Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಎಸ್. ಜೆ. ಎಂ. ಪಾಲಿಟೆಕ್ನಿಕ್ ಕಾಲೇಜಿನ ಹಳೆಯ ವಿದ್ಯಾರ್ಥಿಗಳ ಸಂಘ ಅಸ್ತಿತ್ವಕ್ಕೆ : ಹಳೆಯ ವಿದ್ಯಾರ್ಥಿಗಳ ಕೌಶಲ್ಯ ಈಗಿನ ವಿದ್ಯಾರ್ಥಿಗಳಿಗೆ ಮಾರ್ಗದರ್ಶನವೇ ಧ್ಯೇಯ

Facebook
Twitter
Telegram
WhatsApp

 

ಸುದ್ದಿಒನ್, ಚಿತ್ರದುರ್ಗ. ಜನವರಿ. 18 : ಕಳೆದ ಮೂರು ನಾಲ್ಕು ದಶಕಗಳ ಹಿಂದೆ ಚಿತ್ರದುರ್ಗದಲ್ಲಿ ಪಾಲಿಟೆಕ್ನಿಕ್ ಕಾಲೇಜು ಇರಲಿಲ್ಲ. ಈ ನ್ಯೂನ್ಯತೆಯನ್ನು ಸರಿದೂಗಿಸಲು1985 ರಲ್ಲಿ ಎಸ್.ಜೆ.ಎಂ. ವಿದ್ಯಾಪೀಠದ ಅಂದಿನ ಅಧ್ಯಕ್ಷರಾದ  ಶ್ರೀ ಮಲ್ಲಿಕಾರ್ಜುನ ಮುರುಘರಾಜೇಂದ್ರ  ಸ್ವಾಮಿಗಳವರು  ಆರಂಭಿಸಿದ ಪಾಲಿಟೆಕ್ನಿಕ್ ಫಲವಾಗಿ, ಅಂದಿನಿಂದ ಸುಮಾರು 38 ವರ್ಷಗಳ ಕಾಲ ಉತ್ತಮ ಗುಣಮಟ್ಟದ ಶಿಕ್ಷಣ ನೀಡವಲ್ಲಿ ಕಾಲೇಜು ಪ್ರಗತಿಗೆ  ಶ್ರಮಿಸುತ್ತಿದೆ ಎಂದು ಎಸ್. ಜೆ. ಎಂ. ಪಾಲಿಟೆಕ್ನಿಕ್ ನ  ನಿವೃತ್ತ  ಪ್ರಾಚಾರ್ಯರು ಹಾಗೂ ಹಳೆ ವಿದ್ಯಾರ್ಥಿ ಸಂಘದ ಹಿರಿಯ ನಿರ್ದೇಶಕರು ಆದ ಡಿ.ವಿ. ಮುರುಘೇಶ್ ಅವರು ಅಭಿಪ್ರಾಯಪಟ್ಟರು.

ನಗರದ ಎಸ್ .ಜೆ .ಎಂ. ಪಾಲಿಟೆಕ್ನಿಕ್ ನಲ್ಲಿ  ಏರ್ಪಡಿಸಿದ್ದ  ಹಳೆಯ ವಿದ್ಯಾರ್ಥಿ ಸಂಘದ ವಿದ್ಯುಕ್ತವಾದ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಇಲ್ಲಿ ಕಲಿತ ವಿದ್ಯಾರ್ಥಿಗಳು ಅನೇಕರು ವಿವಿಧ  ಹುದ್ದೆಯಲ್ಲಿದ್ದಾರೆ.  ಹಾಗೆ ಸ್ವಂತ ಉದ್ದಿಮೆಗಳನ್ನು ಸ್ಥಾಪಿಸಿದ್ದಾರೆ. ಹಿಂದಿನ ವಿದ್ಯಾರ್ಥಿಗಳ ಅನುಭವ ಈಗಿನ ವಿದ್ಯಾರ್ಥಿಗಳಿಗೆ ಮಾರ್ಗದರ್ಶಿಯಾಗಲಿ ಮತ್ತು ಪರಸ್ಪರ ಒಗ್ಗೂಡುವಿಕೆಯ ಮೂಲಕ ಕಾಲೇಜಿನ ಹಾಗೂ ವೈಯಕ್ತಿಕ ಒಳಿತಿಗೆ ಪರಸ್ಪರ  ಸಹಕಾರ ಈ ಮೂಲಕ ಸಿಗಲಿ ಎನ್ನುವುದೇ ಸಂಘದ ಸ್ಥಾಪನೆಯ ಸದುದ್ದೇಶ ಎಂದು ಹೇಳಿದರು.

ಕಾಲೇಜಿನ  ಆಟೋಮೊಬೈಲ್ ವಿಭಾಗದ ಹಿರಿಯ ಪ್ರಾಧ್ಯಾಪಕರು ಮಾಜಿ ಪ್ರಾಚಾರ್ಯರೂ ಆದ ಬಿ .ಎಲ್. ಶಿವಾನಂದಸ್ವಾಮಿ ಅವರು ಮಾತನಾಡಿ ಹಳೆಯ ವಿದ್ಯಾರ್ಥಿಗಳ ಕೌಶಲ್ಯ ಈಗಿನ ವಿದ್ಯಾರ್ಥಿಗಳಿಗೂ ಮಾರ್ಗದರ್ಶಿಯಾಗಲಿ ಎನ್ನುವ ಸದಾಶಯ ಹೊಂದಿದ  ಸಂಘದ ಸ್ಥಾಪನೆಯ ಉದ್ದೇಶ ಫಲಪ್ರದವಾಗಲಿ.ಈ ಸಂಘ ಮುಂದಿನ ದಿನಗಳಲ್ಲಿ ಸಾಮಾಜಿಕ ಹಿನ್ನೆಲೆಯ ಕಾಳಜಿಯ ಕೆಲಸಗಳನ್ನು ನಿರ್ವಹಿಸಿ ಎಸ್.ಜೆ.ಎಂ ವಿದ್ಯಾಪೀಠ ಕೀರ್ತಿ ಮತ್ತು ಗೌರವ ಮತ್ತಷ್ಟು  ತರುವಂತಾಗಲಿ ಎಂದು ಆಶಯ ವ್ಯಕ್ತಪಡಿಸಿದರು.

ಸಂಘದ ಕಾರ್ಯದರ್ಶಿ ಎಸ್‌.ಜಿ ವೆಂಕಟೇಶ್ ಮಾತನಾಡಿ ನಾನು ಈ ಕಾಲೇಜಿನ ಪ್ರಥಮ ವರ್ಷದ  ವಿದ್ಯಾರ್ಥಿ ಎನ್ನಲು ಖುಷಿಯಾಗುತ್ತದೆ.  ಸ್ಥಾಪನೆಯಾದ ದಿನಗಳಲ್ಲಿ ಮೂಲಭೂತ ಸೌಲಭ್ಯಗಳು ಅಷ್ಟಾಗಿ ಇರಲಿಲ್ಲ. ಪಕ್ಕದ  ನಮ್ಮ ಎಸ್‌.ಜೆ.ಎಂ. ತಾಂತ್ರಿಕ ಮಹಾವಿದ್ಯಾಲಯದ ನೆರವು ಸದಾ ಇರುತ್ತಿತ್ತು ಎಂದು ನೆನಪು ಮಾಡಿಕೊಂಡರು.  ಇದೀಗ ಸುಸಜ್ಜಿತವಾಗಿ ಸ್ವಂತ ನಿರ್ವಹಣೆಯ ಮೂಲಕ ವ್ಯವಸ್ಥಿತವಾಗಿ ನಡೆಯುತ್ತಿದೆ. ಇಂತಹ ಸುವ್ಯವಸ್ಥೆಗೆ ಮತ್ತಷ್ಟು ಮೆರಗು ತರಲು ಈ ಸಂಘ ಸ್ಥಾಪನೆಯಾಗಿದ್ದು, ಬರುವ ದಿನಗಳಲ್ಲಿ ಕಾಲೇಜಿನ ಬೆಳವಣಿಗೆಗೆ ಶ್ರಮಿಸೋಣ ಎಂಬ ಸದಭಿಪ್ರಾಯ ವ್ಯಕ್ತಪಡಿಸಿದರು.

ಸಂಘದ ಉಪಾಧ್ಯಕ್ಷರಾದ ಎಸ್. ಜಿ. ಸತ್ಯನಾರಾಯಣ ನಾಯ್ಡು ಅವರು ಈ ಸಂಘವು ಅನೇಕ ದ್ಯೇಯ ಮತ್ತು ಉದ್ದೇಶಗಳನ್ನು ಹೊಂದಿ ಆರಂಭವಾಗಿದೆ. ಅವುಗಳ ಈಡೇರಿಕೆಗೆ ಇಲ್ಲಿ ಅಧ್ಯಯನ ಮಾಡಿರುವ , ಮಾಡುತ್ತಿರುವವರ ಸಲಹೆ, ಸಹಕಾರ, ನೆರವು ಅಗತ್ಯ ಎಂದು ಕೋರಿದರು.

ಸಂಘದ ಖಜಾಂಚಿ ಕೆ .ಸಿ. ಸುರೇಶ್ ಮಾತನಾಡಿ ಕಾಲೇಜಿನ ಮುಖಾಂತರ ಸಮಾಜದ ಒಳಿತಿಗಾಗಿ ಅನೇಕ ಕಾರ್ಯಯೋಜನೆಗಳನ್ನು ರೂಪಿಸಿ ಜಾರಿಗೆ ತರಲು ಸಂಪನ್ಮೂಲದ ಅಗತ್ಯ.ಅಂತಹ ಕೆಲಸಕ್ಕೆ ಸರ್ವರ ಸಹಕಾರ ಬೇಕೆಂದು ಹೇಳಿದರು.

ಸಂಘದ ನಿರ್ದೇಶಕರುಗಳಾದ ಎನ್. ಜಿ. ಹನುಮಂತರೆಡ್ಡಿ, ಹಿಮವತ್ ಕೇದಾರ ಎಂ.ಸಿ. ಅವರುಗಳು ಸಭೆ ಕುರಿತು ಮಾತನಾಡಿದರು. ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಚಾರ್ಯರು ಹಾಗೂ ಸಂಘದ ಅಧ್ಯಕ್ಷರೂ ಆದ ಎಸ್   ವಿ . ರವಿಶಂಕರ್ ಮಾತನಾಡಿ ನಾವು  ಯಾರೇ ಆಗಲಿ ಮೊದಲ ಆದ್ಯತೆ  ಪೋಷಕರನ್ನ ಗೌರವಿಸುವುದನ್ನು ರೂಢಿಸಿಕೊಳ್ಳಬೇಕು.ನಂತರ ನಾವು ಕಲಿತ ಶಾಲೆ- ಕಾಲೇಜು ಯಾವುದೇ ಇರಲಿ ಅದಕ್ಕೆ ನಾವು ಋರುಣೆಯಾಗಿರುವುದು ಸಹ ನಮ್ಮ ಕರ್ತವ್ಯ ಎಂದು ಹೇಳುತ್ತೇನೆ. ನಿಮ್ಮ ಸಹಕಾರ ಸಣ್ಣದೋ, ದೊಡ್ಡದೋ ಮುಖ್ಯವಲ್ಲ. ನಿಮ್ಮ ಪಾಲ್ಗೊಳ್ಳುವಿಕೆ ದೊಡ್ಡದು. ಸಂಘದೊಂದಿಗೆ ನಿಕಟ ಸಂಪರ್ಕ ಹೊಂದಿ, ಕಾಲಕಾಲಕ್ಕೆ ಒಳ್ಳೆಯ ಸಲಹೆ ನೀಡುತ್ತಿದ್ದರೆ ಅದು ಪ್ರಗತಿಗೆ ಪೂರಕವಾಗುತ್ತದೆ. ಯಾವುದೇ ಆರಂಭದ ಕೆಲಸದಲ್ಲಿ ನಿರೀಕ್ಷಿಸಿದಷ್ಟು ಯಶಸ್ಸು ಸಿಗದೇ ಹೋದರೂ, ಸೋಲಿನಿಂದ ಆತಂಕ, ನಿರಾಶೆಗೊಳಗಾಗದೆ ಹಂತ ಹಂತವಾಗಿ  ಗೆಲುವಿನ ಗುರಿ ತಲುಪಬೇಕು ಸಂಘ ಆರಂಭವಾಗಿದೆ.

ಸುಮಾರು ಏಳೆಂಟು ಸಾವಿರ ಹಳೆಯ ವಿದ್ಯಾರ್ಥಿಗಳು ಇರಬಹುದು.ಅವರನ್ನು   ಸಂಪರ್ಕಿಸಿ ಒಬ್ಬರಿಂದ ಒಬ್ಬರಿಗೆ ತಲುಪಿಸುತ್ತಾ ಸಂಘದ ಸದಸ್ಯರನ್ನಾಗಿಸಲು ಪ್ರೇರಣೆ ನೀಡುತ್ತಾ ಸಾಗಿದರೆ ಅದು ಹೆಮ್ಮರವಾಗುತ್ತದೆ.  ಇದೊಂದು ದೊಡ್ಡ ಕೆಲಸ  ಇದು ಸಣ್ಣದರಿಂದ ಆರಂಭವಾಗಿ ದೊಡ್ಡ ಮರವಾಗಿ ಬೆಳೆದು  ಒಳ್ಳೆಯ ಫಲ ಭರಿತ ಹಣ್ಣುಗಳು ಎಲ್ಲರ ಮೂಲಕ ಸಿಗಲಿ ಎಂದು ಕಳಕಳಿ ವ್ಯಕ್ತಪಡಿಸಿದರು.

ಹಳೆಯ ವಿದ್ಯಾರ್ಥಿಗಳು ಹಾಗೂ ಸಂಘದ ನಿರ್ದೇಶಕರುಗಳಾದ ಪಿ.ಜಯಪ್ಪ, ನಾಗಭೂಷಣ. ಎಸ್,
( ಬೆಣ್ಣೆ) ಸುಧಾ. ಜಿ.ಕೆ ,ಅಧ್ಯಾಪಕರಾದ. ಎಸ್. ಜಿ.  ಲತಾ, ಜೆ .ಪ್ರತಿಮಾ,ಸವಿತಾ,  ಮೋಹನ್, ಎನ್.ಎಸ್. ಎಸ್. ಅಧಿಕಾರಿ ಟಿ .ಗೋವಿಂದರಾಜು , ಕಾಲೇಜಿನ ಮುಖ್ಯಸ್ಥರುಗಳಾದ ಪಿ.ಎ .ರಘು, ನಾಳಿನಾಕ್ಷಿ ಅಧ್ಯೀಕ್ಷಕರಾದ ಸಿ.ಎನ್. ಮೋಹನ್, ಗ್ರಂಥಪಾಲಕರಾದ  ಎಂ. ವೀರಯ್ಯ, ಬೋಧಕ ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ  ಸಂಘದ ನಿರ್ದೇಶಕರು ಹಳೆಯ ವಿದ್ಯಾರ್ಥಿಯೂ ಆದ ಪ್ರಸಾದ್ ಅವರು ಇಪ್ಪತ್ತೈದು ಸಾವಿರ ರೂಗಳ ದೇಣಿಗೆ ನೀಡಿದರು.

ಸಮಾರಂಭದ ಆರಂಭಕ್ಕೆ ಟಿ. ಲಿಂಗರಾಜು ಪ್ರಾರ್ಥಿಸಿ, ವಂದಿಸಿದರು. ಸಂಘದ ಜಂಟಿ ಕಾರ್ಯದರ್ಶಿ ಹೆಚ್. ಸಿ .ಪದ್ಮಾವತಿ ಸ್ವಾಗತಿಸಿ,ಪ್ರಸ್ತಾವನೆಯ ಮೂಲಕ  ಸಂಘದ  ಉದ್ದೇಶಗಳ ಪರಿಚಯ ಮಾಡಿಕೊಟ್ಟರು.  ಸಂಘದ ಸಂಯೋಜಕರಾದ ಪಿ.ಬಿ ರಾಜೇಶ್ ಕುಮಾರ್ ಕಾರ್ಯಕ್ರಮ ನಿರ್ವಹಿಸಿದರು.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಈ ರಾಶಿಯವರು ಕೆಲಸದಲ್ಲಿ ಎಷ್ಟೇ ಶ್ರದ್ಧೆಯಿಂದ ದುಡಿದರೂ ಅಪವಾದ, ನಿಂದನೆ, ಆರ್ಥಿಕ ನಷ್ಟ ತಪ್ಪಿದ್ದಲ್ಲ

ಈ ರಾಶಿಯವರು ಕೆಲಸದಲ್ಲಿ ಎಷ್ಟೇ ಶ್ರದ್ಧೆಯಿಂದ ದುಡಿದರೂ ಅಪವಾದ, ನಿಂದನೆ, ಆರ್ಥಿಕ ನಷ್ಟ ತಪ್ಪಿದ್ದಲ್ಲ. ಶುಕ್ರವಾರ- ರಾಶಿ ಭವಿಷ್ಯ ಮೇ-17,2024 ಸೂರ್ಯೋದಯ: 05:47, ಸೂರ್ಯಾಸ್ತ : 06:37 ಶಾಲಿವಾಹನ ಶಕೆ1945, ಶ್ರೀ ಕ್ರೋಧಿ ನಾಮ

ಚಿತ್ರದುರ್ಗದಲ್ಲಿ ಐವರ ಅಸ್ಥಿಪಂಜರ ಪ್ರಕರಣ | ಕೊನೆಗೂ ಸಿಕ್ತು ಸಾವಿನ ಸುಳಿವು: ಎಸ್.ಪಿ. ಮಾಹಿತಿ…!

ಸುದ್ದಿಒನ್, ಚಿತ್ರದುರ್ಗ, ಮೇ. 16 : 2023ರ ಡಿಸೆಂಬರ್ ನಲ್ಲಿ ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿದ್ದ ಪ್ರಕರಣ ಅದು. ನಗರದ ಬೆಂಗಳೂರು ರಸ್ತೆಯಲ್ಲಿರುವ ಪಾಳು ಬಿದ್ದ ಮನೆಯಲ್ಲಿ ಐವರ ಮೃತದೇಹ ಪತ್ತೆಯಾಗಿತ್ತು. ಅದು ಅವರೆಲ್ಲಾ ಸಾವನ್ನಪ್ಪಿ

ನೈರುತ್ಯ ಪದವೀಧರ ಚುನಾವಣೆ : ಬಿಜೆಪಿ ವಿರುದ್ಧ ರಘುಪತಿ ಭಟ್ ಬಂಡಾಯ, ಪಕ್ಷೇತರ ಸ್ಪರ್ಧೆ

ಮೈಸೂರು: ವಿಧಾನಸಭಾ ಚುನಾವಣೆ, ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಹಳಬರಿಗೆ, ಒಂದಷ್ಡು ವಿವಾದಗಳಿದ್ದವರಿಗೆ ಟಿಕೆಟ್ ನಿರಾಕರಣೆ ಮಾಡಿತ್ತು. ಹೊಸ ಮುಖಗಳಿಗೆ ಮಣೆ ಹಾಕಲು ಹೋಗಿ, ಹಿರಿಯ ತಲೆಗಳು ಬಂಡಾಯವೆದ್ದಿದ್ದರು. ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಟಿಕೆಟ್

error: Content is protected !!