ಅತಿಥಿ ಉಪನ್ಯಾಸಕರ ಹುದ್ದೆಗೆ ಅರ್ಜಿ ಆಹ್ವಾನ : ಜನವರಿ 24 ಕೊನೆಯ ದಿನ

1 Min Read

 

ಚಿತ್ರದುರ್ಗ. ಜ.17: ಚಳ್ಳಕೆರೆ ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರದಲ್ಲಿ (ಜಿಟಿಟಿಸಿ) ಡಿಪ್ಲೋಮಾ ಇನ್ ಟೂಲ್  ಮತ್ತು ಡೈ ಮೇಕಿಂಗ್, ಡಿಪ್ಲೋಮಾ ಇನ್ ಮೆಕಾಟ್ರಾನಿಕ್ಸ್ ವಿಭಾಗದಲ್ಲಿ ಖಾಲಿ ಇರುವ ಅತಿಥಿ ಉಪನ್ಯಾಸಕರ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ. ಜನವರಿ 24 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ.

ಬೋಧನೆಯಲ್ಲಿ ಕನಿಷ್ಟ ಒಂದು ವರ್ಷ ಅನುಭವವುಳ್ಳ ಪ್ರಥಮ ದರ್ಜೆಯಲ್ಲಿ ಬಿ.ಇ ಅಥವಾ ಎಂ.ಟೆಕ್ ಇನ್ ಮೆಕ್ಯಾನಿಕಲ್ ಅಥವಾ ಎಲೆಕ್ಟ್ರಾನಿಕ್ಸ್ ಅಂಡ್ ಕಮ್ಯುನಿಕೇಷನ್ ಇಂಜಿನಿಯರಿಂಗ್ ವಿಭಾಗದ ಪದವಿ ಹೊಂದಿರುವ ಆಸಕ್ತ ಅಭ್ಯರ್ಥಿಗಳು ಜನವರಿ 24ರೊಳಗಾಗಿ ಕಚೇರಿಗೆ ಅರ್ಜಿ ಸಲ್ಲಿಸಬಹುದು. ಮಾಸಿಕ ಗೌರವಧನ ರೂ.18,000/- ದಿಂದ 25,500/- ನೀಡಲಾಗುವುದು.

ಹೆಚ್ಚಿನ ಮಾಹಿತಿಗಾಗಿ ಪ್ರಾಂಶುಪಾಲರು, ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರಮ ಸರ್ವೇ ನಂ.117, ಶಾರದಾ ಗಣಪತಿ ಕೋಲ್ಡ್ ಸ್ಟೋರೇಜ್  ಹತ್ತಿರ, ಬಳ್ಳಾರಿ ರಸ್ತೆ, ಚಳ್ಳಕೆರೆ-577522 ಹಾಗೂ ದೂರವಾಣಿ ಸಂಖ್ಯೆ 7625008641, 7019066755 ಗೆ ಸಂಪರ್ಕಿಸಬಹುದು ಎಂದು ಚಳ್ಳಕೆರೆ ಜಿಟಿಟಿಸಿ ಪ್ರಾಂಶುಪಾಲರು ತಿಳಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *