ದಾರೆ.