ನಿಗಮ ಮಂಡಳಿಗಳ ನೇಮಕದ ಬಗ್ಗೆ ಡಿಸಿಎಂ ಡಿಕೆ ಶಿವಕುಮಾರ್ ಏನಂದ್ರು ?

1 Min Read

 

 

ಬೆಂಗಳೂರು: ನಿಗಮ ಮಂಡಳಿಗಳ ಅಧ್ಯಕ್ಷ, ಸದಸ್ಯರ ಹುದ್ದೆಗೆ ಯಾರನ್ನೆಲ್ಲಾ ಅಂತಿಮ ಮಾಡಲಾಗುತ್ತದೆ ಎಂಬ ಕುತೂಹಲವಿತ್ತು. ಸಚಿವ ಸ್ಥಾನ ಸಿಗದೆ ನೊಂದವರಿಗೆ ನಿಗಮ ಮಂಡಳಿಗಳ ಸ್ಥಾನಗಳನ್ನು ನೀಡಿ, ಸಮಾಧಾನ ಮಾಡುವುದಕ್ಕೆ ಸರ್ಕಾರ ಪ್ಲ್ಯಾನ್ ಮಾಡಿತ್ತು. ಅದರಂತೆ ಸಿಎಂ ಹಾಗೂ ಡಿಸಿಎಂ ಆಪ್ತರನ್ನೇ ಆಯ್ಕೆ ಮಾಡುವ ಹಗ್ಗಜಗ್ಗಾಟದಲ್ಲು ಕೊನೆಗೂ ಫೈನಲ್ ಆಗಿದೆ.

ಇಂದು ಸಿಕ್ಕಾಪಟ್ಟೆ ಖುಷಿಯಲ್ಲಿಯೇ ವಿಧಾನಸೌಧ ತಲುಪಿದ ಡಿಸಿಎಂ ಡಿಕೆ ಶಿವಕುಮಾರ್ ಅವರು, ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ಈ ಸೆಕೆಂಡ್ ನಲ್ಲಿ ಅನೌನ್ಸ್ ಮಾಡುತ್ತಾ ಇದ್ದೀವಿ. 39 ಕಾರ್ಯಕರ್ತರು 36 ಜನ ಎಂಎಲ್ಎಗಳು ನಿಗಮ ಮಂಡಳಿಯಲ್ಲಿ ಇರಲಿದ್ದಾರೆ‌. ಮೊದಲ ರೌಂಡ್ ಮೀಟಿಂಗ್ ನಲ್ಲಿ ಮಾಡ್ತೀವಿ. ಅದಕ್ಕೊಂದು ಕಮಿಟಿ ಇದೆ. ಜಗದೀಶ್ ಶೆಟ್ಟರ್, ಲಕ್ಷ್ಮಣ್ ಸವದಿ ಸೇರ್ಪಡೆಯಾಗಿದೆ. ಇನ್ನುಳಿದವರು ಹಳಬರೇ ಇದ್ದಾರೆ. ನಮ್ಮ ಮಂತ್ರಿಗಳಿಗೆಲ್ಲಾ, ಆ ಕ್ಷೇತ್ರಗಳಿಗೆಲ್ಲಾ ಹೋಗಿ ಅದರ ಮಾಹಿತಿ ನೀಡಲಾಗಿದೆ. ಪಕ್ಷ ಏನು ಹೇಳುತ್ತದೆ ಅದನ್ನೇ ನಾವೆಲ್ಲರು ಮಾಡಬೇಕು ಎಂದಿದ್ದಾರೆ. ಈ ವಿಚಾರ ಕೇಳಿ ಕಾರ್ಯಕರ್ತರು ಹಾಗೂ ಶಾಸಕರು ಖುಷಿಯಾಗಿದ್ದಾರೆ.

ಇನ್ನು ನಾಳೆ ಪ್ರಧಾನಿ ಮೋದಿ ಅವರು ಕಲಬುರಗಿಗೆ ಭೇಟಿ ನೀಡುತ್ತಿದ್ದು, ಸ್ವಾಗತಕ್ಕೆ ಸಿಎಂ ಸಿದ್ದರಾಮಯ್ಯ ಹೋಗಲಿದ್ದಾರೆ ಎಂಬ ಮಾಹಿತಿ ನೀಡಿದ್ದಾರೆ. ನಾಳೆ ಪ್ರಧಾನಿ ಮೋದಿ ಬರುತ್ತಾ ಇದ್ದಾರೆ. ಸಭೆಯನ್ನು ಮಧ್ಯಾಹ್ನ ಇಟ್ಟುಕೊಳ್ಳೋಣಾ ಅಂದುಕೊಂಡೆವು. ಪ್ರಧಾನಿ ಬರುತ್ತಾ ಇರೋದ್ರಿಂದ ಸಿಎಂ ಹೋಗ್ಬೇಕಾಗುತ್ತೆ. ಆ ದೃಷ್ಟಿಯಿಂದ ನಾಳೆ ಅವರು ಬಂದು ಹೋದ ಮೇಲೆ ಮಾಡುತ್ತೇವೆ ಎಂದಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *